ರೈತರ ಬೆಳವಣಿಗೆ ನಾವು ನೀವೆಲ್ಲರೂ ಹೋರಾಟ ಮಾಡೋಣ:ಚೂನಪ್ಪ ಪೂಜೇರಿ 

Pratibha Boi
ರೈತರ ಬೆಳವಣಿಗೆ ನಾವು ನೀವೆಲ್ಲರೂ ಹೋರಾಟ ಮಾಡೋಣ:ಚೂನಪ್ಪ ಪೂಜೇರಿ 
WhatsApp Group Join Now
Telegram Group Join Now
ಘಟಪ್ರಭಾ.ಗುರ್ಲಾಪೂರ ಗ್ರಾಮದಲ್ಲಿ ನಡೆದ ಕಬ್ಬು ಬೆಳೆಗಾರರ ಹೋರಾಟದಲ್ಲಿ  ಘಟಪ್ರಭಾ ಭಾಗದಿಂದ ಅನೇಕ ರೈತರು, ರೈತ ಮಹಿಳೆಯರು, ತನು, ಮನ, ಧನದಿಂದ ಸಹಾಯ ಸಹಕಾರ ನೀಡಿ ಅದರಲ್ಲಿ ನಮ್ಮ ತಾಯಂದಿರು ರೊಟ್ಟಿ ಬುಟ್ಟಿ ಹೊತ್ತು ಹೋರಾಟ ಮಾಡುವ ಅನ್ನಧಾತರಿಗೆ ಅಣ್ಣ ನೀಡಿದ್ದಾರೆ. ಈ ಕಬ್ಬು ಬೆಳೆಗಾರರ ಹೋರಾಟಕ್ಕೆ ರೈತ ಸಮುದಾಯ ನಮಗೆ ಪ್ರೇರಣೆ ನೀಡಿದೆ. ಅದೇ ರೀತಿ ಇಂದು ಘಟಪ್ರಭಾ, ಮಲ್ಲಾಪೂರ ಪಿ ಜಿ  ಭಾಗದ ನೂರಾರು ರೈತರು ರೈತ ಧೀಕ್ಷೆ ತೆಗೆದುಕೊಂಡಿರುವದು ಹೆಮ್ಮೆಯ ವಿಷಯ, ರೈತ ಹೋರಾಟ ಎಂದರೆ ಇದು ಹಗುರವಾದ ಮಾತಲ್ಲ, ಇಲ್ಲಿ ಊಟ, ನಿದ್ರೆ ಇಲ್ಲದ ಹೋರಾಟ ಮತ್ತು     ರೈತರ ಯಾವುದೇ ಸಮಸ್ಯ, ತಕರಾರು, ಸರ್ಕಾರ ರೈತರ ವಿರೋಧಿ ಧೋರಣೆ ತೋರಿದರೆ ಸರ್ಕಾರದ ವಿರುದ್ಧ ನಮ್ಮ ಹಕ್ಕಿಗಾಗಿ ನಾವು ನೀವೆಲ್ಲರೂ ಮುಂದೆ ಬಂದು ಹೋರಾಟ ಮಾಡಲು ಸದಾ ಸಿದ್ದರಿರಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಚೂನಪ್ಪ ಪೂಜೇರಿ ಹೇಳಿದರು.
    ಅವರು   ಇಲ್ಲಿನ  ಶ್ರೀ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ  ಹಸಿರು ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪಾ ಪೂಜೇರಿ ಅವರ ಸತ್ಕಾರ, ಹಸಿರು ಸೇನೆ ಗ್ರಾಮ ಘಟಕದ ಉದ್ಘಾಟನೆ ಮತ್ತು ನೂರು ಯುವ ರೈತರಿಗೆ ಶಾಲು ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.
       ಈ  ಕಾರ್ಯಕ್ರಮದಲ್ಲಿ ರಾಮಣ್ಣ ಹುಕ್ಕೇರಿ. ಸುರೇಶ ಪಾಟೀಲ,  ಗಂಗಾಧರ ಬಡಕುಂದ್ರಿ,ಮುತ್ತಣ್ಣ ಹತ್ತರವಾಟ, ರಮೇಶ ತುಕ್ಕಾನಟ್ಟಿ,ಶಿವಪುತ್ರ ಕೊಗನೂರ, ಅರವಿಂದ ಬಡಕುಂದ್ರಿ,ಕೆಂಪಣ್ಣ ಕಾಡದವರ,ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕುಮಾರ ಮರ್ದಿ, ಗೌರವ ಅಧ್ಯಕ್ಷ ಗೋಪಾಲ ಕುಕನೂರ, ಕುಮಾರ ಹುಕ್ಕೇರಿ, ಕೊಟ್ರೇಶ ಪಟ್ಟಣಶೆಟ್ಟಿ,ರಾಮಣ್ಣ ಕಮತ, ವೀರಭದ್ರ  ಕರೋಶಿ, ನಾಗರಾಜ್ ಹುಂಡೇಕರ, ಶ್ರೀಕಾಂತ್ ಮಹಾಜನ, ರಾಯಣ್ಣಾ ಸಂಗ್ರೋಜಿಕೊಪ್ಪ, ಮಲಗೌಡ  ದೊಡಬಸಣ್ಣವರ ಪ್ರಭುಲಿಂಗ ಅಂತರಗಂಗಿ,  ಶ್ರೀಕಾಂತ ಕುಲಕರ್ಣಿ, ಉದಯ ಹಿರೇಮಠ, ಕಲ್ಲಪ್ಪ ಕಾಡದವರ, ಉಮೇಶ ತುಕ್ಕಾನಟ್ಟಿ,, ಪ್ರೇಮಾ ಭಂಡಾರಿ,  ನವೀನ ತುಕ್ಕಾನಟ್ಟಿ,   ಪ್ರವೀಣ ತುಕ್ಕಾನಟ್ಟಿ, ಈರಪ್ಪ ಕಮತ, ಗೋಪಾಲ ಕುಕನೂರ, ಸಿದ್ದಪ್ಪ  ಹುಲ್ಲೋಳಿ, ವಾಸು ಪಂದ್ರೊಳ್ಳಿ,ಪಾಂಡು ಬಿರನಗಡ್ಡಿ, ಸಂಜು ಹವಣ್ಣವರ, ಮಲ್ಲು ತುಕ್ಕನಟ್ಟಿ, ಮಾರುತಿ ನಾಯ್ಕ, ಸಿದ್ರಾಮ ಪೂಜೇರಿ, ಪುಂಡಲೀಕ್ ನಿಡಸೊಸಿ, ಕಾಡಪ್ಪ ಕರೋಶಿ   ಹಾಗೂ ಪಾಮಲದಿನ್ನಿ ಬಡಿಗವಾಡ ಸಿಂಧಿಕುರಬೇಟ, ದುಪದಾಳ ಗ್ರಾಮಗಳ ರೈತ ಬಾಂದವರು. ಉರ ಹಿರಿಯರು. ಯುವಕರು. ಮಹಿಳೆಯರು.ಭಾಗವಹಿಸಿದ್ದರು ಕಾರ್ಯಕ್ರಮವನ್ನು ಶ್ರೀಮತಿ ಸವಿತಾ ಪಟ್ಟಣಶೆಟ್ಟಿ ನೆಡೆಸಿಕೊಟ್ಟರು.
WhatsApp Group Join Now
Telegram Group Join Now
Share This Article