ಹಳ್ಳೂರ 06. ಪ್ರಪಂಚ ಮಾಡಿ ಪಾರಮಾರ್ಥ ಮಾಡಿದರೆ ಜೀವನವು ಸಾರ್ಥಕತೆಯನ್ನು ಪಡೆಯುತ್ತದೆ ಎಂದು ಪುಂಡಲೀಕ ಮಹಾರಾಜರು ಹೇಳಿದರು.
ಅವರು ಮರಾಕುಡಿ ಗ್ರಾಮದ ದುಂಡಪ್ಪ ಬಡಿಗೇರ ಅವರ ತೋಟದಲ್ಲಿ ಆಷಾಡ ಏಕಾದಶಿ ಪ್ರಯುಕ್ತ ಪಂಡರಪೂರಕ್ಕೆ ಶ್ರೀ ಕ್ಷೇತ್ರ ಉಳವಿಯ ಚೆನ್ನ ಬಸವೇಶ್ವರ ದೇವಸ್ಥಾನದಿಂದ ಪಂಡರಪೂರಕ್ಕೆ ಹೊರಟ ಪಾದಯಾತ್ರೆ ಮುಕ್ಕಾಂ ಸಮಯದಲ್ಲಿ ಮಾತನಾಡಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಪಾಪ ನಾಶವಾಗುತ್ತದೆ. ಸಾವಿರಾರು ನದಿಗಳು ಹೋಗಿ ಸಮುದ್ರ ಸೇರುತ್ತದೆ.
ಗಂಗಾ ಮಾತೆ ಭೂಮಿ ತಾಯಿ ದನ್ಯಳು. ಭಾರತ ದೇಶ ಪವಿತ್ರ ದೇಶ ಜಗತ್ತಿಗೆ ಮಾತೃ ಸ್ಥಾನ ಪಡೆದಿದೆ. ನಮ್ಮ ದೇಶದಲ್ಲಿ ದಾನ ಧರ್ಮ ಪುಣ್ಯದ ಕಾರ್ಯ ಭಾರತದಲ್ಲಿ ನಡೆಯುತ್ತವೆ. ಬರುವಾಗ ಏನೂ ತಂದಿಲ್ಲ ಹೋಗುವಾಗ ಏನೂ ಒಯ್ಯುದಿಲ್ಲ ಇರುವಾಗ ಸಾದು ಸಂತರ ದರ್ಶನ,ಸಂಗ ಮಾಡಿ ದಾನ ಧರ್ಮ ಮಾಡಿ ಪುಣ್ಯ ಪಡೆದುಕೊಳ್ಳಬೇಕು.
ದಯಾ ಗುಣವಿದ್ದಲ್ಲಿ ದೇವರ ಆಶೀರ್ವಾದ ಸದಾ ಕಾಲ ಇರುತ್ತದೆ.ದಯವಿಲ್ಲದವರು ಕಾಶಿಯಂಥ ಪುಣ್ಯಕ್ಷೇತ್ರಕ್ಕೆ ಹೋದರೆ ಪ್ರಯೋಜನವಿಲ್ಲ. ಪರಮಾತ್ಮ ಅನೇಕ ಅವತಾರಗಳಿವೆ. ಪುಂಡಲಿಕ ಭಕ್ತಿಗೆ ಮೆಚ್ಚಿ ಪಂಡರಪೂರದಲ್ಲಿ ಪಾಂಡುರಂಗ ವಿಠಲ ನೆಲೆಸಿದ್ದಾನೆ.ಸಂತರು ತಮ್ಮ ನಿಯಮಗಳನ್ನು ಗಾಳಿಗೆ ತೂರದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈಸಮಯದಲ್ಲಿ ಸಂತರಾದ ನಾಗಪ್ಪ ಬಿಸಿರೋಟ್ಟಿ. ಭೀಮಶಿ ದುರದುಂಡಿ. ಹವಾಲ್ದಾರ ವಿಠ್ಠಲ ಹುಲಿಕಟ್ಟಿ. ರಮೇಶ ಪಾಟಿಲ. ಮಲ್ಲಯ್ಯ ಹೀರೆಮಠ. ಶಂಕರಯ್ಯ ಹೀರೆಮಠ.ಅಡಿವೆಪ್ಪ ಪಾಲಬಾಂವಿ.ಯಮನಪ್ಪ ನಿಡೋಣಿ. ಲಕ್ಷ್ಮಣ ಬಡಿಗೇರ.ಲಕ್ಷ್ಮಣ ಕೂಡಲಗಿ.ಭೀಮಪ್ಪ ಹೊಸಟ್ಟಿ.ದುಂಡಪ್ಪ ಕತ್ತಿ.ಮುರಿಗೆಪ್ಪ ಮಾಲಗಾರ.ಸಾಹಿಲ ಸುತಾರ.ಲಕ್ಕಪ್ಪ ಸಪ್ತಸಾಗರ..ಸೇರಿದಂತೆ ಅನೇಕರಿದ್ದು ದಿಂಡಿ ಪಾದಯಾತ್ರೆಯಲ್ಲಿ 250 ಸಂತರಿದ್ದರು.