ಬೆಂಗಳೂರು, ಮೇ 05: ವಕೀಲ ಜಗದೀಶ್ಶವ ಇತ್ತೀಚೆಗೆ ನಗರದ ನೈಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆ ಆಗಿತ್ತು. ರಸ್ತೆ ಪಕ್ಕದಲ್ಲಿ ಅನಾಥವಾಗಿ ಬಿದಿದ್ದ ಮೃತದೇಹ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಸುಮಾರು 20 ಪೊಲೀಸರ ತಂಡ ಈ ಘಟನೆ ಹಿಂದಿನ ರಹಸ್ಯ ಭೇದಿಸಲು ಮುಂದಾಗಿದ್ದರು. ಅದರಂತೆಯೇ ಇದೀಗ ಪೊಲೀಸರ ತನಿಖೆ ವೇಳೆ ಸಾವಿನ ಕಾರಣ ಬಯಲಾಗಿದೆ. ವಕೀಲ ಜಗದೀಶ್ ಸಾವಿಗೆ ರೋಡ್ ರೇಜ್ ಕಾರಣವಾಗಿದೆ.
ವಕೀಲ ಜಗದೀಶ್ ನೈಸ್ ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ಲಾರಿಯೊಂದು ಟಚ್ ಆಗಿದೆ. ಹಿಗಾಗಿ ಕಾರು ನಿಲ್ಲಿಸಿ ಲಾರಿ ಚಾಲಕನ ಬಳಿ ಹೋಗಿ ಜಗದೀಶ್ ವಾಗ್ವಾದ ಮಾಡಿದ್ದಾರೆ. ಈ ವಾಗ್ವಾದದ ಭರದಲ್ಲಿ ತಮಗೆ ಅರಿವಿಲ್ಲದೆ ನಡು ರಸ್ತೆಗೆ ಬಂದಿದ್ದ ಜಗದೀಶ್ಗೆ ಅದೇ ವೇಳೆ ವೇಗವಾಗಿ ಬರುತ್ತಿದ್ದ ಮತ್ತೊಂದು ಲಾರಿ ಟಚ್ ಆಗಿದೆ. ಇದು ಆ ಲಾರಿ ಚಾಲಕನ ಅರಿವಿಗೆ ಬಂದಿಲ್ಲ.
ಲಾರಿ ಟಚ್ ಆಗುತ್ತಿದ್ದಂತೆ ತಕ್ಷಣ ಕೆಳಗೆ ಬಿದ್ದ ಜಗದೀಶ್ ತೀವ್ರ ರಕ್ತಸ್ತ್ರಾವವಾಗಿ ಸಾವನ್ನಪಿದ್ದಾರೆ. ಜಗದೀಶ್ಗೆ ಟಚ್ ಮಾಡಿದ್ದ ಲಾರಿ ಚಾಲಕನಿಗೆ ಏನೋ ತಾಗಿದೆ ಎಂದು ಸುಮಾರು ಅರ್ಧ ಕಿ.ಮೀ ಮುಂದೆ ಹೋದ ಮೇಲೆ ಅನ್ನಿಸಿದೆ. ಬಳಿಕ ಚಾಲಕ ಲಾರಿ ನಿಲ್ಲಿಸಿ ಪರಿಶೀಲನೆ ಮಾಡಿದ್ದು, ಏನೂ ಆಗಿಲ್ಲ ಅಂದುಕೊಂಡು ಮತ್ತೆ ತೆರಳಿದ್ದಾರೆ. ಸದ್ಯ ಕೆಂಗೇರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.