ಮಹಿಳೆಯರು ಕಿತ್ತೂರು ಚನ್ನಮ್ಮನ ಆದರ್ಶ ಬೆಳೆಸಿಕೊಳ್ಳಲಿ: ಸಂಸದೆ ಪ್ರೀಯಾಂಕಾ ಜಾರಕಿಹೊಳಿ

Ravi Talawar
ಮಹಿಳೆಯರು ಕಿತ್ತೂರು ಚನ್ನಮ್ಮನ ಆದರ್ಶ ಬೆಳೆಸಿಕೊಳ್ಳಲಿ: ಸಂಸದೆ ಪ್ರೀಯಾಂಕಾ ಜಾರಕಿಹೊಳಿ
WhatsApp Group Join Now
Telegram Group Join Now

ನೇಸರಗಿ : ಭಾರತ ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿಹೊತ್ತಿಸಿದ ಮೊದಲ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಅದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದ್ದು ಬರುವ ಕಿತ್ತೂರು ರಾಣಿ ಚೆನ್ನಮ್ಮನ ೨೦೦ವರ್ಷದ ವಿಜಯೋತ್ಸವಕ್ಕೆ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನ ತಂದು ಹೆಚ್ಚಿನ ಮೆರಗು ತರಲು ಪ್ರಯತ್ನಿಸುತ್ತೇನೆ ಎಂದು ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ ಹೇಳಿದರು.

ಅವರು ಸಮೀಪದ    ನೇಗಿನಹಾಳ ಗ್ರಾಮದ ಶಾಸಕ ಬಾಬಾಸಾಹೇಬ ಪಾಟೀಲ ಅವರ ನಿವಾಸಕ್ಕೆ ಬೇಟಿ ನೀಡಿ ಸತ್ಕಾರ ಸ್ವೀಕರಸಿ ಮಾತನಾಡಿದ ಅವರು ನಮ್ಮ ತಂದೆಯ ಆತ್ಮೀಯರಾದ ಕಿತ್ತೂರು ಶಾಸಕ ದಂಪತಿಗಳು ನನ್ನ ಲೋಕಸಭಾ ಚುನಾವಣೆಯಲ್ಲಿ ಹಲವಾರು ಕಡೆಗಳಲ್ಲಿ ಆಗಮಿಸಿ ನನ್ನ ಗೆಲವು ಬಹಳಷ್ಟು ಶ್ರಮಿಸಿದ್ದಾರೆ.

ಸಹೋದರಿ ರೋಹಿಣಿ ಪಾಟೀಲ ಅವರ ನನ್ನ ಮೇಲೆ ಹೆಚ್ಚಿನ ಪ್ರೀತಿ-ವಾತ್ಸಲ್ಯ ತೋರಿಸುತ್ತಾ ಬಂದಿದ್ದು ನಾನೆಂದು ಅವರಿಗೆ ಚಿರ ಋಣಿಯಾಗಿರುವೆ. ಮುಂಬರುವ ದಿನಗಳಲ್ಲಿ ಕಿತ್ತೂರು ಮತಕ್ಷೇತ್ರ ಹಾಗೂ ಕಿತ್ತೂರು ತಾಲೂಕಿನ ಸಮಗ್ರ ಅಭಿವೃದ್ಧಿಗೆ ನಾನು ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಕಾಂಗ್ರೇಸ್ ಮುಖಂಡರಾದ ಮುದಕಪ್ಪ ಮರಡಿ, ಚನ್ನಗೌಡ ಪಾಟೀಲ, ಶಿವಯೋಗಿ ಪಾಟೀಲ, ಶಿವಯೋಗಿ ದೊಡಮನಿ, ಶಿವಾನಂದ ದಿವಾಣದ, ಮಡಿವಾಳಪ್ಪ ಅಸುಂಡಿ, ಶಿವಾನಂದ ಮಾಳಗಿ, ಶಿವಪ್ಪ ಕುಂಕೂರ, ಸುಭಾಷ ರುಮೋಜಿ, ಶಿವಾಜಿ ಮುತ್ತಗಿ, ಧರ್ಮರಾಜ ತಪರಿ, ಚಂದ್ರು ಬೆಳಗಾವಿ, ಈರಣ್ಣಾ ಉಳವಿ, ಮಲ್ಲಿಕಾರ್ಜುನ ತೋರಣಗಟ್ಟಿ, ಮಂಜುನಾಥ ಹಾರುಗೊಪ್ಪ, ಮಂಜುನಾಥ ಕೋಟಗಿ, ಕವಿತಾ ಬೆಳಗಾವಿ, ಮಂಜುಳಾ ಮರಿತಮ್ಮನವರ, ದೀಪಾ ಮರಕುಂಬಿ, ಸುಧಾ ಬೆನಕಟ್ಟಿ, ಜೋತಿ ಹಲಕಿ, ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದರು.

WhatsApp Group Join Now
Telegram Group Join Now
Share This Article