ಬೆಂಗಳೂರು: ರಾಜಕೀಯ ದಿಗ್ಗಜ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಎಸ್.ನಿಜಲಿಂಗಪ್ಪ ಅವರ ಬಂಗಲೆ ಖರೀದಿಸಿ ಪಕ್ಷದ ಕಚೇರಿ ಸ್ಥಾಪಿಸುವಂತೆ ಚಿತ್ರದುರ್ಗ ಕಾಂಗ್ರೆಸ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒತ್ತಾಯಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಣದಲ್ಲಿ ಚಿತ್ರದುರ್ಗದಲ್ಲಿರುವ ನಿಜಲಿಂಗಪ್ಪ ಬಂಗಲೆ ಖರೀದಿಸಬೇಕು ಮತ್ತು ಅಲ್ಲಿ ಪಕ್ಷದ ಜಿಲ್ಲಾ ಕಚೇರಿ ಆರಂಭಿಸಬೇಕು ಎಂದು ಡಿಸಿಸಿ ಅಧ್ಯಕ್ಷ ಟಿ. ಪೀರ್ ಒತ್ತಾಯಿಸಿದ್ದಾರೆ. ಬಂಗಲೆಯನ್ನು ನಿಜಲಿಂಗಪ್ಪ ಸ್ಮಾರಕವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಯೋಜಿಸಿತ್ತು, ಆದರೆ ಸರ್ಕಾರಿ ಅಧಿಕಾರಿಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ ಮಾರಾಟಕ್ಕೆ ವಿಳಂಬ ಮಾಡಿದರು. ಕಳೆದ ನಾಲ್ಕು ವರ್ಷಗಳಿಂದ ನಿಜಲಿಂಗಪ್ಪ ಅವರ ಕುಟುಂಬ ಮಾರಾಟಕ್ಕಾಗಿ ಕಾಯುತ್ತಿದೆ. ಅಲ್ಲದೆ, ಆಸ್ತಿ ವಿಲ್ ಮಾಡಿರುವ ನಿಜಲಿಂಗಪ್ಪ ಅವರ ಮೊಮ್ಮಗ ವಿನಯ್ ಕಿರಣಶಂಕರ್ ಸಿದ್ದಯ್ಯನಹಳ್ಳಿ ಅವರು ಅಮೆರಿಕದಲ್ಲಿ ಉಳಿದುಕೊಂಡಿದ್ದು, ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಿದೆ.
ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದ ವೇಳೆ ಖರ್ಗೆ ಅವರು ಬಂಗಲೆಗೆ ಭೇಟಿ ನೀಡಿ ನಿಜಲಿಂಗಪ್ಪ ಅವರಿಗೆ ನಮನ ಸಲ್ಲಿಸಿದ್ದರು. ಶಿವಕುಮಾರ್ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಕಚೇರಿಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಹೇಳಿದರು. ಇದನ್ನು ಗಮನದಲ್ಲಿಟ್ಟುಕೊಂಡು ಪಕ್ಷದ ಪದಾಧಿಕಾರಿಗಳು ಕಚೇರಿ ಸ್ಥಾಪಿಸಲು ಬಂಗಲೆಯನ್ನು ಖರೀದಿಸಲು ಪರಿಗಣಿಸುವಂತೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. 1990ರಲ್ಲಿ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದರಿಂದ ಕಾಂಗ್ರೆಸ್‌ನಿಂದ ದೂರ ಸರಿದಿದ್ದ ಲಿಂಗಾಯತರಿಗ ಮತ್ತೆ ಕಾಂಗ್ರೆಸ್ ಪರ ಒಲವು ತೋರಿಸಲು ಇದು ಸಹಾಯವಾಗಲಿದೆ ಎಂದು ಹೇಳಲಾಗಿದೆ.