ವನಮೊಹೋತ್ಸವ ಮಕ್ಕಳಲ್ಲಿ ನಿಸರ್ಗ ಪ್ರೇಮವನ್ನು ಹುಟ್ಟು ಹಾಕುತ್ತದೆ : ಶಾಸಕ ಲಕ್ಷ್ಮಣ ಸವದಿ

Hasiru Kranti
ವನಮೊಹೋತ್ಸವ ಮಕ್ಕಳಲ್ಲಿ ನಿಸರ್ಗ ಪ್ರೇಮವನ್ನು ಹುಟ್ಟು ಹಾಕುತ್ತದೆ : ಶಾಸಕ ಲಕ್ಷ್ಮಣ ಸವದಿ
WhatsApp Group Join Now
Telegram Group Join Now
ಅಥಣಿ 26: ನಿಸರ್ಗದ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವದು ಪ್ರಮುಖವಾದ ಕಾರ್ಯವಾಗಿದೆ. ಮಕ್ಕಳಿಗೆ ಇದು ಪ್ರೇರಣಾದಾಯಕವಾಗಿದೆ. ತಾಲೂಕಿನಲ್ಲಿ 5 ವರ್ಷಗಳಲ್ಲಿ 1 ಲಕ್ಷ 25 ಸಾವಿರ ಮರಗಳನ್ನು ಸರಕಾರಿ ಶಾಲಾ ಆವರಣದಲ್ಲಿ ನಡುವ ಸಂಕಲ್ಪ ಮಾಡಿದ್ದು ಎಲ್ಲ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಸಹಕರಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು
ತಾಲೂಕಿನ ಮುರಗುಂಡಿ ಗ್ರಾಮದಲ್ಲಿ ಶುಕ್ರವಾರ ನಡೆದ ಶಾಲಾ ಶಿಕ್ಷಣ ಇಲಾಖೆ, ಸರ್ಕಾರಿ ಪ್ರೌಢಶಾಲೆ ಮುರಗುಂಡಿ, ಪ್ರಾದೇಶಿಕ ಅರಣ್ಯ ವಲಯ ಅಥಣಿ, ಹಾಗೂ ಗ್ರಾಮ ಪಂಚಾಯತ ಮುರಗುಂಡಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಹಾಗೂ ವಿದ್ಯಾರ್ಥಿಗಳಿಗೆ 200 ಕೊಡೆಗಳ (ಛತ್ರಿ) ವಿತರಣಾ ಕಾರ್ಯಕ್ರಮವನ್ನು ಶಾಸಕ ಲಕ್ಷ್ಮಣ ಸವದಿ ಅವರು ಸಸಿಗೆ ನೀರುಣಿಸವು ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಎಲ್ಲ ವಿದ್ಯಾರ್ಥಿಗಳಿಗೆ ಸಸಿಗಳನ್ನು ದತ್ತು ತೆಲಗೆದುಕೊಂಡು ಪ್ರತಿಯೊಂದು ಸಸಿಯೂ ಹೆಮ್ಮರವಾಗಿ ಬೆಳೆಯಬೇಕು. ನೆಟ್ಟಿರುವ ಸಸಿಗಳಿಗೆ ಪ್ರತಿದಿನ ನೀರು, ಗೊಬ್ಬರ ಹಾಕಿ ಚನ್ನಾಗಿ ಬೆಳೆಸಿ ಸುಂದರ ಹಾಗೂ ಸ್ವಚ್ಚ ಪರಿಸರ ನಿರ್ಮಾಣಕ್ಕೆ ಕೈಜೊಡಿಸಬೇಕು. ಅಲ್ಲದೆ ಮಕ್ಕಳಿಗೆ ಮಳೆಗಾಲದಲ್ಲಿ ಶಾಲೆಗೆ ಬರಲು ತೊಂದರೆ ಆಗಬಾರದು ಅನ್ನುವ ಹಿನ್ನಲೆಯಲ್ಲಿ ನಮ್ಮ ಅಭಿಮಾನಿ ಮಲ್ಲು ಕುಳ್ಳೋಳ್ಳಿ ಅವರು 200 ಛತ್ರಿಗಳನ್ನು ನೀಡಿರುವದು ಸಂತಸ ತಂದಿದೆ, ಮುರಗುಂಡಿ ಜನರ ಪರವಾಗಿ ಮತ್ತು ನನ್ನ ವೈಯಕ್ತಿಕ ಮಲ್ಲು ಕುಳ್ಳೋಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತನೆ ಇಂತಹ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಈ ವೇಳೆ ಮುರಗುಂಡಿ ಗ್ರಾ.ಪಂ ಅಧ್ಯಕ್ಷ ಅಶ್ವಿನಿ ಕಾಟಕರ, ಎಸ್ ಡಿ ಎಮ್ ಸಿ ಅಧ್ಯಕ್ಷ ಮಕಬುಲ ನದಾಫ್, ಮಾಜಿ ಜಿ.ಪಂ ಸದಸ್ಯ ವಿನಾಯಕ ಬಾಗಡಿ, ಗ್ರಾಮ ಪಂಚಾಯತ ಸದಸ್ಯರಾದ ಬರಮಾ ಮಗಾಡಿ, ಮಹಾದೇವ ಕೋರಿ, ರಮೇಶ ಕುಸನಾಳೆ, ಪರಸಭೆ ಸದಸ್ಯ ರಾಜು ಗುಡೊಡಗಿ, ಕ್ಷೇತ್ರಶಿಕ್ಷಣಾಧಿಕಾರಿ ಎಮ್. ಆರ್ ಮುಂಜೆ, ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಈರಣ್ಣ ವಾಲಿ ಸೇರಿದಂತೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು, ಹಾಗೂ ಗ್ರಾಮದ ಮುಖಂಡರಾದ ಭೀಮು ಸಡ್ಡಿ, ಕುಮಾರ ಪಾಟೀಲ, ಹೋಳೆಪ್ಪ ಪೂಜಾರಿ, ಅಮರ ಕೋಳಿ, ಮುರುಗೇಪ್ಪ ಕೋಳಿ, ಸುನಿಲ ಪವಾರ, ವಿಶಾಲ ನಿಂಬಾಳ, ಗಜ್ಜು ಜಬ್ಬಂಗಿ, ಮುತ್ತುರಾಜ ಮೊಕಾಶಿ, ಬಸ್ಸು ತೇರದಾಳ,  ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article