ಬಳ್ಳಾರಿ. ಆ. 06. ತಾಲೂಕಿನ ರೂಪನಗುಡಿ ಗ್ರಾಮದ ಸರ್ಕಾರಿ ಶಾಲೆಯ ಶಾಲಾ 2025-26 ನೇ ಸಾಲಿನ ಅಭಿವೃದ್ಧಿ ಸಮಿತಿಗೆ ಸದಸ್ಯರನ್ನು ಮತ್ತು ಪದಾಧಿಕಾರಿಗಳನ್ನು ಇಂದು ಆಯ್ಕೆ ಮಾಡಲಾಯಿತು ಎಂದು ಶಾಲೆಯ ಮುಖ್ಯ ಗುರುಗಳಾದ ಜ್ಯೋತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಪರಿಶಿಷ್ಟ ಪಂಗಡಕ್ಕೆ ಸೇರಿದ ರಾಮಾಂಜನಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಹಿಂದುಳಿದ ವರ್ಗದ ಲಕ್ಶ್ಮಿ ಇವರುಗಳನ್ನು ಮಾಜಿ ತಾಲೂಕ ಪಂಚಾಯತ್ ಸದಸ್ಯ ಗೋವಿಂದಪ್ಪ ಹಾಗೂ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಗರಾಜ್ ಇವರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು . ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ರಾಮಾಂಜನಿ ಎಲ್ಲಾ ಸದಸ್ಯರನ್ನು ಮತ್ತು ಶಾಲಾ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಸಹಕಾರ ನೀಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಶಂಕ್ರಪ್ಪ ಶಿವಲಿಂಗ, ಮಲ್ಲಿಕಾರ್ಜುನ, ಬಿ ದಾದಾಪೀರ್, ಹನುಮಂತ, ಈ ರಮೇಶ್, ನಾಗರಾಜ ರಾಮಕೃಷ್ಣ, ಉಮಾದೇವಿ, ಶಿಲ್ಪ, ದಿಲ್ಶದ್ ಬೇಗಂ, ಶರ್ಮಾಸ್ ಬಿ, ಲಕ್ಷ್ಮಿ, ಶಶಿಕಲಾ, ಈರಮ್ಮ,ಜ್ಯೋತಿ ಇವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಶಾಲಾ ಮುಖ್ಯ ಗುರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ