ಬಳ್ಳಾರಿ ಮೇ 24. ಜಂಟಿ ಕೃಷಿ ನಿರ್ದೇಶರು , ಬಳ್ಳಾರಿ ಇವರ ಅಧ್ಯಕ್ಷತೆಯಲ್ಲಿ ತಾಲೂಕು ಕೃಷಿ ಮಾರಾಟಗಾರರ ಸಭೆಯನ್ನು ದಿನಾಂಕ: 23.05.2025 ರಂದು ಏರ್ಪಡಿಸಿದ್ದು ತಾಲೂಕಿನ ಕೃಷಿ ಪರಿಕರ ಮಾರಾಟಗಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರು, ಬಳ್ಳಾರಿ ಹಾಗೂ ಸಹಾಯಕ ಕೃಷಿ ನಿರ್ದೇಶಕರು ಜಾರಿದಳ ಇವರು ಮಾತನಾಡಿ ಕೃಷಿ ಪರಿಕರಗಳ ಮಾರಾಟ ಕುರಿತಂತೆ ನೀತಿ ನಿಬಂಧಗಳನ್ನು ಮಾರಾಟಗಾರರಿಗೆ ತಿಳಿಸಿದರು. ಮುಂದುವರೆದು ಪರವಾನಿಗೆ ಇಲ್ಲದೆ ಯಾವುದೇ ಪರಿಕರಗಳನ್ನು ಮಾರಾಟ ಮಾಡಿದಲ್ಲಿ ಸೂಕ್ತ ಕಠಿಣ ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಮುಖ್ಯವಾಗಿ ಪರವಾನಿಗೆ ಇಲ್ಲದೆ ಜೈವಿಕ ಉತ್ಪನ್ನಗಳನ್ನು ಮಾರಾಟ ಮಾಡಿದಲ್ಲಿ ಪರವಾನಿಗೆಯನ್ನು ರದ್ದು ಮಾಡುವುದಾಗಿ ಕಟ್ಟುನಿಟ್ಟಾಗಿ ತಿಳಿಸಿದರು . ಮಾರಾಟ ಮಳಿಗೆಯೂ ಕೇವಲ ಪರಿಕರಗಳ ಮಾರಾಟವಲ್ಲದೆ ರೈತರಿಗೆ ಕೃಷಿ ಮಾಹಿತಿ ಕೇಂದ್ರವಾಗಬೇಕು ಎಂದು ತಿಳಿಸಿದರು.
ಸದರಿ ಸಭೆಯಲ್ಲಿ ಸೋಮಸುಂದರ್ (ಜಂಟಿ ಕೃಷಿ ನಿರ್ದೇಶಕರು ಬಳ್ಳಾರಿ), ದಯಾನಂದ್ ಎಂ , (ಸಹಾಯಕ ಕೃಷಿ ನಿರ್ದೇಶಕರು, ಬಳ್ಳಾರಿ) , ಮುಜ್ಬಿರ್ ರೆಹ್ಮಾನ್ (ಸಹಾಯಕ ಕೃಷಿ ನಿರ್ದೇಶಕರು, ಜಾರಿದಳ) , ಮೊಹಮ್ಮದ್ ರಫಿ (ಸಹಾಯಕ ಕೃಷಿ ನಿರ್ದೇಶಕರು, ವಿಷಯ ತಜ್ಞರು) , ಶಿವರಾಂ ರೆಡ್ಡಿ (ತಾಲೂಕು ಕೃಷಿ ಮಾರಾಟಗಾರರ ಅಧ್ಯಕ್ಷರು) ಹಾಗೂ ಇತರೆ ಕೃಷಿ ಪರಿಕರ ಮಾರಾಟಗಾರರು ಉಪಸ್ಥಿತರಿದ್ದರು.