ಅವರ ಕಾರ್ಯಸಾಧನೆಯ ಕನ್ನಡಿ ತೋರಿಸಿದ್ದೇನೆ: ಜಗದೀಶ್ ಶೆಟ್ಟರ್ ಗೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು  

Ravi Talawar
ಅವರ ಕಾರ್ಯಸಾಧನೆಯ ಕನ್ನಡಿ ತೋರಿಸಿದ್ದೇನೆ: ಜಗದೀಶ್ ಶೆಟ್ಟರ್ ಗೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು  
WhatsApp Group Join Now
Telegram Group Join Now
ಬೆಳಗಾವಿ25: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಕಾಂಗ್ರೆಸ್ ಪಕ್ಷದವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎನ್ನುವ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ನಾನೇನು ಅಪಪ್ರಚಾರ ಮಾಡುತ್ತಿಲ್ಲ. ನಾನು ಅವರ ಮುಖಕ್ಕೆ ಕನ್ನಡಿ ತೋರಿಸುತ್ತಿದ್ದೇನೆ ಅಷ್ಟೇ ಎಂದು ಹೆಬ್ಬಾಳಕರ್ ಹೇಳಿದರು.
ನನ್ನ ಜೀವನದಲ್ಲಿ ಇಂತದ್ದನ್ನು ನೋಡಿಲ್ಲ ಎಂದು ಶೆಟ್ಟರ್ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ, ಅವರ ಜೀವನದಲ್ಲಿ ಈ ರೀತಿ ನೋಡಿಲ್ಲ ಎಂದರೆ ಅದಕ್ಕೆ ಉತ್ತರ ಕೊಡಲು ಆಗುವುದಿಲ್ಲ. ಅವರು ಜೀವನದಲ್ಲಿ ಏನು ಮಾಡಿದ್ದಾರೆ ಎಂದು ನಾನು ಕೇಳಲು ಬಯಸುತ್ತೇನೆ. ನಾವು ಬೆಳಗಾವಿಯವರು. ಬೆಳಗಾವಿಯ ಜನರು ಅವರನ್ನು ಹೊರಗೆ ಕಳಿಸಲು ಈಗಾಗಲೆ ನಿರ್ಧಾರ ಮಾಡಿಯಾಗಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಸೋಲಿನ ಹತಾಶೆಯಿಂದ ಈ ರೀತಿ ಸುಳ್ಳು ಹೇಳುತ್ತಿದ್ದಾರೆ ಎನ್ನುವ ಶೆಟ್ಟರ್ ಮಾತಿಗೆ, ಅದು ಜೂನ್ 4ರಂದು ಗೊತ್ತಾಗುತ್ತದೆ ಎಂದರು.
ಎಐಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭೇಟಿ ಕುರಿತು ಪ್ರಶ್ನಿಸಿದಾಗ, ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಯಾವ ರೀತಿಯ ವಾತಾವರಣವಿದೆ, ಕೊನೆಯ ಕ್ಷಣದ ಮಾಹಿತಿ ಏನಿದೆ ಎಂದು ನೋಡಿಕೊಂಡು ಹೋಗಲು ಅವರು ಆಗಮಿಸಿದ್ದಾರೆ. ಅನೇಕ ವಿಷಯಗಳನ್ನು ಅವರೊಂದಿಗೆ ಚರ್ಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
WhatsApp Group Join Now
Telegram Group Join Now
Share This Article