ಬಳ್ಳಾರಿ, ಜ.21: ಮುಂಬರುವ 2026-27 ನೇ ಸಾಲಿನ ಬಜೆಟ್ ನಲ್ಲಿ ಜಿಲ್ಲೆಗೆ ಸರ್ಕಾರದಿಂದ ಕಾನೂನು ಮತ್ತು ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವಂತೆ ಸಿಎಂ.ಸಿದ್ದರಾಮಯ್ಯನವರಿಗೆ ತಾವು ಮನವಿ ಮಾಡಿರುವುದಾಗಿ ನಗರ ಶಾಸಕ ಭರತ್ ರೆಡ್ಡಿ ಹೇಳಿದ್ದಾರೆ.
ನಗರದ 2 ನೇ ವಾರ್ಡಿನಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಳ್ಳಾರಿಯ ಹಳೇ ನ್ಯಾಯಾಲಯದ ಆವರಣದಲ್ಲಿ ಸರ್ಕಾರದಿಂದ ಕಾನೂನು(ಲಾ) ಕಾಲೇಜು ಮತ್ತು ಬಳ್ಳಾರಿ ನಗರಕ್ಕೆ ಹತ್ತಿರ ವಾಗುವಂತೆ ಕಂಪ್ಲಿ ವಿ್ದಾನ ಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕೋಳೂರು ಸುತ್ತ ಮುತ್ತಲಿನಲ್ಲಿ ಇಂಜಿನಿಯರಿಂಗ್ ಕಾಲೇಜು ಆರಂಭಿಸಬೇಕೆಂದು ಮನವಿ ಮಾಡಿದೆಂದು ತಿಳಿಸಿ. ಈ ಕಾಲೇಜುಗಳ ಆರಂಭಕ್ಕೆ ಈ ಬಾರಿಯ ಬಜೆಟ್ ನಲ್ಲಿ ಅನುಮೋದನೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು.
ವಾಲ್ಮೀಕಿ ವಿಗ್ರಹ:
ಬಿಜೆಪಿಯವರು ಸಮಾವೇಶ ನಡೆಸಿ, ನಿಮ್ಮನ್ನು ಹಿಗ್ಗಾ ಮುಗ್ಗಾ ಬೈದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಮಾಧ್ಯಮಗಳ ಪ್ರಶ್ನೆಗೆ. ಬಿಜೆಪಿಯವರು ಏನೇ ಮಾತನಾಡಿದ್ರು..
ವಾಲ್ಮೀಕಿ ಪುತ್ರಳಿ ಉದ್ಘಾಟನೆ ಅಗೋವರೆಗೂ ಏನು ಮಾತನಾಡಲ್ಲ. ಜ.3.ರಂದು ನಗರದಲ್ಲಿ ನಡೆಯ ಬೇಕಿದ್ದ ಮಹರ್ಷಿ ವಾಲ್ಮೀಕಿ ವಿಗ್ರಹದ ಪ್ರತಿಷ್ಟಾಪನೆ ಮುಂದೋಗಿದೆ. ಅದರ ಪ್ರತಿಷ್ಟಾಪನೆ ಆಗುವವರೆಗೆ ಮುಂದೂಡಲು ಕಾರಣವಾದ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು:
ಸಮ್ಮೇಳನ:
ಬಳ್ಳಾರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಪ್ರತಿಕ್ರಿಯಿಸಿ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ವಿವಾದ ಬಗೆಹರಿದ ಮೇಲೆ ಈ ಕುರಿತು ನಿರ್ಣಯಿಸಲಿದೆಂದು ಹೇಳಿದರು.
ಏನಿದ್ದರೂ ಅಭಿವೃದ್ಧಿ:
ನನ್ನ ಮುಂದೆ ಏನಿದ್ದರೂ, ಅಭಿವೃದ್ದಿ ವಿಷಯ, ಇದೀಗ ಎರಡನೇ ವಾರ್ಡ್ ಗೆ 3 ಕೋಟಿ ಅನುದಾನ ದೊರೆತಿದೆ. ಈ ಅನುದಾನದಿಂದ ಅಭಿವೃದ್ಧಿ ಸ್ವರೂಪ ಹೇಗಿರಬೇಕು ಎಂದು ಸ್ಥಳಿಯ ಪಾಲಿಕೆ ಸದಸ್ಯರು, ಮುಖಂಡರೊಂದಿಗೆ ಚರ್ಚಿಸಲಿದೆಂದು ಹೇಳಿದರು. ಇದೇ ರೀತಿ ಇನ್ನಿತರ ವಾರ್ಡುಗಳ ಅಭಿವೃದ್ಧಿಯನ್ನು ಸಹ ಕೈಗೊಳ್ಳಲಿದೆಂದರು.