ಹುಬ್ಬಳ್ಳಿ: ಬಸವ ಕೇಂದ್ರದವರು ರವಿವಾರ ೧೪-೪- ೨೦೨೪ ರಂದು ಮುಂಜಾನೆ ೧೦ ಗಂಟೆಗೆ ಗೋಕುಲ ರಸ್ತೆ, ಮುರಾರ್ಜಿನಗರ ೨ನೇ ಹಂತ, ಬಸವ ಕೇಂದ್ರದ ವಿ.ಎಂ.ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ೧೨ನೇ ಶತಮಾನದ ಅನುಭವ ಮಂಟಪದ ಅಧ್ಯಕ್ಷ, ಶ್ರೇಷ್ಟ ವಚನಕಾರ ಅಲ್ಲಮಪ್ರಭು ಜಯಂತಿ ಹಾಗೂ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ ಜಯಂತಿ ಅಂಗವಾಗಿ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಶ್ರೀ ಗುರು ಬಸವಮಂಟಪದ ಶಶಿಧರ ಕರವೀರಶೆಟ್ಟರ ಅವರು ಅಲ್ಲಮಪ್ರಭು ಅವರ ಜೀವನ ಹಾಗೂ ಸಾಧನೆ ಕುರಿತು ಹಾಗೂ ನಿವೃತ್ ವೈದ್ಯಾಧಿಕಾರಿ ಡಾ. ವಿ.ಬಿ.ನಿಟಾಲಿ ಅವರು ಡಾ. ಬಿ.ಆರ್.ಅಂಬೇಡ್ಕರ ಅವರ ಜೀವನ ಹಾಗೂ ಸಾಧನೆ ಕುರಿತು ಅನುಭಾವ ನೀಡಲಿದ್ದಾರೆ.
ಬಸವಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಯಾಳ ಅಧ್ಯಕ್ಷತೆ ವಹಿಸುವರು. ಬಸವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಮಪ್ರಭು ಜಯಂತಿ ಹಾಗೂ ಡಾ.
ಭೀಮರಾವ್ ಅಂಬೇಡ್ಕರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‍್ಯದರ್ಶಿ,
ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ವಿನಂತಿಸಿದ್ದಾರೆ. ಕೋಳಿವಾಡ ಮಾರ್ಬಲ್ಸ &ಚಿmಠಿ; ಗ್ರಾನೈಟ್ಸ ಮಾಲಿಕರಾದ ಶಂಕರ ಕೋಳಿವಾಡ, ಹಾಗೂ ದಾಕ್ಷಾಯಿಣಿ ಕೋಳಿವಾಡ ಅವರ ಭಕ್ತಿದಾಸೋಹ ಸೇವೆ ಮಾಡಲಿದ್ದಾರೆ.