ಸಾಧಕರ ಜೀವನ ಮೌಲ್ಯಗಳು ವಿದ್ಯಾರ್ಥಿಗಳಿಗೆ ಅನುಕೂಲ: ಬಿ.ಎಸ್.ಮುಧೋಳೆ

Ravi Talawar
ಸಾಧಕರ ಜೀವನ ಮೌಲ್ಯಗಳು ವಿದ್ಯಾರ್ಥಿಗಳಿಗೆ ಅನುಕೂಲ: ಬಿ.ಎಸ್.ಮುಧೋಳೆ
WhatsApp Group Join Now
Telegram Group Join Now

ರಾಯಬಾಗ: ಸಾಧಕರ ಜೀವನ ಮೌಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಬೇಕೆಂದು ಬಾವನಸೌಂದತ್ತಿ ಶಿವಶಕ್ತಿ ಶುಗರ್ಸ್ ಲಿಮಿಟೆಡ್ ಎಚ್ ಆರ್ ಮ್ಯಾನೇಜರ್ ಬಿ.ಎಸ್.ಮುಧೋಳೆ ಹೇಳಿದರು.

ಇತ್ತಿಚೆಗೆ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಮಲಗೌಡ ಪಾಟೀಲ್ ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬಿ.ಕಾಂ ಅಂತಿಮ ವ?ದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣ ಮಹತ್ವವನ್ನು ಅರಿತುಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕೆಂದರು.
ಪ್ರಾಚಾರ್ಯ ಡಾ.ಆರ್.ಕೆ.ಪಾಟೀಲ ಅಧ್ಯಕ್ಷತೆಯನ್ನು ವಹಿಸಿದ್ದರು.

ಸ್ಥಾನಿಕ ಮಂಡಳಿಯ ಸದಸ್ಯರಾದ ಡಿ.ಎಲ್.ಮಿರ್ಜಿ, ವಿ.ಪಿ.ಪಾಟೀಲ, ಎಂ.ಎಂ.ನಿಶಾನ್ದಾರ್, ಎಲ್. ಬಿ.ಪಾಟೀಲ್ ಮತ್ತು ಬಿ.ಸಿ.ಎ ಸಂಯೋಜಕ ಎಸ್.ಎಸ್.ಹುಲಿಕೊಪ್ಪೆ ಹಾಗೂ ಬಿ.ಕಾಂ ವಿಭಾಗದ ಸಂಯೋಜಕ ಎಂ.ಎಸ್.ಹಂಜೆ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.

ವಾರ್ಷಿಕ ಕ್ರೀಡಾಕೂಟದಲ್ಲಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.  ತೃಪ್ತಿ ದೇಶಪಾಂಡೆ ಸ್ವಾಗತಿಸಿದರು, ಸುಶ್ಮಿತಾ ಕುಂಬಾರ್ ನಿರೂಪಿಸಿದರು, ಶ್ರೇಯಾ ಕುಲಕರ್ಣಿ ವಂದಿಸಿದರು.

WhatsApp Group Join Now
Telegram Group Join Now
Share This Article