ಮಹಾಲಿಂಗಪುರ: ಲಯನ್ಸ್ ಕ್ಲಬ್ ಆಫ್ ಮಹಾಲಿಂಗಪುರ್ ಗ್ರೀನ್ ಬೇಸಿನ್ ವತಿಯಿಂದ ಲಯನ್ಸ್ ಜನುಮದ ಜೋಡಿ ಕಾರ್ಯಕ್ರಮ ಶನಿವಾರ ಸಂಜೆ ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ನೆರವೇರಿತು.
೨೦೦ಕ್ಕೂ ಅಧಿಕ ಜೋಡಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಈರಣ್ಣ ನಕಾತಿ ದಂಪತಿಗಳು ಲಯನ್ಸ್ ಜನುಮದ ಜೋಡಿ ಪ್ರಶಸ್ತಿಯೊಂದಿಗೆ ದೇಸಾಯಿ ಮೋಟರ್ಸ್ ಪ್ರಾಯೋಜಕತ್ವದ ಟನ್ವಲ್ ಎಲೆಕ್ಟ್ರಿಕ್ ಸ್ಕೂಟಿ ತಮ್ಮದಾಗಿಸಿಕೊಂಡರು, ದ್ವಿತೀಯ ಬಹುಮಾನ ಪಡೆದ ಶ್ರೀನಿವಾಸ ಗುಂಡಾ ದಂಪತಿಗಳು ಲಯನ್ಸ್ ಭಲೆ ಜೋಡಿ ಪ್ರಶಸ್ತಿಯೊಂದಿಗೆ ಚಿಂತಾಮಣಿ ಅಪ್ಲೈಯನ್ಸಸ್ ಪ್ರಾಯೋಜಕತ್ವದ ಡಬಲ್ ಡೋರ್ ಫ್ರಿಡ್ಜ್ ಹಾಗೂ ತೃತೀಯ ಸ್ಥಾನ ಪಡೆದ ಹನುಮಂತಗೌಡ ಪಾಟೀಲ ದಂಪತಿಗಳು ಲಯನ್ಸ್ ಅಪೂರ್ವ ಜೋಡಿ ಪ್ರಶಸ್ತಿಯೊಂದಿಗೆ ಅಕ್ವಾಗೋಲ್ಡ್ ವಾಟರ್ ಫಿಲ್ಟರ್ ನ ಕರೆಪ್ಪ ಮಾದಪ್ಪನವರ ಪ್ರಯೋಜಕತ್ವದ ವಾಟರ್ ಫಿಲ್ಟರ್, ಚತುರ್ಥ ಸ್ಥಾನ ಪಡೆದ ಮೂಡಲಗಿಯ ವಿಶಾಲ ಶೀಲವಂತ ದಂಪತಿಗಳು ಪ್ರೀತಿ ಹೋಂ ಅಪ್ಲೈನ್ಸಸ್ ಪ್ರಾಯೋಜಕತ್ವದ ಮಿಕ್ಸರ್ ಗ್ರೈಂಡರ್ ತಮ್ಮದಾಗಿಸಿಕೊಂಡರು.
ಖ್ಯಾತ ನಟ,ನಿರೂಪಕ ಮಾಸ್ಟರ್ ಆನಂದ ಮತ್ತು ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ಸ್ಪರ್ಧಾಳು ದಂಪತಿಗಳಿಗಾಗಿ ವಿಶೇ? ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರನ್ನು ಆಯ್ಕೆ ಮಾಡಿದರು. ಮಾಸ್ಟರ್ ಆನಂದ ಅವರ ಪುತ್ರಿ ವಂಶಿಕಾ, ಮನು ಮಹಾಲಿಂಗಪುರ, ಶ್ರೀಗೋಕಾಕ ಸಂಗೀತ ಸಂಜೆ ನಡೆಸಿಕೊಟ್ಟರು.
ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಲಯನ್ಸ್ ಕ್ಲಬ್ ವತಿಯಿಂದ ವಿಶೇ? ಪ್ರಶಸ್ತಿ ನೀಡಲಾಯಿತು. ವೈದ್ಯಕೀಯ ರಂಗದಲ್ಲಿನ ಸೇವೆಗಾಗಿ ವೈದ್ಯ ಡಾ.ವಿಜಯ ಹಂಚಿನಾಳಗೆ ಲಯನ್ಸ್ ಶ್ರೇ? ಜೀವಮಾನ ಸಾಧನೆ ಪ್ರಶಸ್ತಿ, ಕಾಂಟ್ರಾಕ್ಟರ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸ್ಥಳೀಯ ಸುನಿಲ ಕಡಪಟ್ಟಿಗೆ ಲಯನ್ಸ್ ಶ್ರೇ? ಗಾಯಕಯೋಗಿ ಪ್ರಶಸ್ತಿ, ಜಮಖಂಡಿಯ ರಾಜಶೇಖರ ವಾರದಗೆ ಲಯನ್ಸ್ ಶ್ರೇ? ಯುವರತ್ನ ಪ್ರಶಸ್ತಿ ಹಾಗೂ ಶ್ರೇ? ಸಮಾಜ ಸೇವೆಗಾಗಿ ಸ್ಥಳೀಯ ಚನ್ನಬಸು ಹುರಕಡ್ಲಿಗೆ ಲಯನ್ಸ್ ಶ್ರೇ? ಸಮಾಜ ಸೇವಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಂತರಾಷ್ಟ್ರೀಯ ಸಂಸ್ಥೆಗಳ ಒಕ್ಕೂಟ ೩೧೭ ಬಿ ಡಿಸ್ಟ್ರಿಕ್ಟ್ ಗವರ್ನರ್ ಪಿಎಂಜೆಎಫ್ ಲ.ಜೈ ಅಮೋಲ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು, ಮತ್ತೋರ್ವ ಡಿಸ್ಟ್ರಿಕ್ಟ್ ಗವರ್ನರ್ ಪಿಎಂಜೆಎಫ್ ಲ.ಕೀರ್ತಿ ನಾಯಕ್ ಮಾತನಾಡಿದರು, ಲಯನ್ಸ್ ಕ್ಲಬ್ ಸ್ಥಳೀಯ ಘಟಕದ ಅಧ್ಯಕ್ಷ ಸಿದ್ದಲಿಂಗೇಶ್ವರ ನಕಾತಿ ಸ್ವಾಗತಿಸಿದರು, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು. ಕಾರ್ಯಕ್ರಮದ ಸಂಘಟನಾ ಅಧ್ಯಕ್ಷ ಸೋಮಶೇಖರ ಸಂಶಿ,ಕಾರ್ಯದರ್ಶಿ ವಿದ್ಯಾ ದಿನ್ನಿಮನಿ,ಖಜಾಂಚಿ ಪ್ರಶಾಂತ ಅಂಗಡಿ ಮತ್ತು ಲಯನ್ಸ್ ಕ್ಲಬ್ ಸದಸ್ಯರು ಇದ್ದರು.


