ವಿಜಯಪುರ,ಏಪ್ರಿಲ್ 05: ಜಿಲ್ಲೆಯಲ್ಲಿರುವ ನಿರುಪಯುಕ್ತವಾದ ಅಪಾಯಕಾರಿ ತೆರೆದ ಕೊಳವೆ ಬಾವಿಯನ್ನು ಮುಚ್ಚುವವರಿಗೆ ಹಾಗೂ ಇಂತಹದೊAದು ಮಾನವೀಯತೆಯನ್ನೊಳಗೊಂಡ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನಮ್ಮೊಂದಿಗೆ ಕೈ ಜೋಡಿಸುವವರಿಗೆ 500 ರೂ. ಬಹುಮಾನ ರೂಪದಲ್ಲಿ ಪ್ರೋತ್ಸಾಹಧನ ನೀಡುವುದಾಗಿ ಜಿಲ್ಲೆಯ ಸಮಾಜಸೇವಕ ಹಾಗೂ ಯುವ ಮುಖಂಡ ಮಂಜುನಾಥ.ಎಸ್.ಕಟ್ಟಿಮನಿ ಅವರು ಘೋಷಿಸಿದ್ದಾರೆ.
ಕೊರೆಯಿಸಿದ ನಿರುಪಯುಕ್ತವಾದ ಅಪಾಯಕಾರಿ ತೆರೆದ ವಿಫಲ ಕೊಳವೆ ಬಾವಿಯನ್ನು ಮುಚ್ಚದಿದ್ದರೆ ಆಗುವ ಅನಾಹುತಗಳ ಬಗ್ಗೆ ಗೊತ್ತಿದ್ದರೂ ಅಲ್ಲಲ್ಲಿ ಜನರು ಅವುಗಳನ್ನು ಮುಚ್ಚಲು ಮುಂದಾಗುತ್ತಿಲ್ಲ. ಇವುಗಳಿಂದ ಮುದ್ದು ಕಂದಮ್ಮಗಳ ಜೀವಕ್ಕೆ ಕಂಟಕವುAಟಾಗುತ್ತಿದ್ದರೂ ಇನ್ನೂ ಕೂಡ ಜನರು ಎಚ್ಚೆತ್ತುಕೊಂಡಿಲ್ಲ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಜಿಲ್ಲಾಡಳಿತದ ಹಾಗೂ ಸಂಬAಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ನಿರುಪಯುಕ್ತ ಅಪಾಯಕಾರಿ ವಿಫಲ ತೆರೆದ ಕೊಳವೆ ಬಾವಿಗಳು ಕಂಡುಬAದಲ್ಲಿ ಆ ಪ್ರದೇಶದ ಸಂಪೂರ್ಣ ವಿಳಾಸ ಹಾಗೂ ತೆರೆದ ಬಾವಿಯ ಫೋಟೋ ತಗೆದು ನಮಗೆ (ಮೊ:9353838103 ಸಂಖ್ಯೆಗೆ) ಕಳುಹಿಸುವವರಿಗೆ 500 ರೂ. ಬಹುಮಾನ ನೀಡಲಾಗುತ್ತದೆ.
ಅಂತೆಯೇ ನಿರುಪಯುಕ್ತವಾದ ಅಪಾಯಕಾರಿ ತೆರೆದ ಕೊಳವೆ ಬಾವಿಯನ್ನು ಮುಚ್ಚುವವರಿಗೆ ಕೂಡ 500 ರೂ. ಬಹುಮಾನ ರೂಪದಲ್ಲಿ ಪ್ರೋತ್ಸಾಹಧನ ನೀಡುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.