ಹುಕ್ಕೇರಿ.ಪೌರ ಕಾರ್ಮಿಕರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಸ್ಥಾನ ಪಡೆಯಬೇಕು ಎಂದು ಹುಕ್ಕೇರಿ ಪುರಸಭೆ ಸದಸ್ಯ ಮಹಾವೀರ ನಿಲಜಗಿ ಹೇಳಿದರು.
ಅವರು ಸೋಮವಾರದಂದು ಪೌರ ಕಾರ್ಮಿಕರ ದಿನಾಚಾರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹುಕ್ಕೇರಿ ಪುರಸಭೆ ಆವರಣದಲ್ಲಿ ಜರುಗಿದ ಕಾರ್ಯಕ್ರಮವನ್ನು ಅದ್ಯಕ್ಷ ಇಮ್ರಾನ ಮೋಮಿನ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ವೇದಿಕೆ ಮೇಲೆ ಉಪಾದ್ಯೆಕ್ಷೆ ಜ್ಯೋತಿ ಬಡಿಗೇರ, ಮುಖ್ಯಾಧಿಕಾರಿ ಐ ಸಿ ಸಿದ್ನಾಳ ,ಶಾಖಾ ಅದ್ಯಕ್ಷ ಶಂಕರ ಕರನಿಂಗ, ಸದಸ್ಯರಾದ ಆನಂದ ಗಂಧ, ಸದಾಶಿವ ಕರೆಪ್ಪಗೋಳ, ಫರೀದಾ ಮುಲ್ಲಾ, ಸುರೇಖಾ ಗಳತಗಿಮಠ, ಕಾರ್ಯದರ್ಶಿ ದೇವಾನಂದ ನವಲೆ, ಉಪಸ್ಥಿತರಿದ್ದರು.
ಹಿರಿಯ ಸದಸ್ಯರ ಮಹಾವೀರ ನಿಲಜಗಿಯವರು ಕಾರ್ಮಿಕರು ನೀಡಿದ ಸರ್ಕಾರವನ್ನು ಸ್ವೀಕರಿಸಿ ಮಾತನಾಡಿ ಪೌರ ಕಾರ್ಮಿಕರ ಮಕ್ಕಳು ಒಳ್ಳೆಯ ಶಿಕ್ಷಣ ಪಡೆದು ಉನ್ನತ ಮಟ್ಟದ ಹುದ್ದೆ ಅಲಂಕರಿಸಬೇಕು ಎನ್ನುವ ದೃಷ್ಟಿಯಿಂದ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪೌಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿದೆ ಅದರ ಪ್ರಯೋಜನ ಎಲ್ಲರೂ ಪಡೆಯಬೇಕು ಎಂದರು.
ನಂತರ ನೂತನ ಅದ್ಯಕ್ಷ ಇಮ್ರಾನ ಮೋಮಿನ ಮತ್ತು ಉಪಾದ್ಯಕ್ಷೆ ಜ್ಯೋತಿ ಬಡಿಗೇರ ಹಾಗೂ ಮುಖ್ಯಾಧಿಕಾರಿಗಳಿಗೆ ಸತ್ಕರಿಸಿ ಅಭಿನಂದಿಸಲಾಯಿತು.
ನೂತನ ಅದ್ಯಕ್ಷ ಇಮ್ರಾನ ಮಾತನಾಡಿ ನಗರ ಸ್ವಚ್ಚ ಮತ್ತು ಸುಂದರವಾಗಿರಲು ಪೌರ ಕಾರ್ಮಿಕರ ಪಾತ್ರ ಮುಖ್ಯವಾಗಿದೆ ಅದರಂತೆ ಅವರ ಆರೋಗ್ಯದ ಕಡೆ ಗಮನ ಹರಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಪೌರ ಕಾರ್ಮಿಕರ ಸಂಘದ ಉಪಾದ್ಯಕ್ಷ ರಾಘವೇಂದ್ರ ಭರಮನ್ನವರ, ವ್ಯವಸ್ಥಾಪಕ ಮಲ್ಲಿಕಾರ್ಜುನ ಗುಡಿಕೇತರ, ಸಂತೋಷ ಹಳ್ಳನ್ನವರ, ಬಸವರಾಜ ಥಿಲಾರೆ, ಮಲ್ಲಿಕಾರ್ಜುನ ನಾಯಿಕ, ಗೀತಾ ಕಾಗಲೇಕರ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು