ಧಾರವಾಡ: ಕಾಸ್ಮಸ್ ಕ್ಲಬ್‌ನಲ್ಲಿ ಆಯೋಜಿಸಿರುವ ಕೆಟಿಟಿಎ ಸಂಯೋಜಿತ ಕಾಸ್ಮಸ್ ಶತಮಾನೋತ್ಸವ ಕಪ್ ಟೇಬಲ್ ಟೆನಿಸ್ ಟೂರ್ನಿಗೆ ಐಎಫ್‌ಎಸ್ ಯತೀಶ್ ಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿ, ಆಟದಲ್ಲಿ ಗೆಲವು ಸೋಲು ಇರುವುದು ಸಹಜ. ಎಲ್ಲರೂ ಕ್ರೀಡಾಮನೋಭಾವದಿಂದ ಆಟ ಆಡಿ ಎಂದು ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಟೂರ್ನಿ ಅ. 27 ರಿಂದ 29 ರವರೆಗೆ ನಡೆಯಲಿದೆ. ಇದರಲ್ಲಿ ಬೆಂಗಳೂರು, ಮೈಸೂರು, ದಾವಣಗೇರಿ, ಮಂಗಳೂರು, ಬಾಗಲಕೋಟೆ, ಹಳಿಯಾಳ, ದಾಂಡೇಲಿ ಸೇರಿದಂತೆ ವಿವಿಧ ಜಿಲ್ಲೆಯ ಸುಮಾರು 250ಕ್ಕೂ ಹೆಚ್ಚು ಕ್ರೀಡಾ ಪಟುಗಳು ಭಾಗವಹಿಸಿದ್ದಾರೆ.
8 ವಿಭಾಗದಲ್ಲಿ ಪಂದ್ಯಗಳು ನಡೆಯಲಿದೆ. ಇದರಲ್ಲಿ ಅಂಡರ್ 15, 17, 19 ವಯಸ್ಸಿನಲ್ಲಿ ಪುರುಷ ಹಾಗೂ ಮಹಿಳಾ ತಂಡಗಳ ಪಂದ್ಯಗಳು ಭಾಗವಹಿಸಲಿವೆ.
ಕ್ಲಬ್ ಜಿ ಸಮಿತಿ ಸದಸ್ಯರಾದ ಎ.ಎಸ್.ಹಿರೇಮಠ, ಎಸ್.ಬಿ.ಕಿತ್ತೂರು, ಎಚ್.ಎಫ್.ಹೆಬ್ಬಾಳ, ಎಂ.ಎಸ್.ಹಾಲಭಾವಿ, ವಿಜಯ ಸುಣಗಾರ, ಬಿ.ಎನ್.ಜಮಕಂಡಿ, ರವಿ ನಾಯಕ, ಸೈಯದ ಸನದಿ ಸೇರಿದಂತೆ ಇತರರಿದ್ದರು.