ಮೂಡಲಗಿ: ಭಕ್ತಿ ಪರಂಪರೆಯಲ್ಲಿ ಭಗವಂತ ಮತ್ತು ಭಕ್ತನಿಗೆ ಇರುವ ಗಾಢವಾದ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಅಂತಹ ಭಕ್ತ ಪುಂಡಲಿಕ ಮಹಾರಾಜ ದೇವಸ್ಥಾನವನ್ನು ಹುಣಶ್ಯಾಳ ಪಿ.ಜಿ ಗ್ರಾಮದಲ್ಲಿ ನಿರ್ಮಾಣ ಮಾಡುವ ಮೂಲಕ ಗ್ರಾಮಸ್ಥರು ಹಿರಿಮೆಗೈದಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಭಕ್ತ ಶ್ರೀ ಪುಂಡಲಿಕ ಮಹಾರಾಜ ದೇವಸ್ಥಾನದ ಹತ್ತಿರ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಸಮುದಾಯ ಭವನ ನಿರ್ಮಾಣ ಮಾಡಿ ಮುಂಬರುವ ದಿನಗಳಲ್ಲಿ ಗ್ರಾಮದ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆ ಹಾಗೂ ವಿಠ್ಠಲ ಭಜನಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಹುಡೇದ, ಸಿದ್ದಾರ್ಥ ಅಥಣಿ, ಮಹಾಂತೇಶ ರೊಡ್ಡನ್ನವರ, ತುಕಾರಾಮ ಬಂಗೇರ, ಈರಯ್ಯ ಮಠದ, ಲಕ್ಷ್ಮಣ ಅಮ್ಮನಗೋಳ, ಚಂದ್ರಗೌಡ ಪಾಟೀಲ, ಮಹಾದೇವ ಕಡಿ, ಬಂಗಾರಪ್ಪ ನನ್ನಾರಿ, ರಾಮಗೌಡ ಪಾಟೀಲ, ವಿಠ್ಠಲ ಪೂಜೇರಿ, ಬಸನಿಂಗಪ್ಪ ಸೋಮನಟ್ಟಿ, ಮಹಾದೇವ ಸುಂಕದ, ಮಹಾದೇವ ದೊಡಮನಿ, ಯಂಕಪ್ಪ ನಾಯ್ಕ ಲಕ್ಷ್ಮವ್ವಾ ಚವ್ಹಾನ್, ಉದ್ದವ್ವ ಚವ್ಹಾನ್, ಸತ್ಯವ್ವ ಕರಿಕಟ್ಟಿ, ಅಕ್ಕವ್ವ ಗುಡಿ ಲಕ್ಷ್ಮಣ ಸೌಂಸುದ್ದಿ ಸೇರಿದಂತೆ ಸ್ಥಳೀಯ ಮುಖಂಡರು, ಯುವಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.