ಕಡ್ಡಾಯವಾಗಿ ಮತದಾನ ಮಾಡಬೇಕು – ಉಪನ್ಯಾಸಕ ರಾಮದುರ್ಗ

Pratibha Boi
ಕಡ್ಡಾಯವಾಗಿ ಮತದಾನ ಮಾಡಬೇಕು – ಉಪನ್ಯಾಸಕ ರಾಮದುರ್ಗ
WhatsApp Group Join Now
Telegram Group Join Now

, ಜಮಖಂಡಿ;ಪ್ರಜಾಪ್ರಭುತ್ವದ ದೇಶದಲ್ಲಿ ಮತದಾನಕ್ಕೆ ಬಹಳ ಮಹತ್ವವಿದೆ. ನಮ್ಮ ನಾಯಕರನ್ನು ನಾವೇ ಆರಿಸಿಕೊಳ್ಳುವ ಮತದಾನದ ಪದ್ಧತಿಯನ್ನು ಎಲ್ಲರೂ ಪಾಲಿಸಬೇಕು, ಪ್ರತಿಯೊಬ್ಬರೂ ಮತದಾನ ಮಾಡಬೇಕು ಎಂದು ಹಿರಿಯ ಉಪನ್ಯಾಸಕ ಅಶೋಕ ರಾಮದುರ್ಗ ಹೇಳಿದರು. ಬಾಲಕರ ಸರಕಾರಿ ಪ.ಭಾ ಪ.ಪೂ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮ ದಲ್ಲಿ ಮಾತನಾಡಿದರು. ದತ್ತುಗ್ರಾಮ ಮಧುರಖಂಡಿಯ ಭೀರಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಶಿಬಿರ ಜರುಗಿತು.

ಉಪನ್ಯಾಸಕರ ಎಸ.ಬಿ.ಜಿಂಜರವಾಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲೆ ಎನ್.ಎಸ.ಎಸ. ಶಿಬಿರಾಧಿಕಾರಿ ಐ.ಎಸ.ಹೆಬ್ಬಾಳ ಡಾ. ಲಿಂಗಾನಂದ ಗವಿಮಠ. ಉಪನ್ಯಾಸಕ ಶಂಕರ ಸಂಗಾನಟ್ಟಿ, ಸುನೀಲ ಕೋರೆ ಉಪಸ್ಥಿತರಿದ್ದರು. ಶಿಬಿರಾರ್ಥಿ ಸಂತೋಷ ಜನವಾಡ ಸ್ವಾಗತಿಸಿದನು. .ಪ್ರದೀಪ ಹರಿಜನ ನಿರೂಪಿಸಿದನು, ಕೊನೆಯಲ್ಲಿ ಮಲ್ಲಪ್ಪ ನಾಯಿಕ ವಂದಿಸಿದನು

WhatsApp Group Join Now
Telegram Group Join Now
Share This Article