ರಾಯಬಾಗ: ಜೀವನವೆಂಬುದು ಕೇವಲ ಸಾಂಸಾರಿಕ ಸುಖಕ್ಕಾಗಿ ಮೀಸಲಾಗದೆ, ಅದು ಈಶ್ವರ ಪ್ರಾಪ್ತಿಗಾಗಿ ಕೂಡ ಮೀಸಲಾಗಿರಬೇಕು ಎಂದು ಅಮೃತಾಶ್ರಮ ಸ್ವಾಮಿ ಮಹಾರಾಜರು ಹೇಳಿದರು. ಶನಿವಾರ ಪಟ್ಟಣದ ವಿಠಲ ಮಂದಿರದಲ್ಲಿ ಹಮ್ಮಿಕೊಂಡಿದ್ದ 105ನೇ ಜ್ಞಾನೇಶ್ವರಿ ನಾಮೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂತ ಜ್ಞಾನೇಶ್ವರ, ಸಂತ ತುಕಾರಾಮ ಹಾಗೂ ಸಂತ ಏಕನಾಥರ ಜೀವನದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ. ಇಂದಿನ ಕಾಲದಲ್ಲಿ ಮನುಷ್ಯನು ಹಣ, ಸ್ಥಾನಮಾನ ಹಾಗೂ ಖ್ಯಾತಿ ಗಳಿಸಿದರೂ, ಇತರರ ಸೇವೆಗೆ ಮುಂದೆ ಬರದಿದ್ದರೆ ಅವನ ಜೀವನ ಅಪೂರ್ಣ ಎಂದು ಹೇಳಿದರು.
ಸಮಾರಂಭದ ಅಂತ್ಯದಲ್ಲಿ ಸಾಮೂಹಿಕ ಆರತಿ ನೆರವೇರಿಸಲಾಯಿತು. ನಂತರ ಎಲ್ಲ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು. ಜ್ಞಾನೇಶ್ವರಿ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತರು ಇದ್ದರು.