ಲಿಂಗರಾಜ ಕಲ್ಯಾಣ ಮಂಟಪವನ್ನು ದುರಸ್ತಿಗೆ ಆಗ್ರಹ

Ravi Talawar
ಲಿಂಗರಾಜ ಕಲ್ಯಾಣ ಮಂಟಪವನ್ನು ದುರಸ್ತಿಗೆ ಆಗ್ರಹ
WhatsApp Group Join Now
Telegram Group Join Now

ಶಿರಸಂಗಿ ಗ್ರಾಮದ ಲಿಂಗರಾಜ ಕಲ್ಯಾಣ ಮಂಟಪವನ್ನು ದುರಸ್ತಿ ಮಾಡಬೇಕೆಂದು  ಸಮಾಜಸೇವಕರಾದ ಬಸವರಾಜ ಕಲ್ಲಪ್ಪ ಕಟಕೋಳ, ಪ್ರಶಾಂತ ಶಿವಪ್ಪ ಅಂಗಡಿ.ಅವರು ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ ಇವರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲೆ   ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಹೊಸೂರು ಓಣಿಯಲ್ಲಿ ಲಿಂಗರಾಜ ಕಲ್ಯಾಣ ಮಂಟಪ ಇದ್ದು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸುಮಾರು 15 ವರ್ಷ ಹಿಂದೆನೇ ಈ ಕಲ್ಯಾಣ ಮಂಟಪವನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿರ್ಮಾಣವಾಗಿದ್ದು ಇದುವರೆಗೂ ಸಾರ್ವಜನಿಕರಿಗೆ ಅನುಕೂಲವಾಗದೆ ಹಾಳು ಬಿದ್ದ ಕಲ್ಯಾಣ ಮಂಟಪವಾಗಿದ್ದು ಕಲ್ಯಾಣ ಮಂಟಪದ ಕಿಟಕಿ ಹಾಗೂ ಬಾಗಿಲುಗಳು ಒಡೆದು ಹೋಗಿವೆ.ಮೇಲ್ಕಾವಣಿ ಕೂಡ ದುರಸ್ತಿಯಲ್ಲಿದೆ ಹಾಗೂ ಈ ಕಲ್ಯಾಣ ಮಂಟಪಕ್ಕೆ ಸರಿಯಾಗಿ ರಸ್ತೆ ಕೂಡ ಇಲ್ಲ ಆದಷ್ಟು ಬೇಗ ಶಿರಸಂಗಿ ಲಿಂಗರಾಜ ಟ್ರಸ್ಟಿನ ಅಧ್ಯಕ್ಷರಾದ ಬೆಳಗಾವಿ ಜಿಲ್ಲಾಧಿಕಾರಿಗಳು ಹಾಗೂ ಸವದತ್ತಿ ತಹಶೀಲ್ದಾರ್ ಅವರು ಇದರ ಕಡೆ ಗಮನ ಹರಿಸಿ ಶಿರಸಂಗಿ ಗ್ರಾಮದ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು  ಸಮಾಜಸೇವಕರಾದ ಬಸವರಾಜ ಕಲ್ಲಪ್ಪ ಕಟಕೋಳ ವಕೀಲರು, ಮತ್ತು ಪ್ರಶಾಂತ ಶಿವಪ್ಪ ಅಂಗಡಿ ಅವರು  ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗನ್ನವರ ಇವರಿಗೆ ಮನವಿ ಸಲ್ಲಿಸಿದರು.

WhatsApp Group Join Now
Telegram Group Join Now
Share This Article