ಯುವಕರು ಒಳ್ಳೆಯ ಮನಸ್ಸಿನಿಂದ ಸಮಾಜಸೇವಾ ಕಾರ್ಯ ಮಾಡಲಿ ಬಸವರಾಜ ಗುರಿಕಾರ

Ravi Talawar
ಯುವಕರು ಒಳ್ಳೆಯ ಮನಸ್ಸಿನಿಂದ ಸಮಾಜಸೇವಾ ಕಾರ್ಯ ಮಾಡಲಿ ಬಸವರಾಜ ಗುರಿಕಾರ
WhatsApp Group Join Now
Telegram Group Join Now
ಧಾರವಾಡ  : ಯುವಕರು ಇತ್ತೀಚಿನ ದಿನಗಳಲ್ಲಿ ಸಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಹಾದಿ ತಪ್ಪುತ್ತಿದ್ದು, ಸಮಾಜದ ಮೇಲೆ ಇದು ತುಂಬಾ ಕೆಟ್ಟ ದುಷ್ಪರಿಣಾಮ ಬೀರುತ್ತಿದೆ, ಯುವಕರು ಸಾಮಾಜಿಕ ಜಾಲತಾಣದ ಬಳಕೆಯನ್ನು ಕಡಿಮೆ ಮಾಡಿ,ಜನಪ್ರಿಯ ಜನಪರ, ಸಾಮಾಜ ಸೇವೆಗೆ ಮುಂದಾಗಬೇಕು ಎಂದು,ಅಖಿಲ ಭಾರತ ಶಿಕ್ಷಕರ ಫೆಡರೇಶನ್ ರಾಷ್ಟ್ರೀಯ ಅಧ್ಯಕ್ಷರಾದ ಬಸವರಾಜ ಗುರಿಕಾರ ಯುವಕರಿಗೆ ಕಿವಿಮಾತು ಹೇಳಿದರು,
ಅವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಡಾ, ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ, ಧಾರವಾಡದ ಅಕ್ಷರತಾಯಿ ಎಂದೇ ಖ್ಯಾತರಾದ ಶ್ರೀಮತಿ ಲೂಸಿ ಸಾಲ್ಡಾನರವರ, ಡಾ, ವೈ ಬಿ ಕಡಕೋಳ ಸಂಪಾದಕತ್ವದ ನಾ ಕಂಡ ಲೂಸಿ,ಪುಸ್ತಕ ಲೋಕಾರ್ಪಣೆ, ಶಿಕ್ಷಕರತ್ನ, ಶ್ರಮಿಕರತ್ನ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಹುಬ್ಬಳ್ಳಿಯ ಪವರ್ ಆಫ್ ಯುಥ್ಸ ಫೌಂಡೇಶನ್ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು, ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು
 ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಶಿಕ್ಷಕ ಸಾಹಿತಿ ಡಾ, ವಾಯ್ ಬಿ ಕಡಕೋಳ ಸವದತ್ತಿ ತಾಲೂಕಿನ ತಲ್ಲೂರಿನ ಸ್ವಾತಂತ್ರ್ಯ ಹೋರಾಟಗಾರ ತಲ್ಲೂರ ರಾಯನಗೌಡರ ಕುರಿತು ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ, ಲೂಸಿ ಅಮ್ಮನ ಇದುವರೆಗೂ 17 ಪುಸ್ತಕಗಳನ್ನು ಹೊರತರುವಲ್ಲಿ ಅವರ ಪ್ರಯತ್ನ ಅತ್ಯಂತ ಶ್ಲಾಘನೀಯೀ ಪುಸ್ತಕದ ಬೆನ್ನುಡಿ ಬರೆಯುವ ಅವಕಾಶ ನನಗೆ ಲಭಿಸಿದ್ದು ನನ್ನ ಪುಣ್ಯ ಎಂದರು, ಮುಖ್ಯ ಅತಿಥಿಯಾಗಿದ್ದ ವಿಜಯಪುರದ ಮಹಿಳಾ ಆಶಾಕಿರಣ ವಿಧವೆಯರು ಹಾಗೂ ಬಡ ಮಕ್ಕಳ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಮೀನಾಕ್ಷಿ ಉಟಗಿ,ಇಂದು ಮಹಿಳೆ ಅಬಲೆಯಲ್ಲ ಸಬಲೆ ಎಂಬುದು ಲೂಸಿ ಅಮ್ಮನಿಂದ ನಾವು ಕಂಡುಕೊಳ್ಳಬಹುದು, ಲೂಸಿ ಅಮ್ಮ ಸಮಾಜಕ್ಕೆ ಮಾದರಿ, ಸಾಧನೆಗೆ ಹಣ ಬೇಕಿಲ್ಲ, ನಾವು ಮಾಡುವ ಒಳ್ಳೆಯ ಕೆಲಸದಿಂದ ಸಮಾಜದಲ್ಲಿ ಹೆಸರು ಮಾಡಬಹುದುಎಂದರು
 ಧಾರವಾಡ ನಗರ ಬಿಇಒ ಅಶೋಕಕುಮಾರ ಸಿಂದಗಿ, ಸಮನ್ವಯಾಧಿಕಾರಿ ಮಂಜುನಾಥ ಅಡವೇರ, ಉಮಾದೇವಿ ಹಿರೇಮಠ ( ದೇಸಾಯಿಗೌಡ್ರ) ರವಿಚಂದ್ರನ್ ದೊಡ್ಡಿಹಾಳ ಎಲ್ ಐ ಲಕ್ಕಮ್ಮನವರ ರಾಜು ಜಿ ಹುಬ್ಬಳ್ಳಿಯ ಸರ್ವಧರ್ಮ ಸಮಾಜಸೇವಕರು ಡಾ, ರಮೇಶ ಮಹಾದೇವಪ್ಪನವರ, ರೈತ ಸಂಘದ ಅಧ್ಯಕ್ಷರಾದ ಮಾರುತಿ ಬೀಳಗಿ, ನೆಲಮಂಗಲ ಮಲ್ಲಿಕಾರ್ಜುನಯ್ಯ ಕುಣಿಗಲ್ ರೇಣುಕಾ, ಎಸ್ ಎಫ್ ಪಾಟೀಲ, ರುದ್ರೇಶ ಕುರ್ಲಿ, ಪ್ರಮೀಳಾ ಜಕ್ಕಣ್ಣವರ, ಶ್ರೀನಿವಾಸ ವಾಲೀಕಾರ ಲಲಿತಾ ಚಾಕಲಬ್ಬಿ  ಇತರರು
 ಇದ್ದರು.
WhatsApp Group Join Now
Telegram Group Join Now
Share This Article