ಬಳ್ಳಾರಿ. ಜುಲೈ 05. ; ನಗರದ ತಾಳೂರು ರಸ್ತೆಯ ಆಟದ ಮೈದಾನದಲ್ಲಿ ಜುಲೈ 1 2 3 ದಿನಾಂಕದಂದು ನಡೆದ ಬಳ್ಳಾರಿ ಜಿಲ್ಲಾ ಮತ್ತು ತಾಲೂಕು ವೃತ್ತಿ ನಿರತ ಛಾಯಾಗ್ರಾಹಕರ ಹಾಗೂ ಸ್ಟುಡಿಯೋ ಮಾಲೀಕರ ಸಂಘದವತಿಯಿಂದ ನಡೆದ 11ನೇ ವರ್ಷದ ಕ್ರಿಕೆಟ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿತ್ತು ಈ ಪಂದ್ಯದಲ್ಲಿ ವಿಜಯಶಾಲಿಯಾದ 23 ಲೆವೆನ್ ಗೆ ಬಹುಮಾನವನ್ನು ನೀಡಿ ಭಾರತೀಯ ಜನತಾ ಪಕ್ಷದ ನಾಯಕಿ ಲಕ್ಷ್ಮಿ ಅರುಣ ಮಾತನಾಡಿದರು.
ಮೂರು ದಿನಗಳ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ 2-3 ಲೆವೆನ್ ತಂಡ ಹಾಗೂ ರಾಜ ಲೆವೆನ್ ತಂಡ ಮುಖಾಮುಖಿಯಾಗಿ ಪಂದ್ಯ ಆಡಿದರು.
ಇದರಲ್ಲಿ 2 -3ಲೆವೆನ್ ತಂಡವು 10 ಓವರ್ ಮುಕ್ತಾಯಕ್ಕೆ 85ಗಳನ್ನು ರಾಜ ಲೆವೆನ್ ತಂಡಕ್ಕೆ ಗುರಿಯಾಗಿ ನೀಡಿದ್ದರು ಆದರೆ ರಾಜಾ ಲೆವೆನ್ ಗುರಿಯನ್ನು ತಲುಪಲಾಗದೆ ಸೋಲುಪ್ಪಿಕೊಂಡರು. ಛಾಯಾಗ್ರಾಹಕ ದೂದ್ ನೇತೃತ್ವದ ತಂಡ ಟು ತ್ರೀ ಲೆವೆನ್ ತಂಡವು ಜಯಶಾಲಿಯಾಗಿ ಬಹುಮಾನವನ್ನು ಪಡೆದಿರುತ್ತಾರೆ.
ಈ ಕಾರ್ಯಕ್ರಮಕ್ಕೆ ನಗರದ ಬಿಜೆಪಿ ಮುಖಂಡರಾದ ಗಾಲಿ ಲಕ್ಷ್ಮಿ ಅರುಣ ಅವರು ಕ್ರೀಡಾಪಟುಗಳಿಗೆ ಬಹುಮಾನಗಳನ್ನು ವಿತರಿಸಿದರು.
ನಂತರ ಮಾತನಾಡಿದ ಲಕ್ಷ್ಮಿ ಅರುಣ, ಪ್ರತಿಯೊಬ್ಬ ಛಾಯಾಗ್ರಾಕನು ಪ್ರತಿದಿನ ಯಾವುದಾದರೂ ಒಂದು ಆಟದ ಚಟುವಟಿಕೆಯಲ್ಲಿ ಭಾಗಿಯಾಗಲೇಬೇಕು ಅವರ ಆರೋಗ್ಯ ಬಗ್ಗೆ ಒಳ್ಳೆ ಕಾಳಜಿ ಇಟ್ಟುಕೊಳ್ಳಬೇಕು ಕ್ರೀಡೆಗಳು ದೇಹವನ್ನು ಸದೃಢಗೊಳಿಸಿ ಉತ್ತಮ ಆರೋಗ್ಯ ನೀಡುತ್ತವೆ ಎಂದರು.
ಈ ಸಂದರ್ಭದಲ್ಲಿ ಛಾಯಾಗ್ರಾಹಕ ಸಂಘದ ಜಿಲ್ಲಾಧ್ಯಕ್ಷ ಚಂದ್ರಮೋಹನ್ ನಾಡಗೌಡ,ಮತ್ತು ಕೆ ಪಿ ಎ ನಿರ್ದೇಶಕರಾದ ವೀರೇಶ್, ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಬುಡಾ ಮಾಜಿ ಅಧ್ಯಕ್ಷರಾದ ದಮ್ಮೂರ್ ಶೇಖರ್, ಹಾಗೂ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರನಾಥ್ ರೆಡ್ಡಿ, ಜಿಲ್ಲಾ ಖಜಾಂಚಿಯಾದ ಸುಭಾನ್, ಜಿಲ್ಲಾ ಉಪಾಧ್ಯಕ್ಷ ವೀರೇಶ್ ನಾಗಳ್ಳಿ, ತಾಲೂಕು ಉಪಾಧ್ಯಕ್ಷರಾದ ಖಾದರ್, ತಾಲೂಕು ಗೌರವ ಅಧ್ಯಕ್ಷ ಶೇಕ್ ಭಾಷಾ, ಮತ್ತು ಲಕ್ಷ್ಮಿ ರೆಡ್ಡಿ , ಕಾರ್ಯದರ್ಶಿ ಚಂದ್ ಭಾಷಾ ಖಜಾಂಚಿ ಫಿರೋಜ್ , ಸದಸ್ಯರಾದ ದುರ್ಗಣ್ಣ, ತಾಯಣ್ಣ, ಮಲ್ಲಿ, ಸುಲ್ತಾನ್, ದುರ್ಗೇಶ್, ಈ ಕಾರ್ಯಕ್ರಮದ ಆಯೋಜಿಕರಾದ ಚಂದ್ ಭಾಷಾ ಅಬ್ಬೆ ಬಸವ ಮೂಕಾ ದಾದು ಹಾಗೂ ರಾಯಲ್ ಕಲರ್ ಲ್ಯಾಬ್ ಮಾಲೀಕರಾದ ದಾದು, ಪಿ ಆರ್ ಕೆ ಮೂವ್ಮೆಂಟ್ಸ್ ಮಾಲೀಕರು ಮತ್ತು ಲಲಿತ ಫ್ರೆಂಡ್ಸ್ ಮಾಲೀಕರು ಹಾಗೂ ವೃತ್ತಿನಿರತ ಛಾಯಾಗ್ರಾಹಕರು ಸ್ಥಳೀಯರು ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.