ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ಪೌರ ಕಾರ್ಮಿಕರ ಸೇವೆ ಶ್ರೇಷ್ಠ: ಶಾಸಕ ಲಕ್ಷ್ಮಣ ಸವದಿ

Ravi Talawar
ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ ಪೌರ ಕಾರ್ಮಿಕರ ಸೇವೆ ಶ್ರೇಷ್ಠ: ಶಾಸಕ ಲಕ್ಷ್ಮಣ ಸವದಿ
WhatsApp Group Join Now
Telegram Group Join Now
ಅಥಣಿ : ಪೌರ ಕಾರ್ಮಿಕರು ಕಾಯಕಯೋಗಿಗಳು, ಪ್ರತಿದಿನ ಮುಂಜಾನೆ  ಪಟ್ಟಣದ ಪ್ರತಿಯೊಂದು ರಸ್ತೆ ಮತ್ತು ಮಾರುಕಟ್ಟೆಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಪ್ರತಿನಿತ್ಯ ಮಾಡುತ್ತಿರುವ ಸ್ವಚ್ಛತೆಯ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಾಗುವುದಿಲ್ಲ. ಪಟ್ಟಣದ ಸ್ವಚ್ಛತೆ ಮತ್ತು ಆರೋಗ್ಯವಂತ ಸಮಾಜವನ್ನು ಕಟ್ಟುವಲ್ಲಿ  ಪೌರ ಕಾರ್ಮಿಕರ ಸೇವೆ ಅತ್ಯಂತ ಶ್ರೇಷ್ಠವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಮಂಗಳವಾರ  ಪುರಸಭೆ ಕಾರ್ಯಾಲಯ, ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸಂಘ ದಿಂದ ಪಟ್ಟಣದ ರಾಯಲ್ ಸಭಾಂಗಣದಲ್ಲಿ  ಹಮ್ಮಿಕೊಳ್ಳಲಾಗಿದ್ದ   ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಟ್ಟಣದ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ವಿಶೇಷವಾಗಿದೆ. ಪೌರ ಕಾರ್ಮಿಕರ ದಿನಾಚರಣೆಯ ಮೂಲಕ ಗೌರವಿಸುವುದರ ಜೊತೆಗೆ ಅವರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ತಮ್ಮ ಆರೋಗ್ಯ ಮತ್ತು ಕುಟುಂಬದ ನಿರ್ವಹಣೆಯನ್ನು ತ್ಯಾಗ ಮಾಡಿ  ಸಮಾಜದ ಆರೋಗ್ಯಕ್ಕಾಗಿ  ಚಳಿ ಗಾಳಿ ಮಳೆ ಲೆಕ್ಕಿಸದೆ ಪ್ರತಿದಿನ ಕಾರ್ಯ ನಿರ್ವಹಿಸುತ್ತಾರೆ.  ಪೌರಕಾರ್ಮಿಕರ ಸೇವೆಯನ್ನು ಅತ್ಯಂತ ಶ್ರೇಷ್ಠವಾದದ್ದು, ಏಕೆಂದರೆ ಅವರು  ಮಾಡುವ  ತ್ಯಾಗದ ಮನೋಬಾವನೆ  ಇನ್ನು ಯಾವುದೇ  ವರ್ಗದ ಕಾರ್ಮಿಕರಿಗೆ  ಬರಲು ಸಾಧ್ಯವಿಲ್ಲ. ಅನೇಕ ವರ್ಷಗಳಿಂದ ಪೌರಕಾರ್ಮಿಕರು ಹೊರಗುತ್ತಿಗೆ ಆಧಾರದ ಮೇಲೆ  ಜೀವನದ ಭದ್ರತೆ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಅವರಿಗೆ ಈಗ ಮನೋ ಧೈರ್ಯ ತುಂಬಿದೆ. ಅವರಿಗೆ ಮುಂಬರುವ ದಿನಗಳಲ್ಲಿ  ಆರೋಗ್ಯ ಯೋಜನೆಯ  ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
  ಪುರಸಭೆ ಮುಖ್ಯ ಅಧಿಕಾರಿ  ಅಶೋಕ ಗುಡಿಮನಿ  ಪ್ರಾಸ್ತಾವಿಕವಾಗಿ ಮಾತನಾಡಿ  ನಮ್ಮ ಪೌರಕಾರ್ಮಿಕರು  ಪಟ್ಟಣದ ಸ್ವಚ್ಛತೆ ಹಾಗೂ  ಜನರ ಆರೋಗ್ಯಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುತ್ತಾರೆ. ಅವರು ತಮ್ಮ ಆರೋಗ್ಯದ ಮತ್ತು ತಮ್ಮ ಕುಟುಂಬದ ನಿರ್ವಹಣೆಯನ್ನು  ತ್ಯಾಗ ಮಾಡಿ  ಸೇವೆ ಸಲ್ಲಿಸುತ್ತಿರುವ ಕಾರ್ಯ ಅನನ್ಯ. ಅವರಿಗೆ ರಾಜ್ಯ ಸರ್ಕಾರ ಆರೋಗ್ಯ ಯೋಜನೆಯ ಸವಲತ್ತುಗಳು ದೊರೆಯುವಂತೆ  ಆರೋಗ್ಯ ವಿಮೆ ಕಾರ್ಡ್ ಗಳನ್ನು ಒದಗಿಸುವುದು ಅಗತ್ಯ ಎಂದು ಶಾಸಕರಲ್ಲಿ ಮನವಿ ಮಾಡಿದರು.
 ಈ ಸಂದರ್ಭದಲ್ಲಿ  ಶಾಸಕ ಲಕ್ಷ್ಮಣ ಸವದಿ  ಪೌರ ಕಾರ್ಮಿಕರಿಗೆ ಬಟ್ಟೆಗಳನ್ನ ಉಡುಗೊರೆಯಾಗಿ ನೀಡಿದರು. ಈ ಸಂದರ್ಭದಲ್ಲಿ  ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.
 ಈ ಸಂದರ್ಭದಲ್ಲಿ  ಪುರಸಭೆಯ ಅಧ್ಯಕ್ಷ  ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ರಾಜ್ಯ ಪೌರಸೇವಾ ನೌಕರರ ಸಂಘದ ತಾಲೂಕ ಅಧ್ಯಕ್ಷ  ಬಸವರಾಜ ಕಾಂಬಳೆ, ಪುರಸಭೆ ಸದಸ್ಯರಾದ ರಾವಸಾಬ ಐಹೊಳೆ, ಸಂತೋಷ ಸಾವಡಕರ, ಸೈಯದ್ ಅಮೀನ್ ಗದ್ದ್ಯಾಳ, ರಿಯಾಜ್ ಸನದಿ, ವಿಲನ್ ಯಳಮಲ್ಲೆ, ಮಲ್ಲಿಕಾರ್ಜುನ ಬುಟಾಳಿ, ಮಲ್ಲು ಹುದ್ದಾರ, ವಿನಾಯಕ ದೇಸಾಯಿ, ಬಸವರಾಜ ಪಾಟೀಲ, ಬಸು ನಾಯಕ,  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪುರಸಭೆ ಮುಖ್ಯ ಅಧಿಕಾರಿ  ಅಶೋಕ ಗುಡಿಮನಿ ಸ್ವಾಗತಿಸಿದರು. ಸಂಗಮೇಶ ಹಚ್ಚಡದ ನಿರೂಪಿಸಿದರು. ಬಸವರಾಜ ಕಾಂಬಳೆ ವoದಿಸಿದರು.
WhatsApp Group Join Now
Telegram Group Join Now
Share This Article