ಮಾಯೆಯ ಬೆನ್ನುಹತ್ತಿದರೆ ಬದುಕು ನರಕ: ಡಾ.ಕೊಕ್ಕನವರ

Pratibha Boi
ಮಾಯೆಯ ಬೆನ್ನುಹತ್ತಿದರೆ ಬದುಕು ನರಕ: ಡಾ.ಕೊಕ್ಕನವರ
??????????????
WhatsApp Group Join Now
Telegram Group Join Now
ಜಮಖಂಡಿ: ಕಣ್ಣಿಗೆಕಾಣುವುದು ನಿಜವಾದಜಗತ್ತಲ್ಲ. ಅದು ಮಾಯಾಲೋಕ. ಒಳಗೆಆಳಕ್ಕಿಳಿದು ನೋಡಿದರೆಜಗತ್ತಿನ ನಿಜವಾದದರ್ಶನಆಗುತ್ತದೆ. ಹಾಗೆಯೆ ಮಾಯೆಯ ಬೆನ್ನುಹತ್ತಿ ನಿಜವಾದ ಬದುಕನ್ನು ನರಕ ಮಾಡಿಕೊಂಡುಎಲ್ಲಿಯೂ ಸಲ್ಲದಂತಾಗಬಾರದುಎAದು ಸರ್ಕಾರಿ ಪ್ರಥಮದರ್ಜೆ ಮಹಿಳಾಕಾಲೇಜಿನ ಪ್ರಾಧ್ಯಾಪಕಡಾ.ವೈ.ವೈ. ಕೊಕ್ಕನವರಹೇಳಿದರು.
ಶ್ರಾವಣ ಮಾಸದ ನಿಮಿತ್ತಓಲೆಮಠದಆಶ್ರಯದಲ್ಲಿಜರುಗುತ್ತಿರುವಓಣಿಗೊಂದು ದಿನ ವಚನ ಶ್ರಾವಣಅಂಗವಾಗಿಇಲ್ಲಿನನAದಿಕೇಶ್ವರಕಲ್ಯಾಣ ಮಂಟಪದಲ್ಲಿಶುಕ್ರವಾರ ಸಂಜೆ ನಡೆದಹದಿನೈದನೆ ದಿನದಕಾರ್ಯಕ್ರಮದ ಮುಖ್ಯಅತಿಥಿಯಾಗಿಅವರು ‘ಇಲ್ಲಿ ಸಲ್ಲುವವರುಅಲ್ಲಿಯೂ ಸಲ್ಲುತ್ತಾರೆÀ’ ಎಂಬ ವಿಷಯಕುರಿತು ವಿಶೇಷಉಪನ್ಯಾಸ ನೀಡಿದರು.
ಮತ್ಸರ, ದ್ವೇಷ, ಆಕ್ರೋಶ, ಆಸೆ, ರೋಷಗಳನ್ನುಅಳಿಯಬೇಕು. ಸಂಗ್ರಹ ಬುದ್ದಿಯನ್ನುತ್ಯಜಿಸಬೇಕು. ಕಲುಷಿತ ಮನಸ್ಸುಗಳಿಗೆ ಸಾಂತ್ವನ ಹೇಳುವಂತ ಬಸವಾದಿ ಶಿವಶರಣರ ವಚನಗಳನ್ನು ಪಚನ ಮಾಡಿಕೊಂಡರೆ ಬದುಕು ಸುಂದರವಾಗಿಎಲ್ಲೆಡೆಯೂ, ಎಲ್ಲರಿಗೂ ಸಲ್ಲುವಂತಾಗಬಹುದುಎAದರು.
ಕಲ್ಯಾಣ ಮಠದಗೌರಿಶಂಕರಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮನೆಗೆದ್ದು ಮಾರುಗೆಲ್ಲಬೇಕು. ಅದಕ್ಕಾಗಿಇಂದ್ರಿಯಗಳನ್ನು ನಿಯಂತ್ರಣದಲ್ಲಿಇಟ್ಟುಕೊAಡು ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಬದುಕಬೇಕು. ಪ್ರಸಂಗ ಬಂದರೆಆತ್ಮಾರ್ಪಣ ಮಾಡಲುಸಿದ್ಧರಿರಬೇಕು. ಸತ್ಕರ್ಮಗಳನ್ನು ಮಾಡಿಎಲ್ಲರೂ ನೆನಪಿಡುವಂತ ಸಾಧನೆ ಮಾಡಬೇಕು. ಅಂದಾಗ ಮಾತ್ರ ನಾವುಎಲ್ಲಿಯೂಸಲ್ಲಲು ಸಾಧ್ಯವಾಗುತ್ತದೆಎಂದುಆಶೀರ್ವಚನ ನೀಡಿದರು.
ಓಲೆಮಠದಆನಂದದೇವರುಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಸ್.ವೈ. ಪಾಟೀಲ ಸ್ವಾಗತಿಸಿದರು.ಸುನಿತಾಜಂಬಗಿ ಹಾಗೂ ಸಂಗಡಿಗರು ಪ್ರಾರ್ಥನೆಗೀತೆ ಹಾಡಿದರು. ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು. ಎಸ್.ಎಚ್. ಮಠಪತಿ ನಿರೂಪಿಸಿದರು.
WhatsApp Group Join Now
Telegram Group Join Now
Share This Article