ಅನಂತಂ ವಾಸುಕಿಂ ಶೇ?ಂ ಪದ್ಮನಾಭಂ ಚ ಕಂಬಲಮ್ |
ಶಂಖಪಾಲಂ ಧೃತರಾ?ಂ ತಕ್ಷಕಂ ಕಾಳಿಯಂ ತಥಾ |
ಫಲಶೃತಿ |
ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಮ್ | ಸಾಯಂಕಾಲೇ ಪಠೇನ್ನಿತ್ಯಂ ಪ್ರಾತಃಕಾಲೇ ವಿಶೇ?ತಃ ||
ಸಂತಾನಂ ಪ್ರಾಪ್ಯತೇ ನೂನಂ ಸಂತಾನಸ್ಯ ಚ ರಕ್ಷಕಾಃ |
ಸರ್ವಬಾಧಾ ವಿನಿರ್ಮುಕ್ತಃ ಸರ್ವತ್ರ ವಿಜಯೀ ಭವೇತ್ ||
ಸರ್ಪದರ್ಶನಕಾಲೇ ವಾ ಪೂಜಾಕಾಲೇ ಚ ಯಃ ಪಠೇತ್ | ತಸ್ಯ ವಿ?ಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ ||
ಓಂ ನಾಗರಾಜಾಯ ನಮಃ
ನಾಗ ಪಂಚಮಿಯು ಭಾರತದ ಹಲವಾರು ಭಾಗಗಳಲ್ಲಿ ಹಿಂದೂಗಳು ಆಚರಿಸುವ ಒಂದು ಹಬ್ಬ. ಇದನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸಲಾಗುತ್ತದೆ. ಈ ದಿನದಂದು,ನಾಗ ದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ,ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ ಮತ್ತು ಈ ಹಬ್ಬವು ಅಣ್ಣ- ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ.ಇದು ಹಬ್ಬಗಳ ಸಾಲಿಗೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕೃ? ಜನ್ಮಾ?ಮಿ,ಗಣೇಶ ಚತುರ್ಥಿ, ದಸರಾ,ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂತರಂತೆ ಆರಂಭವಾಗುತ್ತದೆ.
ಮಹಾರಾ?ದ ಬತ್ತೀಸ ಶಿರಾಳ ಎಂಬ ಗ್ರಾಮದಲ್ಲಿ ನಾಗರ ಪಂಚಮಿಯಂದು ಜೀವಂತ ಹಾವುಗಳನ್ನು ಪೂಜಿಸಲಾಗುತ್ತದೆ. ಈ ದಿನದಂದು ಹೆಣ್ಣುಮಕ್ಕಳು ತಮ್ಮ ಸಹೋದರನ ಒಳಿತಿಗೆ ಹುತ್ತಕ್ಕೆ ಹಾಲನ್ನು ಎರೆದು ಪೂಜಿಸುತ್ತಾರೆ.ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಮೂರುದಿನಗಳ ಕಾಲ ಆಚರಿಸಲಾಗುತ್ತದೆ.
ನಾಗರಪಂಚಮಿ – ಸಾತ್ತ್ವಿಕತೆ ಗ್ರಹಿಸಲು ಉಪಯುಕ್ತ ಕಾಲ. ಪಂಚ ಪ್ರಾಣಗಳೇ ಪಂಚ ನಾಗಗಳಾಗಿವೆ. ನಾಗರಪಂಚಮಿಯ ದಿನದಲ್ಲಿ ವಾತಾವರಣವು ಸ್ಥಿರವಾಗಿರುತ್ತದೆ. ಸಾತ್ತ್ವಿಕತೆಯನ್ನು ಗ್ರಹಿಸಲು ಈ ಕಾಲವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾಗಿದೆ. ಈ ದಿನದಂದು ಶೇ?ನಾಗ ಮತ್ತು ಶ್ರೀವಿ?ವಿಗೆ ಮುಂದಿನಂತೆ ಪ್ರಾರ್ಥನೆ ಮಾಡಬೇಕು – ’ತಮ್ಮ ಕೃಪೆಯಿಂದ ಈ ದಿನದಂದು ಶಿವ ಲೋಕದಿಂದ ಪ್ರಕ್ಷೇಪಿತವಾಗುವ ಲಹರಿಗಳು ನನ್ನಿಂದ ಹೆಚ್ಚೆಚ್ಚು ಗ್ರಹಣವಾಗಲಿ. ನನ್ನ ಆಧ್ಯಾತ್ಮಿಕ ಪ್ರಗತಿಗೆ ಎದುರಾಗುವ ಎಲ್ಲ ಅಡಚಣೆಗಳೂ ನಾಶವಾಗಲಿ. ದೇವತೆಗಳ ಶಕ್ತಿಯು ನನ್ನ ಪಂಚ ಪ್ರಾಣಗಳಲ್ಲಿ ಸಂಗ್ರಹವಾಗಿ ಅದು ಈಶ್ವರ ಪ್ರಾಪ್ತಿಗಾಗಿ ಮತ್ತು ರಾ? ರಕ್ಷಣೆಗಾಗಿ ಉಪಯೋಗವಾಗಲಿ. ನನ್ನ ಪಂಚ ಪ್ರಾಣದ ಶುದ್ಧಿಯಾಗಲಿ.
ನಾಗದೇವತೆಯು ಸಂಪೂರ್ಣ ಬ್ರಹ್ಮಾಂಡದ ಕುಂಡಲಿನಿಯಾಗಿದ್ದಾನೆ. ಪಂಚಪ್ರಾಣವೆಂದರೆ ಪಂಚ ಭೌತಿಕ ತತ್ತ್ವದಿಂದ ಉಂಟಾದ ಶರೀರದ ಸೂಕ್ಷ್ಮರೂಪವಾಗಿದೆ. ಸ್ಥೂಲ ದೇಹವು ಪ್ರಾಣಹೀನವಾಗಿದೆ ಮತ್ತು ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯುವು ಪಂಚಪ್ರಾಣದಿಂದ ಬರುತ್ತದೆ.
ಈ ದಿನ ಎಲ್ಲಾ ಸ್ತ್ರೀ ಪುರು?ರೂ ಅಭ್ಯಂಜನ ಸ್ನಾನ ಮಾಡಿ ಹಿಂದಿನ ದಿನ ಪೂಜಿಸಿದ ನಾಗದೇವರನ್ನೇ ಹರಿವಾಯುಗಳ ಪೂಜೆಯ ನಂತರ ಕ್ಷೀರಾಭಿ?ಕದಿಂದ ಪೂಜಿಸಬೇಕು. ಪೂಜೆಯ ಈ ಫಲವನ್ನು ಶೇ?ಂತರ್ಗತ ಸಂಕ?ಣನಿಗೆ ಅರ್ಪಿಸಬೇಕು.
ಸರ್ಪಗಳು ಮೊದಲು ತುಂಬಾ ದು?ತರವಾಗಿದ್ದು ಜನರಿಗೆ ಪೀಡೆಯನ್ನುಂಟು ಮಾಡುತ್ತಿದ್ದವು. ದೇವತೆಗಳು ಇದನ್ನರಿತು ಬ್ರಹ್ಮನ ಬಳಿ ವಿನಂತಿಸಿದರು. ಬ್ರಹ್ಮನು ಸರ್ಪಗಳು ತಮ್ಮ ತಾಯಿ ಕದ್ರುವಿನ ಶಾಪದಿಂದಲೇ ವಿನಾಶ ಹೊಂದುವವೆಂದು ಸೂಚಿಸಿದನು. ಸರ್ಪಗಳು ಎಲ್ಲಾ ಸಹೋದರರಿಂದ ಒಟ್ಟುಗೂಡಿ ಬ್ರಹ್ಮನಿಗೆ ಶಾಪನ್ನು ಹಿಂತೆಗೆದುಕೊಳ್ಳಬೇಕೆಂದು ಪ್ರಾರ್ಥಿಸಿದವು. ಅವರ ಅಪರಾಧೀ ಪ್ರಜ್ಞೆ ಪಶ್ಚಾತ್ತಾಪಗಳನ್ನು ಮನಗಂಡು ಬ್ರಹ್ಮನು ಮುಂದೆ ಆಸ್ತಿಕನೆಂಬುವನು ಸರ್ಪಕುಲ ರಕ್ಷಕನಾಗಿ ನಿಲ್ಲುತ್ತಾನೆ ಎಂದು ನುಡಿದನು. ಹಾಗೆ ಹೇಳುತ್ತಾ ಸರ್ಪಗಳು ಅತಲ, ವಿತಲ, ಪಾತಾಲಗಳಲ್ಲಿ ವಾಸಿಸಬೇಕೆಂದು, ನೋಯದೇ ಕಚ್ಚಬಾರದೆಂದೂ ಆದೇಶಿಸಿದನು.
ಶೇ?ನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಪ್ರತಿಯೊಂದು ಹೆಡೆಯ ಮೇಲೆ ಒಂದು ಮಾಣಿಕ್ಯವಿದೆ. ಅವನು ಶ್ರೀವಿ?ವಿನ ತಮೋಗುಣ ದಿಂದ ಉತ್ಪನ್ನವಾಗಿದ್ದಾನೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀವಿ? ಮಹಾಸಾಗರದಲ್ಲಿ ಶೇ?ಸನದ ಮೇಲೆ ಪವಡಿಸಿರುತ್ತಾನೆ.
ತ್ರೇತಾಯುಗದಲ್ಲಿ ಶ್ರೀವಿ? ರಾಮನ ಅವತಾರವನ್ನು ಎತ್ತಿದಾಗ, ಶೇ?ನು ಲಕ್ಷ್ಮಣನ ಅವತಾರವನ್ನು ಎತ್ತಿದ್ದನು. ದ್ವಾಪರ ಮತ್ತು ಕಲಿಯುಗದ ಸಂಧಿಕಾಲದಲ್ಲಿ ಕೃ?ನ ಅವತಾರವಾದಾಗ ಶೇ?ನು ಬಲರಾಮನಾಗಿದ್ದನು.
ಶ್ರೀಕೃ?ನು ಯಮುನಾ ನದಿಯ ಆಳದಲ್ಲಿದ್ದ ಕಾಳಿಂಗ ನಾಗನನ್ನು ಮರ್ದನ ಮಾಡಿದನು. ಆ ದಿನವು ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ನಾಗಗಳಲ್ಲಿನ ಶ್ರೇ?ನಾದ ’ಅನಂತ’ನೇ ನಾನು’, ಎಂದು ಗೀತೆಯಲ್ಲಿ (೧೦.೨೯) ಶ್ರೀಕೃ? ತನ್ನ ವಿಭೂತಿಯನ್ನು ಹೇಳುತ್ತಾನೆ.
“ಅನಂತಂ ವಾಸುಕಿಂ ಶೇ?ಂ ಪದ್ಮನಾಭಂ ಚ ಕಂಬಲಮ್|
ಶಂಖಪಾಲಂ ಧೃತರಾ?ಂ ತಕ್ಷಕಂ, ಕಾಲಿಯಂ ತಥಾ”|
ಅನಂತ, ವಾಸುಕೀ, ಶೇ?, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾ?, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ಜಾತಿಯ ನಾಗಗಳ ಆರಾಧನೆಯನ್ನು ಮಾಡುತ್ತಾರೆ. ಇದರಿಂದ ಸರ್ಪಭಯ ಇರುವುದಿಲ್ಲ ಮತ್ತು ವಿ?ದಿಂದ ತೊಂದರೆಯಾಗುವುದಿಲ್ಲ.
ಸರ್ಪ ಯಜ್ಞವನ್ನು ನಿಲ್ಲಿಸಿದ ದಿನ:
ಜನಮೇಜಯ ರಾಜ ತನ್ನ ತಂದೆ ಪರೀಕ್ಷಿತ ರಾಜನ ಸಾವಿಗೆ ಸರ್ಪವೊಂದು ಕಾರಣವೆಂದು ತಿಳಿದು,ಭೂಲೋಕದಲ್ಲಿ ಸರ್ಪ ಸಂಕುಲವನ್ನು ನಿರ್ನಾಮ ಮಾಡಲು ’ಸರ್ಪಯಜ್ಞ’ವನ್ನು ಆರಂಭಿಸುತ್ತಾನೆ. ಋತ್ವಿಜರು ಹೋಮಮಾಡಲು ಆರಂಭಿಸಿದಾಗ ಸರ್ಪಗಳು ಒಂದರ ಹಿಂದೆ ಒಂದರಂತೆ ಬಂದು ಅಗ್ನಿಕುಂಡಕ್ಕೆ ಬಿದ್ದು ಬುದಿಯಾಗತೊಡಗಿತು. ಇದನ್ನು ಕಂಡ ಉಳಿದ ಸರ್ಪಗಳು ಸರ್ಪರಾಜ ವಾಸುಕಿಯ ತಂಗಿಯಾದ ಜರತ್ಕಾರು ಬಳಿ ಹೋಗಿ ದಯವಿಟ್ಟು ನಮ್ಮನ್ನು ಆ ರಾಜನ ಹೋಮದಿಂದ ರಕ್ಷಿಸು ಎಂದು ಬೇಡಿಕೊಳ್ಳುತ್ತವೆ. ಸರ್ಪಗಳ ಮನವಿಗೆ ಜರತ್ಕಾರು ಒಪ್ಪಿ ತನ್ನ ಮಗನಾದ ಆಸ್ತೀಕನಿಗೆ ಯಜ್ಞವನ್ನು ನಿಲ್ಲಿಸಿ ಬರುವಂತೆ ಸೂಚನೆ ನೀಡುತ್ತಾಳೆ. ಆಸ್ತೀಕ ಋಷಿಯು ಸರ್ಪಯಜ್ಞ ಮಾಡುವ ಜನಮೇಜಯ ರಾಜನ ಯಜ್ಞಶಾಲೆಯನ್ನು ಪ್ರವೇಶಿಸಿ ತನ್ನ ವಿದ್ಯಾಬಲದಿಂದ ಪ್ರಾಣಿ ಹಿಂಸೆ ಮಹಾಪಾಪ, ನೀನು ಈಗಾಗಲೇ ಮಾಡುತ್ತಿರುವ ಸರ್ಪಯಜ್ಞವನ್ನು ನಿಲ್ಲಿಸಬೇಕು ಎಂದು ಬೋಧಿಸಿದ. ಜನಮೇಜಯನು ಆಸ್ತಿಕನ ಮಾತಿಗೆ ಬೆಲೆಕೊಟ್ಟು ಸರ್ಪ ಯಜ್ಞವನ್ನು ನಿಲ್ಲಿಸಿದ ದಿನವೇ ಪಂಚಮಿ ದಿನವಾಗಿದೆ.
ಶಿವನ ಆಭರಣ, ವಿ?ವಿನ ಹಾಸಿಗೆ, ಗಣಪತಿಯ ಹೊಟ್ಟೆಯ ಪಟ್ಟಿ, ಸಮುದ್ರಮಂಥನ ಕಾಲದಲ್ಲಿ ಮಂದರ ಪರ್ವರತವೆಂಬ ಕಡಗೋಲಿಗೆ ಹಗ್ಗವಾಗಿ, ದುರ್ಯೋಧನನ ಧ್ವಜದ ಚಿಹ್ನೆಯಾಗಿ ನಾಗ ಕಾಣಿಸಿಕೊಳ್ಳುತ್ತಾನೆ.
ನಾಗರ ಪಂಚಮಿ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ ದಿನಗಳ ಮಧ್ಯೆ. ಈ ಕಾಲದ ಕೃಷಿ ಚಟುವಟಿಕೆಗಳು ಒಂದು ಹಂತ ತಲುಪಿರುತ್ತವೆ. ಈ ಕಾಲದಲ್ಲಿ ಕೀಟ, ಮಿಡತೆಗಳ ಹಾವಳಿ ಅಧಿಕ. ಅ? ಅಲ್ಲದೆ ಫಸಲು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ. ಇವೆಲ್ಲದರಿಂದ ರೈತನ ಫಸಲನ್ನು ಕಾಪಾಡುವುದು ಹಾವುಗಳು. ಇಲಿ, ಕಪ್ಪೆಗಳ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಪೂಜೆಯೇ ನಾಗರ ಪಂಚಮಿ.
“ಮಾನವನು ಜೀವನದ ಸುತ್ತಾ ಸುತ್ತದೆ ನಿಶ್ಚಲ ದಿಂದ, ಸಾಕ್ಷೀ ಭಾವದಿಂದ ಕುಳಿತರೆ ನಿಮ್ಮ ಸುತ್ತಲೂ ಜೀವನವು ಸುತ್ತುತ್ತದೆ” ಇದುವೇ ನಾಗತತ್ವ
ಇಂದ್ರೀಯಗಳಿಗೆ ಮೀರಿದನ್ನು ಗ್ರಹಿಸಲು ನಿಮ್ಮೊಳಗೆ ಉಳಿದಿರುವ ವಿಕಸನೀಯ ಶೇ?ದ ಆಯಾಮ ಮಹತ್ವದಾಗಿರುತ್ತದೆ. ಪ್ರಪಂಚಾದಾದ್ಯಂತ ವಿವಿಧ ಸಂಸ್ಕೃತಿಯಲ್ಲಿ ನಾಗವನ್ನು ಚಿತ್ರಿಸಿರುವುದನ್ನು ಕಾಣಬಹುದು.ಭಾರತದಲ್ಲಿ ನಾಗನಿಗೆ ಹನ್ನೆರಡು ಆಯಾಮಗಳಿವೆ. ಇವುಗಳೆಂದರೆ, ಅನಂತ, ವಾಸುಕಿ, ಶೇ?, ಪದ್ಮ, ಕಂಬಳ, ಕಾರ್ಕೊಟ, ಅಶ್ವತ್ರ, ದೃತರಾ?, ಶಂಖಪಾಲ, ಕಾಳಿಯ, ತಕ್ಷಕ, ಮತ್ತು ಪಿಂಗಳ. ಈ ಹನ್ನೆರಡು ಅಂಶಗಳು ೧೨ ತಿಂಗಳಿಗೆ ಸಂಭಂದ ಪಟ್ಟಿವೆ.
ಶಿವನ(ನಾಗಭೂ?ಣನ) ಕಂಠಾಭರಣದ ಹಾವನ್ನು ವಾಸುಕಿ ಎಂತಲೂ, ವಿ?ವಿನ ಹಾವನ್ನು ಶೇ? ಎಂತಲೂ ಕರೆಯುತ್ತಾರೆ.ಗಣಿತದಲ್ಲಿ ಶೇ? ವೆಂದರೆ ಮೂಲವನ್ನು ಭಾಗಿಸಿ ಉಳಿದ ಅಂಕಿ ಎಂದು. ಒಂದು ನಿರ್ದಿ? ಮೂಲ ಅಂಶವು ಮತ್ತೊಂದು ಸೃಷ್ಟಿಗೆ ಮೊಳಕೆಯೊಡೆಯುತ್ತದೆ. ವಿ?ವು ಶೇ?ನ ಮೇಲೆ ವಿಶ್ರಾಂತಿ ಪಡೆಯುತ್ತಾನೆ, ಎಂದರೆ ನಿರ್ವಹಿಸಲು ಯಾವುದೇ ಸೃಷ್ಟಿ ಇಲ್ಲದಿದ್ದಾಗ ಅವನು ಶೇ? ಅಥವಾ ಶೇ?ದಮೇಲೆ ವಿಶ್ರಾಂತಿ ಪಡೆಯುತ್ತಾನೆ ಎಂದರ್ಥ. ಆದಿ ಶೇ?ನು ಸುರಳಿ ಬಿಚ್ಚಿದಾಗ ಕಾಲವು ಮುಂದೆ ಹೋಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಇದರಾರ್ಥ ಹಿಂದಿನ ಸೃಷ್ಟಿಯಿಂದ ಉಳಿದಿರುವ ಶೇ?ವು ಬಿಚ್ಚಲು ಆರಂಭಿಸಿದೆ ಎಂದರ್ಥ.ಅದು ಬಿಚ್ಚಲು ಆರಂಭಿಸಿದಾಗ ಇನ್ನೊಂದು ಸೃಷ್ಟಿಯಾಗಲು ಶುರುವಾಗುತ್ತದೆ. ಭೂಮಿಯನ್ನು ಶೇ?ನಾಗವು ಎತ್ತಿ ಹಿಡಿದಿದೆ ಎನ್ನುವುದೂ ಈ ಕಾರಣಕ್ಕೆ.
ಹಾವು ದೇಹವನ್ನು ಕಿವಿಯಾಗಿಸಿ ಚನಲನೆಗಳನ್ನು ಅಳಿಸುತ್ತದೆ. ಈ ನಾಗಮಂಚಮಿಯಲ್ಲಿ ಭಕ್ತರು ಇಂದ್ರೀಯಗಳಿಗಿಂತ ಸಂವೇದನೆಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನಮಾಡುತ್ತಾರೆ.
ನಗರ ಪಂಚಮಿ ನಾವು ಬೌತಿಕತೆಯ ಇಂದ್ರಿಯಗಳನ್ನೂ ಮೀರಿ ಜೀವನ ತಿಳಿಯಬೇಸುವುದಕ್ಕಾಗಿ ಆಚರಿಸುತ್ತಾರೆ.
ನಮ್ಮ ಪೂರ್ವಜರ ಕಾಲದಿಂದಲೂ ನಾಗಪೂಜೆ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಸಿಂಧೂ ಸಂಸ್ಕೃತಿಯ ಉತ್ಕಕನನ ತಾಣಗಳಲ್ಲಿ ಸಿಕ್ಕಿರುವ ಅನೇಕ ಅವಶೇ?ಗಳು ಅಲ್ಲಿನ ಜನರು ನಾಗ (ಸರ್ಪ) ಪೂಜೆ ಮಾಡುತ್ತಿದ್ದರು ಎನ್ನುವುದು ತಿಳಿದುಬರುತ್ತದೆ. ಅವರ ನಂತರ ಬಂದಿರುವ ಅನೇಕ ರಾಜಮನೆತನಗಳು ಸರ್ಪವನ್ನು ವಿಶೇ?ವಾಗಿ ಪೂಜಿಸುತ್ತಿದ್ದರು. ಈ ಬಗ್ಗೆ ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಮಾನವ ಜನಾಂಗದವರು ಆದಿಕಾಲದಿಂದಲೂ ಈ ನಾಗಾರಾಧನೆ ನಡೆಸಿಕೊಂಡು ಬಂದಿದ್ದರು ತಿಳಿದುಬರುತ್ತದೆ.
ಭಾರತದ ಇತಿಹಾಸದ ಪುಟಗಳಲ್ಲಿ ನಾಗವಂಶಗಳ ಕುರಿತಾಗಿ ಉಲ್ಲೇಖವಿದೆ. ಈಗಲೂ ಭಾರತದ ಕೇರಳ, ಅಸ್ಸಾಂ, ನಾಗಾಲ್ಯಾಂ??ಳಲ್ಲಿ ನಾಗಾ ಜನಾಂಗದ (ನಾಗವಂಶೀಯರು) ಇದ್ದಾರೆ. ಭಾರತಕ್ಕ? ನಾಗ ಪೂಜೆ ಸೀಮಿತವಾಗಿಲ್ಲ. ಗ್ರೀಸ್, ಜಪಾನ್, ಚೀನಾ, ಈಜಿಪ್ಟ್ ಸೇರಿದಂತೆ ಮುಂತಾದ ಪುರಾತನ ಸಂಸ್ಕೃತಿವುಳ್ಳ ಜನತೆ ನಾಗಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡುತ್ತಿದ್ದಾರೆ.
ಭಾರತೀಯರ ಪ್ರತಿಯೊಂದು ಹಬ್ಬ ಹರಿದಿನಗಳಲ್ಲಿ ತನ್ನದೇ ಆದಂತಹ ವಿಶಿ?ತೆ ಮತ್ತು ವೈಜ್ಞಾನಿಕತೆ ಅಡಗಿದೆ ಎ? ಬದಲಾವಣೆಗಳು ಬಂದರೂ ನಮ್ಮ ಸಂಸ್ಕೃತಿಯ ಆಚರಣೆಗಳನ್ನು ಬಿಡದೆ ಆಚರಿಸೋಣ ಸರ್ವರಿಗೂ ಸನ್ಮಂಗಳ ಉಂಟಾಗಲಿ.
ಲೇಖಕರು:
ಶ್ರೀ ರಾಘವೇಂದ್ರ ನೀಲಣ್ಣವರ ರನ್ನ ಬೆಳಗಲಿ.
ಯೋಗ ಶಿಕ್ಷಕ,ಉಪನ್ಯಾಸಕರು