ಬಳ್ಳಾರಿ,ಡಿ.09: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಿ.ಬೆಳೆಗಲ್ಲು ತಾಂಡ ಗ್ರಾಮದ ನಿವಾಸಿ ಬಿ.ಬೆಳೆಗಲ್ಲು ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಲಕ್ಷ್ಮಿ ಬಾಯಿ ಚಂದ್ರನಾಯ್ಕ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಸಚಿವರು ಹಾಗೂ ಶಾಸಕರಾದ ಬಿ.ನಾಗೇಂದ್ರರವರ ಸಂಪೂರ್ಣ ಸಹಕಾರದೊಂದಿಗೆ ಆಪ್ತರಾದ ರಾಮು ನಾಯ್ಕ್ ಅವರ ಸಹಕಾರದಿಂದ ಇಂದು ಅದ್ಯಕ್ಷ ಸ್ಥಾನ ಸಿಕ್ಕಿರೋದು ಎಂದು ಅದ್ಯಕ್ಷರು ತಿಳಿಸಿದರು.
ಇದೇ ವೇಳೆ ಮಾತನಾಡಿ ಶಾಸಕರಾದ ಬಿ.ನಾಗೇಂದ್ರರವರ ಆಪ್ತರಾದ ರಾಮುನಾಯಕ್ ಕಾಂಗ್ರೆಸ್ ಪಕ್ಷದಲ್ಲಿ ದುಡಿಯುತ್ತಿರುವುದರಿಂದ ನಮಗೆ ತುಂಬಾ ಖುಷಿಯಾಗಿದೆ.ಅದಕ್ಕಾಗಿ ನಮ್ಮ ಗ್ರಾಮೀಣ ಕ್ಷೇತ್ರದ ಯುವ ನಾಯಕರು ಹಾಗೂ ಶಾಸಕರಾದ ಬಿ.ನಾಗೇಂದ್ರ ಅಣ್ಣನವರಿಗೆ ಅಭಿನಂದನೆಗಳನ್ನ ಸಲ್ಲಿಸುತ್ತೇವೆ ಅಭಿವೃದ್ಧಿಗೆ ಎಲ್ಲರೂ ಮಾರ್ಗದರ್ಶನ ನೀಡುವ ಮೂಲಕ ಸಹಕಾರ ನೀಡಬೇಕೆಂದು ಹೇಳಿ ಅಧ್ಯಕ್ಷರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಾನೆಕುಂಟೆ ಬಸವರಾಜ,ಹರಗಿನದೋಣಿ ಮಹಾರುದ್ರಗೌಡ,ಬಿ.ಬೆಳೆಗಲ್ಲು ಪಂಪನಗೌಡ,ಆಲ್ದಳ್ಳಿ ಬಸವರಾಜ ಗೌಡ,ಬೆಳೆಗಲ್ಲು ತಾಂಡ,ನಾಯಕ ತುಕಾರಾಂ,ಹುಲುಗಪ್ಪ,ಜಂಬುನಾಥ,ಶೀನಾ,ತಿಮ್ಮಪ್ಪ,ಸೇರಿದಂತೆ ಇನ್ನಿತರರಿದ್ದರು.