ಅದ್ದೂರಿ ಮಹಿಳಾ ಸಂಸ್ಕೃತಿ ಉತ್ಸವ

Ravi Talawar
ಅದ್ದೂರಿ ಮಹಿಳಾ ಸಂಸ್ಕೃತಿ ಉತ್ಸವ
WhatsApp Group Join Now
Telegram Group Join Now

ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಪದವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಅಡಿಯಲ್ಲಿ ಇಂದು ಮಹಿಳಾ
ಸಂಸ್ಕೃತಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಬೆಳಗಾವಿ ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರಾದ ನಜಮಾ ಎಮ್ ಪಿರಜಾದೆ ಅವರು ಆಗಮಿಸಿ ಭಾರತೀಯ
ಸಂಸ್ಕೃತಿಯನ್ನು ಬಿಂಬಿಸುವ ಮಹಿಳಾ ಸಂಸ್ಕೃತಿ ಹಬ್ಬವನ್ನು ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ.

ಮಹಿಳೆಯು ಸಾಂಸ್ಕೃತೀಯ ಆರಾಧಕಳು ಜಗತ್ತಿನಲ್ಲಿ ಶ್ರೇಷ್ಠವಾದ ಸಂಸ್ಕೃತಿ ಭಾರತೀಯ ಸಂಸ್ಕೃತಿ ಇಂಥಹ ಸಂಸ್ಕೃತಿಯನ್ನು ಕೊಡುಗೆಗಳನ್ನು ನೋಡಿದಾಗ ಇಂಥ
ಕಾರ್ಯಕ್ರಮಗಳು ಅತಿ ಅವಶ್ಯಕ ಎಂದು ಮಾತನಾಡಿದರು. ಮುಖ್ಯ ಅತಿಥೀಯಾಗಿ ಜಿಲ್ಲಾ ಪಂಚಾಯತ ಮಾಜಿ ಸದ್ಯಸರಾದ ರೋಹಿಣಿ ಪಾಟೀಲ ಮಾತನಾಡಿ ಮಹಿಳೆ ಎಲ್ಲ
ರಂಗಗಳಲ್ಲಿ ಪಾಲ್ಗೊಂಡು ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳುವುದರೊಂದಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಂತರಾಗಬೆಕೆಂದು ಹೆಳಿದರು.

ಮತ್ತೂರ್ವ ಅಥೀತಿಯಾಗಿ ಆಗಮೀಸಿದ ಬೈಲಹೊಂಗಲ ಉಪವಿಭಾಗದ ಸಹಕಾರ ಸಂಘಗಳ ನಿಂಬಧಕರಾದ ಶಾಹಿನ ಅಖ್ತ್ತರ್ ಮಾತನಾಡಿ ಸ್ಪರ್ದಾತ್ಮಕ ಪರೀಕ್ಷೆಗಳಲಲ್ಲಿ
ತಮನ್ನು ತೊಡಗಿಸಿಕೊಂಡು ಐ.ಎ.ಎಸ್. ಕೆ,ಎ,ಎಸ್ ಐ.ಪಿ.ಎಸ್ ಮುಂತಾದ ಸ್ಪರ್ದಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಯಶಸನ್ನು ಪಡೇದುಕೊಳ್ಳುವಂತರಾಗಬೆಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ ಸಿ.ಬಿ.ಗಣಾಚಾರಿ ವಹಿಸಿಕೊಂಡಿದ್ದರು.

ಕಾಲೇಜಿನ ಉಪನ್ಯಾಸಕ ಮತ್ತು ಬೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀದೇವಿ ಹಿರೇಮಠ ಸ್ವಾಗತಿಸಿದಳು. ಸಬೀನಾ ಪರಸಪ್ಪನ್ನವರ ನಿರೂಪಿಸಿದಳು. ರಾಜೇಶ್ವರಿ ಜಮನಾಳ ವಂದಿಸಿದಳು. ವಿದ್ಯಾರ್ಥಿನಿಯರಿಂದ ಮನರಂಜನಾ ಕಾರ್ಯಕ್ರಮಗಳು ನೆರೆವೇರಿದವು.

WhatsApp Group Join Now
Telegram Group Join Now
Share This Article