ಕಾಂಗ್ರೇಸ್ ಪಕ್ಷ ಹಿಂದುಳಿದ ವರ್ಗ ಕುರುಬರಿಗೆ ಒಂದು ದೊಡ್ಡ ಕೊಡುಗೆ ಕೊಟ್ಟಿದೆ: ಲಕ್ಷ್ಮಣರಾವ ಚಿಂಗಳೆ

Ravi Talawar
ಕಾಂಗ್ರೇಸ್ ಪಕ್ಷ  ಹಿಂದುಳಿದ ವರ್ಗ ಕುರುಬರಿಗೆ ಒಂದು ದೊಡ್ಡ ಕೊಡುಗೆ ಕೊಟ್ಟಿದೆ: ಲಕ್ಷ್ಮಣರಾವ ಚಿಂಗಳೆ
WhatsApp Group Join Now
Telegram Group Join Now
ಸಂಕೇಶ್ವರ,ಏ.06 : ಕಾಂಗ್ರೇಸ್ ಪಕ್ಷವು ಹಿಂದುಳಿದ ವರ್ಗಗಳ ಹಾಗೂ ಕುರುಬ ಜನಾ‌ಂಗದವರಿಗೆ ಒಂದು ದೊಡ್ಡ ಕೊಡುಗೆ ಕೊಟ್ಟಿದೆ, ಸಮಾಜದ ಅಗ್ರಗಣ್ಯ ನಾಯಕರಾದ ಸಿದ್ದರಾಮಯ್ಯನವರನ್ನು ಎರಡನೇ ಬಾರಿ ಮುಖ್ಯ ಮಂತ್ರಿ ಮಾಡಿದ್ದು, ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ಮೂಲಕ ಅವರ ಕೈ ಬಲಪಡಿಸಬೇಕು ಎಂದು ಬೆಳಗಾವಿಯ ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಹೇಳಿದರು.
 ಪಟ್ಟಣದ ಶ್ರೀ ಶಂಕರಲಿಂಗ ಕಾರ್ಯಾಲಯದಲ್ಲಿ ಜರುಗಿದ ಕುರುಬ ಸಮುದಾ ಯದ ಜನ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು  ಸಮಾಜದ ಬಂಧುಗಳು ತಮ್ಮ ತಮ್ಮ ಗ್ರಾಮಗಳಲ್ಲಿ ಹಾಗೂ ಪ್ರದೇಶಗಳಲ್ಲಿ ಸಂಬಂಧಿಕರಿಗೆ ಕಾಂಗ್ರೆಸ್ ಸಾಧನೆಗಳನ್ನು ಹೇಳುವ ಮೂಲಕ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಬೇಕು ಎಂದರು.
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಕೆ.ಎಮ್. ರಾಮಚಂದ್ರಪ್ಪ ಮಾತನಾಡಿ ಹಿಂದುಳಿದ ವರ್ಗಗಳ ನಾಯಕ ಸಚಿವ ಸತೀಶ್ ಜಾರಕಿಹೊಳಿ ಅವರು ಶೋಷಿತ ಸಮಾಜದ ಏಳಿಗೆಗಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪುತ್ರಿ ಪ್ರೀಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ತಂದೆಯವರ ತಕ್ಕಂತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಬಂದಿರುವ ಪ್ರಿಯಾಂಕಾ ಅವರು ಬಡವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದು, ಕ್ಷೇತ್ರದ  ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅವರಿಗೆ ನಮ್ಮ ಬೆಂಬಲವನ್ನು ನೀಡುವುದಾಗಿ ತಿಳಿಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಶೋಷಿತ ಸಮಾಜಗಳ ಒಕ್ಕೂಟದ ಸಂಚಾಲಕರಾದ ಅನಂತ, ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು, ಕಾರ್ಯಾಧ್ಯಕ್ಷರಾದ ಬಸವರಾಜ ಬಸಳಿಗುಂದಿ, ಪ್ರಧಾನ ಕಾರ್ಯದರ್ಶಿಗಳಾದ ಸೋಮಶೇಖರ ಎಮ್, ಖಜಾಂಚಿ ಕೃಷ್ಣ ಮೂರ್ತಿ,ವಿನಾಯಕ ಬಣ್ಣಹಟ್ಟಿ, ರಾಮಕೃಷ್ಣಪ್ಪಾ, ಸುಬ್ರಹ್ಮಣ್ಯ, ನಾಗರಾಜ  ಮುಖಂಡರಾದ ಶಂಕರಾವ ಹೆಗಡೆ, ಎಚ್.ಎಸ್.ನಸಲಾಪೂರೆ, ಡಾ! ಜಯಪ್ರಕಾಶ ಕರಜಗಿ, ಕೆ.ಡಿ.ಪಿ. ಸಮಿತಿಯು ಸದಸ್ಯ ಬಸವರಾಜ ಕೋಳಿ , ದೀಲಿಪ ಹೊಸಮನಿ,ಕರ್ನಾಟಕ ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕರಾದ ಭರಮಣ್ಣಾ ತೋಳಿ, ಕೆಂಪಣ್ಣ ಶಿರಟ್ಟಿ ,ಭರಮಾ ಪೂಜಾರಿ ಸೇರಿದಂತೆ ಅನೇಕರು ಹಾಜರಿದ್ದರು.
WhatsApp Group Join Now
Telegram Group Join Now
Share This Article