ಬಳ್ಳಾರಿ,ಜ.೦೨: ಗುರುವಾರ ನಡೆದ ಗಲಾಟೆ ಸಂಬAಧ ಯುವಕ ( ಬಿ.ರಾಜಶೇಖರ) ಸಾವನ್ನಪ್ಪಿದ್ದು, ಜನಾರ್ಧನರೆಡ್ಡಿ ನಿವಾಸ ಮೇಲೆ ಕೂಡಾ ಗುಂಡಿನ ದಾಳಿ ನಡೆಸಲಾಗಿದೆ. ಯಾವುದೇ ತನಿಖೆಗೂ ನಾವು ಸಿದ್ದವಾಗಿದ್ದು, ಸಿಟಿ ಹೈಕೋರ್ಟ್ ಜಡ್ಜ್ ತನಿಖೆ ನಡೆಸಲಿ ಇಲ್ಲಂದ್ರೆ ಸಿಬಿಐ ತನಿಖೆ ನಡೆಸಲಿ ಎಂದು ಮಾಜಿ ಸಚಿವ ಶ್ರೀರಾಮುಲು ಗುಡುಗಿದರು.
ನಗರದ ಹವಾಂಬಾವಿಯಲ್ಲಿರುವ ಜನಾರ್ಧನರೆಡ್ಡಿ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಬಳ್ಳಾರಿಯಲ್ಲಿ ಗೂಂಡಾಗಿರಿ ನಡೆಯಲ್ಲ, ತನಿಖೆ ಆದಾಗ ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗುತ್ತದೆ. ಗಂಗಾವತಿಯಿAದ ಜನಾರ್ಧನರೆಡ್ಡಿ ಮನೆಗೆ ಬಂದು ಇಳಿದಿದ್ದಾರೆ. ಮನೆಯ ಮುಂಭಾಗ ಬ್ಯಾನರ್ ಕಟ್ಟಿದ್ದು, ವಾಹನಗಳಿಗೆ ಅಡಚಣೆಯಾಗುತ್ತದೆ ಎಂದು ಹೇಳಿದ್ದರೂ ಬ್ಯಾನರ್ ಕಟ್ಟಬೇಡಿ ಎಂದಿದ್ದಕ್ಕೆ ಏಕಾಏಕಿ ದಾಳಿ ನಡೆಸಿದ್ದಾರೆ. ನೂಕು ನುಗ್ಗಲು ಗನ್ನಿಂದ ಗುಂಡುಹಾರಿಸಿದ್ದಾರೆ. ಜತೆಗೆ ಪೊಲೀಸರಿಂದ ಗುಂಪು ಚದುರಿಸುವಾಗ ಹರಸಾಹಸಪಟ್ಟರು.
ನಿನ್ನೆ ನಡೆದ ಘಟನೆ ನೋವು ತರುವಂತಹ ಘಟನೆಯಾಗಿದೆ. ನಿನ್ನೆ ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮವಾಗಿ ಮೃತಪಟ್ಟ ರಾಜಶೇಖರರೆಡ್ಡಿರವರ ಆತ್ಮಕ್ಕೆ ನಾವು ಸಂತಾಪ ವ್ಯಕ್ತಪಡಿಸುತ್ತೇವೆ.
ಯುವಕರನ್ನು ಒಳ್ಳೆಯ ವಿಷಯಗಳಿಗೆ ಬಳಸಿಕೊಳ್ಳಬೇಕು, ಕೆಟ್ಟ ವಿಷಯಗಳಿಗೆ ಬಳಸಿಕೊಳ್ಳಬಾರದು. ಶಾಸಕ ಭರತ್ರೆಡ್ಡಿಯವರ ಬೆಂಬಲಿಗರು ಪ್ಲಾನ್ ಮಾಡಿಕೊಂಡೇ ಗುರುವಾರ ಸಂಜೆ ಸಿನಿಮೀಯ ರೀತಿಯಲ್ಲಿ ಬಂದಿದ್ದರು. ಶಾಸಕ ಭರತ್ರೆಡ್ಡಿಯವರ ಆಪ್ತ ಸತೀಶ್ರೆಡ್ಡಿ ಅಂಗರಕ್ಷಕರು ಗಾಳಿಯಲ್ಲಿ ಗುಂಡು ಹಾರಿಸಿರಬಹುದು. ಆ ಗುಂಡನ್ನು ಸ್ವತಃ ಜನಾರ್ದನರೆಡ್ಡಿ ಮಾಧ್ಯಮದವ¬ರಿಗೆ ಗುರುವಾರ ರಾತ್ರಿ ತೋರಿಸಿದ್ದಾರೆ ಮೊದಲಿಗೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ವಿಷಯ ತಿಳಿದು ಜನಾರ್ದನ ರೆಡ್ಡಿ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಸತೀಶ್ ರೆಡ್ಡಿ ಖಾಸಗಿ ಅಂಗರಕ್ಷಕರು ಎರಡು ಸುತ್ತು ಗುಂಡು ಹಾರಿಸಿದ್ದಾರೆ.
ಆ ಗುಂಡಿನ ಖಾಲಿ ಕೊಳವೆ ಪ್ರದರ್ಶಿಸಿದ ಜನಾರ್ದನ ರೆಡ್ಡಿ ಇದು ನನ್ನ ಹತ್ಯೆಗೆ ನಡೆದ ಯತ್ನ ಎಂದು ಆರೋಪಿಸಿ ತಮ್ಮ ಗುಂಪಿನೊAದಿಗೆ ಘರ್ಷಣೆಗೆ ಇಳಿದಿದ್ದಾರೆ. ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿವೆ ಎಂದರು.
ನಾವು ಹೋರಾಟದಿಂದ ರಾಜಕಾರಣ ಮಾಡಿದ್ದೇವೆ. ಜನಾರ್ಧನರೆಡ್ಡಿ ಅವರು ಶಾಂತಿ ಕಾಪಾಡಬೇಕು. ಕಾನೂನು ಮೀರಬಾರದು. ಕಳೆದ ೩೦ ವರ್ಷಗಳಲ್ಲಿ ಕೆಟ್ಟದನ್ನು ಮಾಡಿಲ್ಲ, ಮಾಡುವುದಿಲ್ಲ ಸ್ವಂತ ಊರಿನಲ್ಲಿ ಶಾಂತಿಯನ್ನು ಕಾಪಾಡೋಣ ಎಂದರು.
ಆಟೋದಲ್ಲಿ ಪೆಟ್ರೂಲ್ ಬಾಂಬ್ ತೆಗೆದುಕೊಂಡು ಬಂದು ಹಾಕಿದ್ದಾರೆ. ಕಾನೂನು ಕಾಪಾಡಬೇಕಾದ ವ್ಯಕ್ತಿಗಳೇ ಕಾನೂನು ಮೀರಿ ವರ್ತನೆ ಮಾಡುತ್ತಿದ್ದಾರೆ ಇದು ಶೋಭೆ ತರುವಂತಹದಲ್ಲ. ಯಾವುದೇ ರಾಜಕಾರಣಿಯಾಗಿರಲಿ ಒಳ್ಳೆಯದಕ್ಕೆ ಯುವಕರನ್ನು ಬಳಕೆ ಮಾಡಿಕೊಳ್ಳಬೇಕು. ಇಂತಹ ಘಟನೆಗೆ ಬಳಕೆ ಮಾಡಿಕೊಳ್ಳಬಾರದು. ಗುರುವಾರದಂದು ರಾತ್ರಿ ನಡೆದ ಘಟನೆಯಲ್ಲಿ ೨೬ವರ್ಷದ (ರಾಜಶೇಖರ್) ಯುವಕ ಮೃತಪಟ್ಟಿದ್ದು, ನೋವು ತರುವಂತಹ ಘಟನೆ ನಡೆದಿದೆ.
ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಮಾತನಾಡಿ, ಶಾಸಕ, ಸಚಿವ ಆಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಪರವಾಗಿ ಕಲ್ಪನೆ ಇಟ್ಟುಕೊಂಡು ರಾಜಕೀಯ ಮಾಡಿದ್ದಾನೆ. ಯಾರಿಗೂ ತೊಂದರೆಯಾಗದAತೆ ಕೆಲಸ ನಿರ್ವಹಿಸಿದ್ದೇನೆ. ದಿನನಿತ್ಯ ಗಂಗಾವತಿಯಿAದ ಮನೆಗೆ, ಮನೆಯಿಂದ ಗಂಗಾವತಿಗೆ ಹೋಗಿ ಬರುವುದನ್ನು ವೀಕ್ಷಣೆ ಮಾಡುತ್ತಾ, ಪೂರ್ವ ತಯಾರಿಯಲ್ಲಿ ಅಟ್ಯಾಕ್ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಬಗ್ಗೆ ಸಿಟಿ ಜಡ್ಜ್ ಅಥವಾ ಸಿಬಿಐ ತನಿಖೆ ನಡೆಸಬೇಕು. ಬಳ್ಳಾರಿಯಲ್ಲಿ ಹಾಡಹಗಲೇ ನಗರದ ಎಲ್ಲಾ ವಾರ್ಡ್ಗಳಲ್ಲಿ ಮಟ್ಕಾ, ಗಾಂಜಾ, ಮರಳು ಮಾಫಿಯಾ, ಸಬ್ ರಿಜಿಸ್ಟರ್ಲ್ಲಿ ದಂಧೆ ಎಗ್ಗಿಲ್ಲದೇ ನಡೆಯುತ್ತದೆ. ವ್ಯಾಪಾರಸ್ಥರಿಂದ ಹಿಡಿದು ಹಲವರಿಗೆ ಇನ್ನೂ ೨ ವರ್ಷಗಳಲ್ಲಿ ದುಡ್ಡು ಮಾಡಬೇಕು ಎಂದು ಈ ದಂಧೆಗಿಳಿದ್ದಾರೆ ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಡರು, ಪಾಲಿಕೆ ಸದಸ್ಯರು ಸೇರಿದಂತೆ ಇದ್ದರು.


