ಇನ್ಫೋಸಿಸ್‌ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ನಿರಂತರ; 3ನೇ ದಿನವೂ ಸಿಗದ ಸುಳಿವು

Ravi Talawar
ಇನ್ಫೋಸಿಸ್‌ ಆವರಣದಲ್ಲಿ ಚಿರತೆ ಸೆರೆ ಕಾರ್ಯಾಚರಣೆ ನಿರಂತರ; 3ನೇ ದಿನವೂ ಸಿಗದ ಸುಳಿವು
WhatsApp Group Join Now
Telegram Group Join Now

ಮೈಸೂರು: ಇನ್ಫೋಸಿಸ್‌ ಆವರಣದಲ್ಲಿ ಕಾಣಿಸಿಕೊಂಡಿದೆ ಎನ್ನಲಾದ ಚಿರತೆ ಸೆರೆ ಕಾರ್ಯಾಚರಣೆ ಮೂರನೇ ದಿನವೂ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಈ ಕಾರ್ಯಾಚರಣೆ ನಡೆಯುತ್ತಿದ್ದು, ಚಿರತೆಯ ಚಲನವಲನದ ಬಗ್ಗೆ ಈವರೆಗೆ ಸುಳಿವು ಕಂಡುಬಂದಿಲ್ಲ. ಆದರೆ, ಇನ್ಫೋಸಿಸ್ ಕ್ಯಾಂಪಸ್​ನಲ್ಲಿ ಚಿರತೆ ಸೆರೆ ಕಾರ್ಯಪಡೆ, ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಡಿಸೆಂಬರ್‌ 31ರ ಬೆಳಗಿನ ಜಾವ ಮೈಸೂರಿನ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ಸುಮಾರು 350 ಎಕರೆ ವಿಸ್ತೀರ್ಣದ ಇನ್ಫೋಸಿಸ್‌ ಕ್ಯಾಂಪಸ್​ನಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ ಎನ್ನಲಾಗುತ್ತಿದ್ದು, ಇದರ ಸೆರೆಗಾಗಿ ಅರಣ್ಯ ಇಲಾಖೆಯ ಚಿರತೆ ಕಾರ್ಯಪಡೆ, ಆನೆ ಕಾರ್ಯಪಡೆ, ಸಿಬ್ಬಂದಿ ಹಾಗೂ ಮೈಸೂರು ಅರಣ್ಯ ಇಲಾಖೆಯ ಒಟ್ಟು 80 ಸಿಬ್ಬಂದಿ ಚಿರತೆಯ ಸೆರೆಗೆ ಕಾರ್ಯಾಚರಣೆ ನಡೆಸಿದ್ದಾರೆ.

ಇನ್ಫೋಸಿಸ್ ಕ್ಯಾಂಪಸ್‌ನ ಸಿಸಿಟಿವಿಯಲ್ಲಿ ಮಾತ್ರ ಚಿರತೆ ಕಾಣಿಸಿಕೊಂಡಿದೆ. ಆದರೆ, ಅರಣ್ಯ ಇಲಾಖೆಯ ಡ್ರೋನ್​ ಕ್ಯಾಮರಾ, ಟ್ಯ್ರಾಪ್‌ ಕ್ಯಾಮರಾ, ಕ್ಯಾಂಪಸ್​ನಲ್ಲಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಆಗಲಿ ಅಥವಾ ಹೆಜ್ಜೆ ಗುರುತುಗಳಾಗಲಿ ಕಂಡು ಬಂದಿಲ್ಲ. ಆದರೂ ಚಿರತೆ ಕಾರ್ಯಪಡೆಯನ್ನ ಹಾಗೂ ಟ್ಯ್ರಾಪ್‌ ಕ್ಯಾಮರಾಗಳನ್ನ ಚಿರತೆ ಸೆರೆಗಾಗಿ ಮುಂದುವರೆಸಲಾಗಿದೆ. ಇದರ ಜತೆಗೆ ಕ್ಯಾಂಪಸ್​ಗೆ ಹೊಂದಿಕೊಂಡಂತೆ ಇರುವ ಪ್ರದೇಶಗಳಲ್ಲೂ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Share This Article