ಮಹಾಲಿಂಗಪುರ : ಹೆಣ್ಣಿರಲಿ ಗಂಡಿರಲಿ ಪ್ರತಿಯೊಬ್ಬರೂ ದೇಶದ ಕಾನೂನಿನ ಕುರಿತು ತಿಳುವಳಿಗೆ ಪಡೆದುಕೊಳ್ಳುವು ಇಂದಿನ ಅವಶ್ಯವಾಗಿದೆಯೆಂದು ನ್ಯಾಯವಾದಿ ಎಂ.ಎನ್. ಕೋಪರ್ಡೆ ಹೇಳಿದರು.
ಸ್ಥಳೀಯ ಚಿಮ್ಮಡ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮೀತಿ, ಅಭಿಯೋಜನಾ ಇಲಾಖೆ, ವಕೀಲರ ಸಂಘ, ಖಾಯಂ ಜನತಾ ನ್ಯಾಯಾಲಯ ಬೆಳಗಾವಿ ಹಾಗೂ ಮಧ್ಯಸ್ಥಿಕೆ ಅಭಿಯಾನದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ “ಕಾನೂನು ಅರಿವು ನೆರವು ಕಾರ್ಯಕ್ರಮ”ದ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅವರು ದುರ್ಬಲರಿಗಾಗಿ ಕಾನೂನು ನೆರವು ಉಚಿತವಾಗಿ ದೊರೆಯುತಿದ್ದು ಇದರ ಸದುಪಯೋಗ ಪ್ರತಿಯೊಬ್ಬರು ಪಡೆಯಬೇಕೆಂದರು.
ವಕೀಲ ವಿದ್ಯಾರ್ಥಿನಿ ಗ್ರಾ.ಪಂ. ಸದಸ್ಯೆ ಮೇಘಾ ಬಿ.ಪಾಟೀಲ ಮಾತನಾಡಿ ಮಹಿಳೆಯರಿಗೆ ಇರುವ ಕಾನೂನಾತ್ಮಕ ಸೌಲಭ್ಯಗಳು ಹಾಗೂ ಉಚಿತ ಕಾನೂನು ನೆರವು ಪಡೆಯಲು ಬೇಕಾದ ಅರ್ಹತೆಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಕಾರ್ಯಕ್ರಮದಲ್ಲಿ ವಿವರಣೆ ನೀಡುವಂತಾಗಬೇಕೆಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಂ.ಪಂ. ಅಧ್ಯಕ್ಷೆ ಶ್ರೀಮತಿ ಬಂಗಾರೆವ್ವ ಜಾಲಿಕಟ್ಟಿ ವಹಿಸಿದ್ದರು. ನ್ಯಾಯವಾದಿ ಮಹಾದೇವ ಕೋಳಿ, ಭಾಸ್ಕರ ಬಡಿಗೇರ, ಪ್ರಕಾಶ ಪಾಟೀಲ, ಬಾಳಪ್ಪ ಗಡೆಪ್ಪನವರ, ಮನೋಜ ಹಟ್ಟಿ, ಬಾಳೇಶ ಬ್ಯಾಕೋಡ, ನಾಗಪ್ಪ ಆಲಕನೂರ, ರಮೇಶ ಮೇತ್ರಿ, ಗ್ರಾಂ.ಪಂ. ಉಪಾಧ್ಯಕ್ಷೆ ಪದ್ಮಾವತಿ ಬಜಂತ್ರಿ, ಮಾಜಿ ಅಧ್ಯಕ್ಷ ಮಾಲಾ ಮೋಟಗಿ, ಭಾರತಿ ಬರಗಲ್, ಪ್ರೇಮಾ ಗೋವಿಂದಗೋಳ, ಅರುಣ ಗಾಣಿಗೇರ, ರವಿ ದೊಡವಾಡ, ಹಣಮಂತ ಬಜಂತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ನೂರಾರು ಜನ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಿವಾನಂದ ಬಿರಾದರ ನಿರೂಪಿಸಿ ವಂದಿಸಿದರು.