ಮಾನವ ಸಂಬಂಧಗಳನ್ನು ನಗು ಬೆಸೆಯುತ್ತದೆ: ಬಿ.ಎಸ್. ಗವಿಮಠ

Ravi Talawar
ಮಾನವ ಸಂಬಂಧಗಳನ್ನು ನಗು ಬೆಸೆಯುತ್ತದೆ: ಬಿ.ಎಸ್. ಗವಿಮಠ
WhatsApp Group Join Now
Telegram Group Join Now

ಬೆಳಗಾವಿ,14 : ಇಂದಿನ ತಾಂತ್ರಿಕ ಯುಗದಲ್ಲಿ ವಾಟ್ಸಪ್, ಫೇಸಬುಕ್ ಗಳು ಮನುಷ್ಯ ಮನುಷ್ಯರ ನಡುವಿನ ಪ್ರೀತಿ, ವಿಶ್ವಾಸ, ಸ್ನೇಹಗಳನ್ನು ಕಡೆಯುತ್ತಲಿವೆ. ಇಂದಿನ ದಿನಗಳಲ್ಲಿ ಹಾಸ್ಯದ ಕೊರತೆಯಿದ್ದು ಆ ಕೊರತೆಯನ್ನು ಹಾಸ್ಯಕೂಟ ತುಂಬುತ್ತಲಿದೆ. ಮಾನವ ಸಂಬಂಧಗಳನ್ನು ನಗು ಬೆಸೆಯುತ್ತದೆ ಎಂದು ಹಿರಿಯ ಲೇಖಕ ಬಿ. ಎಸ್. ಗವಿಮಠ ಅವರು ಇಂದಿಲ್ಲಿ ಹೇಳಿದರು.

ನಗರದ ಹಾಸ್ಯಕೂಟ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೧೧ ಶನಿವಾರದಂದು ಸಾಯಂಕಾಲ ೪-೩೦ ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ವೃತ್ತಿ ಪ್ರವೃತ್ತಿಗಳಲ್ಲಿ ಹಾಸ್ಯ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿ. ಎಸ್. ಗವಿಮಠ ಅವರು ಮೇಲಿನಂತೆ ಅಭಿಪ್ರಾಯ ಪಟ್ಟರು.

ಮುಂದೆ ಮಾತನಾಡುತ್ತ ಗವಿಮಠ ಅವರು ಗಡಿನಾಡಾದ ಬೆಳಗಾವಿಯಲ್ಲಿ ಕನ್ನಡ ಉಳಿಸಲು ಬೆಳೆಸುವಲ್ಲಿ ಹಲವಾರು ಸಂಘಟನೆಗಳು ಕೆಲಸ ಮಾಡುತ್ತ ಬಂದಿವೆ. ಹಾಸ್ಯಕೂಟ ಪ್ರತಿತಿಂಗಳು ವಿಶಿಷ್ಟವಾದ ಹಾಸ್ಯ ಕಾರ್ಯಕ್ರಮಗಳನ್ನು ನೀಡುತ್ತ ಜನರ ಪ್ರೀತಿಗೆ ಪಾತ್ರವಾಗಿದೆ. ಸತತವಾಗಿ ಹತ್ತು ವರ್ಷಗಳಿಂದ
ಜನರನ್ನು ನಗಿಸುತ್ತ ಬಂದಿರುವ ಹಾಸ್ಯಕೂಟದ ಸೇವೆ ಶ್ಲಾಘನೀಯ ಎಂದು ಹೇಳಿದರು.

ಹಾಸ್ಯಕೂಟ ಸಂಚಾಲ ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡುತ್ತ್ತ, ನನ್ನ ವೈಯಕ್ತಿಕ ಜೀವನ ಹಿಂತಿರುಗಿ ನೋಡಿದಾಗ ನನ್ನ ವೃತ್ತಿ ಯಾವುದು ಪ್ರವೃತ್ತಿ ಯಾವುದು ಎಂದು ವಿಂಗಡಿಸುವುದೇ ಕಷ್ಟ. ತಕ್ಕ ಮಟ್ಟಿಗೆ ಪತ್ರಿಕೆ ನನ್ನ ಕೈ ಹಿಡಿದಿರುವುದರಿಂದ ಪತ್ರಿಕೋದ್ಯಮ ನನ್ನ ವೃತ್ತಿ ಎಂದು ಹೇಳಬಹುದು ಎಂದು ಹೇಳಿದರು.

ಮುಂದೆ ಮಾತನಾಡುತ್ತ ಗುಂಡೇನಟ್ಟಿಯವರು, ಡಿ.ಟಿ.ಪಿ. ಪುಟವಿನ್ಯಾಸ, ಮುಖಪುಟ ವಿನ್ಯಾಸ ಹೀಗೆ ಸಾಹಿತ್ಯ ಪುಸ್ತಕ ಪ್ರಕಟನೆ ಕೆಲಸ ಒಂದೆಡೆಯಾದರೆ
ಕನ್ನಡ ಕಾರ್ಯಕ್ರಮಕ್ಕಾಗಿ ಬೇಕಾಗುವ ಆಮಂತ್ರಣ ಪತ್ರಿಕೆ, ಬ್ಯಾನರ್ ಎಲ್ಲವನ್ನು ಮಾಡುತ್ತಿರುವ ಸಂತಸ ಇನ್ನೊಂದೆಡೆ. ಒಟ್ಟಿನಲ್ಲಿ ಕನ್ನಡ ಸಾಹಿತ್ಯದೊಂದಿಗೆಯೇ ಜೀವನವೆಂದು ಹೇಳಿಕೊಳ್ಳಲು ನನಗೆ ತುಂಬ ಅಭಿಮಾನವೆನ್ನಿಸುತ್ತದೆ ಎಂದು ಹೇಳಿದರು.

ಶ್ರೀರಂಗ ಜೋಶಿ, ಉಮೇಶ ಬಡಿಗೇರ, ಡಾ. ಜಿ. ಬಿ. ಪಡಗುರಿ, ಆರ್ ವಿ ಭಟ್, ಬಸವರಾಜ ತಳವಾರ, ವಿಜಯಕುಮಾರ ನೇರ್ಲೆಕರ ಅವರು ಸಂಗೀತ, ನಾಟಕ
ಮತ್ತು ಚಿತ್ರರಂಗ, ವೈದ್ಯಕೀಯ, ಪತ್ರಿಕೆ, ಅಲ್ಲದೇ ಬ್ಯಾಂಕಿಂಕ್ ಕ್ಷೇತ್ರಗಳಲ್ಲಿ ನಡೆದಿರುವ ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡು ಜನರನ್ನು ರಂಜಿಸಿದರು. ಈರಣ್ಣ ಚಿನಗುಡಿ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದರು. ಜಿ. ಎಸ್. ಸೋನಾರ ನಿರೂಪಿಸಿದರು.

WhatsApp Group Join Now
Telegram Group Join Now
Share This Article