ಬೆಳಗಾವಿ : ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸವಿನೆನಪಿಗಾಗಿ ಬೆಳಗಾವಿ ತಾಲೂಕಿನ ಕುಕಡೊಳ್ಳಿ ಗ್ರಾಮಕ್ಕೆ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಮಂಜೂರಿ ಮಾಡಿಸಿರುವ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಶಾಲಾಭಿವೃದ್ದಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಶನಿವಾರ ಸಚಿವರ ನಿವಾಸಕ್ಕೆ ಆಗಮಿಸಿದ ಸಮಿತಿಯ ಸದಸ್ಯರು ಸಚಿವರನ್ನು ಹಾಗೂ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿಯರನ್ನು ಸನ್ಮಾನಿಸಿದರು.
ಎಸ್‌ಡಿಎಂಸಿ ಅಧ್ಯಕ್ಷರಾದ ಮಂಜುನಾಥ ಹುಬ್ಬಳ್ಳಿ ಅವರ ನೇತೃತ್ವದಲ್ಲಿ ಗ್ರಾಮದ ಹಿರಿಯರಾದ ವೀರನಗೌಡ ಪಾಟೀಲ್, ಫಕೀರಪ್ಪ ಕುರುಬರ, ಸಿದ್ದಪ್ಪ ಅಡಿಮನಿ, ರಮೇಶ್ ಮರಕಟ್ಟಿ, ಸಿದ್ದರಾಮ ಲಕಮೋಜಿ, ಪುಂಡ್ಲಿಕ್ ಬೈರೋಜಿ, ಕಲ್ಮೇಶ್ ವಡ್ಡಿನ ಮುಂತಾದವರು ಗ್ರಾಮಸ್ಥರ ಪರವಾಗಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಪ್ರಧಾನ ಗುರುಗಳಾದ ನಾಗಪ್ಪ ಕರವಿನಕೊಪ್ಪ, ಶಿಕ್ಷಕರಾದ ಆರ್ ಬಿ ಕೊಡ್ಲಿ, ಎಸ್ ಆರ್ ಅಂಬಗಿ ಉಪಸ್ಥಿತರಿದ್ದರು.