ದೇಹದ ಆರೋಗ್ಯ, ಮನಶ್ಶಾಂತಿ ಮತ್ತು ಶಿಸ್ತಿನ ಜೀವನಕ್ಕಾಗಿ ಕ್ರೀಡೆ ಅಗತ್ಯ: ಶಾಸಕ ಲಕ್ಷ್ಮಣ ಸವದಿ

Pratibha Boi
ದೇಹದ ಆರೋಗ್ಯ, ಮನಶ್ಶಾಂತಿ ಮತ್ತು ಶಿಸ್ತಿನ ಜೀವನಕ್ಕಾಗಿ ಕ್ರೀಡೆ ಅಗತ್ಯ: ಶಾಸಕ ಲಕ್ಷ್ಮಣ ಸವದಿ
WhatsApp Group Join Now
Telegram Group Join Now
ಅಥಣಿ: ಕ್ರೀಡೆ ಮಾನವನ ಜೀವನದಲ್ಲಿ ಅತ್ಯಂತ ಮುಖ್ಯವಾದ ಅಂಶವಾಗಿದೆ. ದೇಹದ ಆರೋಗ್ಯ, ಮನಶ್ಶಾಂತಿ ಮತ್ತು ಶಿಸ್ತಿನ ಜೀವನಕ್ಕಾಗಿ ಕ್ರೀಡೆ ಅಗತ್ಯ. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ, ಸಹಕಾರ ಮತ್ತು ದೇಶಭಕ್ತಿ ಬೆಳೆಸುವುದರಲ್ಲಿ ಕ್ರೀಡೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿನ ಅಡಗಿರುವ ಪ್ರತಿಭೆಯನ್ನು ಹೊರತರುತ್ತವೆ. ನಮ್ಮ ವಿದ್ಯಾರ್ಥಿಗಳು ಜಿಲ್ಲಾ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠೆಯನ್ನು ತರುವಂತೆ ಪ್ರೋತ್ಸಾಹಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು
ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಸೋಮವಾರ ಶಾಲಾ ಶಿಕ್ಷಣ ಇಲಾಖೆ ಹಾಗೂ ವರ್ಧಮಾನ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಶಾಸಕ ಲಕ್ಷ್ಮಣ ಸವದಿ ನೆರವೇರಿಸಿ ಮಾತನಾಡಿದ ಅವರು ತಾಲ್ಲೂಕು ಮಟ್ಟದ ಕ್ರೀಡಾಕೂಟವು ಕೇವಲ ಕ್ರೀಡೆಯ ಕಾರ್ಯಕ್ರಮವಲ್ಲ, ಅದು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ವೇದಿಕೆಯಾಗಿದೆ. ಮೊಬೈಲ್ ಯುಗದಲ್ಲಿ ಮಕ್ಕಳು ಕ್ರೀಡೆಯಿಂದ ದೂರವಾಗುತ್ತಿರುವದು ವಿಶಾದನೀಯ ಸಂಗತಿ. ಮಕ್ಕಳಿಗೆ ನಮ್ಮ ದೇಶಿಯ ಕ್ರೀಡೆಗಳ ಕಡೆಗೆ ವಾಲುವಂತೆ ಮಾಡುವದು ಶಿಕ್ಷಣ ಸಂಸ್ಥೆಗಳ ಪ್ರಮುಖ ಕಾರ್ಯವಾಗಿದೆ. ಕ್ಷೇತ್ರದಲ್ಲಿ ಸರಕಾರಿ ಆಂಗ್ಲ ಮಾದ್ಯಮ ಶಾಲೆಗಳನ್ನು ಈ ವರ್ಷದಿಂದಲೆ ಪ್ರಾಂಬೀಸಲಾಗುತ್ತಿದ್ದು, ಕೃಷಿ ಕಾಲೇಜನ್ನು ಬರುವ ಜನೇವರಿಯಲ್ಲಿ ಭೂಮಿ ಪೂಜೆ ನಡೆಸಲು ನಿರ್ಧರಿಸಲಾಗಿದ್ದು ಅದಕ್ಕೆ ಸರಕಾರ ಈಗಾಗಲೆ 560 ಕೋಟಿ ರೂಗಳನ್ನು ಮೀಸಲಿಟ್ಟಿದೆ. ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ದೈಹಿಕವಾಗಿ ಸರ್ವಾಂಗೀಣ ಅಭಿವೃದ್ದಿ ಹೊಂದಬೇಕು ಅನ್ನುವದು ನನ್ನ ಕನಸಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು
ಈ ಸಂದರ್ಭದಲ್ಲಿ ಸಂಕೋನಟ್ಟಿ ಗ್ರಾ ಪಂ ಅಧ್ಯಕ್ಷ ಶಂಕರ ಗಡದೆ, ವರ್ಧಮಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ಅಸ್ಕಿ,  ಎ. ಸಿ. ಪಾಟೀಲ, ರಾಜುಗೌಡ ಪಾಟೀಲ, ಅರುಣ ಯಲಗುದ್ರಿ,  ಅನಂತ ಬಸರಿಕೊಡಿ ಪಿಡಿಓ ಬೀರಪ್ಪ ಕಡ್ಡಗಚ್ಚಿ, ಸೇರಿದಮತೆ ಮುಖಂಡರು ಮತ್ತು ಶಿಕ್ಷಕ ಶಿಕ್ಷಕಿಯರು, ವಿಧ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article