ಬೆಳಗಾವಿ : ಕವಳೆವಾಡಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ಹೆಚ್ಚುವರಿ ಕೊಠಡಿಯ ನಿರ್ಮಾಣದ ಕಾಮಗಾರಿಗೆ ಯುವ ಮುಖಂಡ ಮೃಣಾಲ ಹೆಬ್ಬಾಳಕರ್, ಸ್ಥಳೀಯ ಜನ ಪ್ರತಿನಿಧಿಗಳೊಂದಿಗೆ ಸೇರಿ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶಷ ಪ್ರಯತ್ನದ ಫಲವಾಗಿ ಸುಮಾರು 31.79 ಲಕ್ಷ ರೂ. ಮಂಜೂರಾಗಿದ್ದು, 2 ಕೊಠಡಿಗಳು ನಿರ್ಮಾಣಗೊಳ್ಳಲಿವೆ. ಮಕ್ಕಳ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗಬಾರದೆನ್ನುವ ಕಾಳಜಿಯಿಂದ ಹೆಚ್ಚುವರಿ ಕೊಠಡಿ ಒದಗಿಸಲಾಗಿದೆ ಎಂದು ಮೃಣಾಲ ಹೆಬ್ಬಾಳಕರ್ ತಿಳಿಸಿದರು.
ಈ ವೇಳೆ ಯುವರಾಜ ಕದಂ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೇಖಾ ನಾಯ್ಕ್, ಉಪಾಧ್ಯಕ್ಷರಾದ ನಾಮದೇವ್ ಮೊರೆ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜು ಬುರುಡ, ಉಪಾಧ್ಯಕ್ಷರಾದ ಮಲ್ಲಪ್ಪ ಮೊರೆ, ಶಶಿಕಾಂತ ಗಾವಡೆ, ಪ್ರವೀಣ ಮೊರೆ, ಜ್ಯೋತಿಬಾ ಮೊರೆ, ರಘುನಾಥ್ ಮೊರೆ, ಯಲ್ಲಪ್ಪ ಗಾವಡೆ, ಕೇದಾರಿ ಕಣಬರಕರ್, ಕಲ್ಲಪ್ಪ ಯಳ್ಳೂರಕರ್ ಉಪಸ್ಥಿತರಿದ್ದರು.