ಗಾಯಾಳು ಕೂಲಿ ಕಾರ್ಮಿಕರಿಗೆ ಸರಕಾರದ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ: ಶಾಸಕ ಲಕ್ಷ್ಮಣ ಸವದಿ

Pratibha Boi
ಗಾಯಾಳು ಕೂಲಿ ಕಾರ್ಮಿಕರಿಗೆ ಸರಕಾರದ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ: ಶಾಸಕ ಲಕ್ಷ್ಮಣ ಸವದಿ
WhatsApp Group Join Now
Telegram Group Join Now

ಅಥಣಿ: ಕೂಲಿ ಕೆಸಕ್ಕೆ ಹೋರಟಿದ್ದ  ೩೦ ಹೆಚ್ಚು ಮಹಿಳಾ ಕೂಲಿ ಕಾರ್ಮಿಕರು ವಾಹನ ಪಲ್ಟಿಯಾಗಿ ಎಲ್ಲರಿಗೂ ಗಂಬೀರವಾಗಿ ಗಾಯಗೊಂಡ ಹಿನ್ನಲೆಯಲ್ಲಿ ಅಥಣಿ ಸರಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು ಶಾಸಕ ಲಕ್ಷ್ಮಣ ಸವದಿ ಅವರ ಯೋಗಕ್ಷೇಮ ವಿಚಾರಿಸಿ ಸಾಂತ್ವನ ಹೇಳಿ ಬಡ ಹಾಗೂ ಕೂಲಿ ಕಾರ್ಮಿಕರ ಆಸ್ಪತ್ರೆಯ ವ್ಯಚ್ಚವನ್ನು ಸರಕಾರದಿಂದ ಕೊಡಿಸಲು ಪ್ರಾಮಾಣಿಕ ಪ್ರೇಯತ್ನ ಮಾಡುವದಾಗಿ ಹೇಳಿದರು
ಅಥಣಿ ಪಟ್ಟಣದ ಸರಕಾರಿ ಆಸ್ಪತ್ರೆಗೆ ಬುಧವಾರ ಬೇಟಿ ನೀಡಿದ ಶಾಸಕ ಲಕ್ಷ್ಮಣ ಸವದಿ ಅವರು ಗಾಯಗೊಂಡ ೩೦ ಕ್ಕೂ ಹೆಚ್ಚು ಜನ ಬಡ ಹಾಗೂ ಕೂಲಿ ಕಾರ್ಮಿಕರ ಯೋಗಕ್ಷೇಮವನ್ನು ವಿಚಾರಿಸಿದರು. ಅನಿರೀಕ್ಷಿತವಾಗಿ ನಡೆದಿರುವ ಘಟನೆಯಲ್ಲಿ ಅಥಣಿ ತಾಲೂಕಿನ ಸತ್ತಿ ಗ್ರಾಮದ ಕಾರ್ಮಿಕರ ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಅವರಿಗೆ ಯಾವುದೆ ತೊಂದರೆ ಆಗದಂತೆ ಕ್ರಮ ವಹಿಸಲು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಬಸನಗೌಡ ಕಾಗೆ ಅವರಿಗೆ ಸೂಚನೆ ನೀಡಿದರು. ಅಲ್ಲದೆ ಬಡ ಕೂಲಿ ಕಾರ್ಮಿಕರ ವೈಧ್ಯಕೀಯ ವ್ಯಚ್ಚ ಭರಿಸಲು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಮಂಜೂರು ಮಾಡಲು ಪ್ರಾಮಾಣಿಕ ಪ್ರೇಯತ್ನ ಮಾಡುವದಾಗಿ ಹೇಳಿದರು
ಈ ವೇಳೆ ಪುರಸಭೆ ಸದಸ್ಯ ಸಂತೋಷ ಸಾವಡಕರ, ತಾಲೂಕು ವೈಧ್ಯಾದಿಕಾರಿ ಬಸನಗೌಡ ಕಾಗೆ, ಡಾ. ಆನಂದ ಕುಲಕರ್ಣಿ, ಡಾ. ಸಿ ಎಸ್ ಪಾಟೀಲ, ಅಥಣಿ ಸಿಪಿಐ ಸಂತೋಷ ಹಳ್ಳೂರ, ಮುಖಂಡರಾದ ಜಡೇಪ್ಪ ಕುಂಬಾರ, ಮಲ್ಲೂ ಕೂಳ್ಳೋಳ್ಳಿ, ಮುತ್ತು ಮೊಕಾಶಿ, ಬಸವರಾಜ ತೇರದಾಳ, ಮಹಾಂತೇಶ ಬಾಡಗಿ, ಮಂಜೂ ಹೋಳಿಕಟ್ಟಿ, ಪ್ರವೀಣ ಜಾಧವ,ಪ್ರಕಾಶ ನರೋಟ್ಟಿ, ಮಂಜೂ ನೂಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
Share This Article