ಮಹಾಲಿಂಗಪುರ ; ವಿಶ್ವ ಬಂಧುತ್ವದ ಮಹತ್ವವನ್ನು ಸ್ವಾಮಿವಿವೇಕಾನಂದರು ಜಗತ್ತಿಗೆ ಪರಿಚಯಿಸಿದರು. ಎಲ್ಲರನ್ನು ಪ್ರೀತಿಯಿಂದ್ ಕಾಣುವುದು ಭಾರತದ ಧರ್ಮವಾಗಿದೆ. ಎಲ್ಲ ಧರ್ಮಗಳು ಇದನ್ನೆ ಹೇಳಿವೆ. ಎಲ್ಲರೂ ಸಮಾನರು, ಮನುಷ್ಯತ್ವದ ಪ್ರೀತಿಯನ್ನು ಎಲ್ಲರೂ ಎತ್ತಿ ಹಿಡಿಯಬೇಕ ಎಂದು ಯುವ ಉದ್ಯಮಿ ಲಕ್ಷ್ಮಣ ನಿರಾಣಿ ಹೇಳಿದರು.
ರನ್ನಬೆಳಗಲಿ ಪಟ್ಟಣದ ಸಿದ್ದಾರೂಢ ಶಂಭುಲಿಂಗ ಆಶ್ರಮದಲ್ಲಿ ನಡೆದ ಮಾಸಿಕ ವೇದಾಂತ ಸಮಾವೇಶದ ಮುಖ್ಯ ಅತಿಥಿಯಾಗಿ ಅಗಮಿಸಿದ ಮಾತನಾಡಿದ ಅವರು ಬಡವರ ಸೇವೆ ದೇವರ ಸೇವೆ,ಶಂಭುಲಿಂಗ ಮಹಾಸ್ವಾಮಿಗಳು ಈ ತತ್ವವನ್ನು ಜೀವನದುದ್ದಕ್ಕೂ ಭೋದಿಸಿದರು. ಮತ್ತು ತಾವು ಕೂಡಾ ಪಾಲೀಸುತ್ತ ಬಂದವರು. ಭಾರತದ ಅದ್ಯಾತ್ಮ ಶಕ್ತಿ ದೊಡ್ಡದು ಎಲ್ಲರೂ ಆಧ್ಯಾತ್ಮದತ್ತ ತಮ್ಮ ಸ್ವಲ್ಪ ಸಮಯವನ್ನಾದರೂ ಮಿಸಲಿಟ್ಟು ಪಾಲೀಸಿದರೆ ಸಂತಸದ ಜೀವನ ಕಳೆಯಬಹುದಾಗಿದೆ ಎಂದರು.
ಸಿದ್ದಾರೂಢ ಟ್ರಸ್ಟ ಕಾರ್ಯದರ್ಶಿ ಬಸವರಾಜ ಪುರಾಣಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶರಣರಾದ ಶಂಕರ ಟಿರ್ಕಿ, ದುಂಡಯ್ಯ ಮೆಟಗುಡ್, ಶರಣೆ ಕಾಶಮ್ಮ ಪುರಾಣಿಕ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಕಮೀಟಿ ಸದಸ್ಯರು ಲಕ್ಷ್ಮಣ ನಿರಾಣಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಎಲ್ಲರನ್ನು ಪ್ರೀತಿಯಿಂದ ಕಾಣಬೇಕು- ಲಕ್ಷ್ಮಣ ನಿರಾಣಿ


