ಲಾರೆನ್ಸ್​ ಬಿಷ್ಣೋಯಿ ಸಂದರ್ಶನಕ್ಕೆ ನೆರವು; ಡಿಎಸ್‌ಪಿ ದರ್ಜೆ ಅಧಿಕಾರಿ ವಜಾ

Ravi Talawar
ಲಾರೆನ್ಸ್​ ಬಿಷ್ಣೋಯಿ ಸಂದರ್ಶನಕ್ಕೆ ನೆರವು; ಡಿಎಸ್‌ಪಿ ದರ್ಜೆ ಅಧಿಕಾರಿ ವಜಾ
WhatsApp Group Join Now
Telegram Group Join Now

ಚಂಡೀಗಢ: ಪೊಲೀಸ್​ ಕಸ್ಟಡಿಯಲ್ಲಿರುವಾಗಲೇ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಸಂದರ್ಶನವನ್ನು ರೆಕಾರ್ಡ್​ ಮಾಡಲು ಖಾಸಗಿ ವಾಹಿನಿಗೆ ನೆರವಾದ ಆರೋಪದಡಿ ಡಿಎಸ್​ಪಿ ದರ್ಜೆಯ ಅಧಿಕಾರಿಯನ್ನು ಪಂಜಾಬ್​ ಸರ್ಕಾರ ಹುದ್ದೆಯಿಂದಲೇ ವಜಾ ಮಾಡಿದೆ.

ರಾಜ್ಯ ಗೃಹ ಸಚಿವಾಲಯದ ಕಾರ್ಯದರ್ಶಿ ಗುರುಕೀರತ್ ಕಿರ್ಪಾಲ್ ಸಿಂಗ್ ಈ ಆದೇಶ ಹೊರಡಿಸಿದ್ದಾರೆ. ಡಿಎಸ್​ಪಿ ಗುರ್ಶೆರ್​ ಸಿಂಗ್​ ಸಂಧು ಸಂವಿಧಾನದ ವಿಧಿ 311ರ ಅಡಿ ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮಾರ್ಚ್​ 2023ರಂದು ಖಾಸಗಿ ಸುದ್ದಿ ಚಾನಲ್​ ಬಿಷ್ಣೋಯಿಯ ಎರಡು ಸಂದರ್ಶನವನ್ನು ಪ್ರಸಾರ ಮಾಡಿತ್ತು.

ಕಳೆದ ಜುಲೈನಲ್ಲಿ ಪಂಜಾಬ್​​ ಪೊಲೀಸ್​ ಇಲಾಖೆಯ ವಿಶೇಷ ತನಿಖಾ ತಂಡ ಹೈಕೋರ್ಟ್​​ಗೆ ಈ ಕುರಿತು ವರದಿ ನೀಡಿತ್ತು. ಈ ವರದಿಯಲ್ಲಿ, ಎರಡು ವರ್ಷಗಳ ಹಿಂದೆ ಮೊಹಾಲಿಯ ಖರಾರ್‌ನಲ್ಲಿ ಪೊಲೀಸ್​ ವಶದಲ್ಲಿದ್ದ ಬಿಷ್ಣೋಯಿ ಸಂದರ್ಶನದ ಮೂಲಕ ಅಪರಾಧ ಮತ್ತು ಅಪರಾಧಿಗಳನ್ನು ವೈಭವೀಕರಿಸಲಾಗಿದೆ ಎಂದು ತಿಳಿಸಲಾಗಿದೆ.

ಗಾಯಕ ಸಿಧು ಮೂಸೆವಾಲ ಹತ್ಯೆ ಪ್ರಕಾರಣದಲ್ಲಿ 2022ರಿಂದ ಬಿಷ್ಣೋಯಿ ಪೊಲೀಸ್​ ವಶದಲ್ಲಿದ್ದಾನೆ. ಕಳೆದ ಅಕ್ಟೋಬರ್​ನಲ್ಲಿ ಬಿಷ್ಣೋಯಿ ಸಂದರ್ಶನ ಪ್ರಕರಣ ಸಂಬಂಧ 7 ಪೊಲೀಸ್​ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.

WhatsApp Group Join Now
Telegram Group Join Now
Share This Article