ಬಳ್ಳಾರಿ05..: ಕುವೆಂಪುರವರು ಮರೆಯಲಾಗದ ಮಹಾನುಭಾವರಲ್ಲಿ ಒಬ್ಬರು. ಅವರ ಸಾಧನೆಗಳನ್ನು ಪುಸ್ತಕಗಳು ಮಾತನಾಡುತ್ತವೆ ಎಂದು ಇತಿಹಾಸ ಸಂಶೋಧಕರಾದ ಟಿ.ಎಚ್.ಎಂ.ಬಸವರಾಜ ಅವರು ಅಭಿಪ್ರಾಯಪಟ್ಟರು.
ಇತ್ತೀಚೆಗೆ ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿರುವ ಹೊಂಗಿರಣ ಸಭಾಂಗಣದಲ್ಲಿ ಶ್ರೀ ಮಾರುತಿ ತೊಗಲಗೊಂಬೆ ಕಲಾ ಟ್ರಸ್ಟ್ ಹಮ್ಮಿಕೊಂಡ ವಿಶ್ವಮಾನವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿರುವ ಅವರ ಮನೆ ವಸ್ತು ಸಂಗ್ರಹಾಲಯವಾಗಿದೆ. ಕವಿ ಶೈಲ ನಿಸರ್ಗಧಾಮದಲ್ಲಿ ಅವರ ಸಮಾಧಿ ಇದೆ. ಕನ್ನಡವೇ ಅವರ ಉಸಿರಾಗಿತ್ತು ಎರಡನೇ ರಾಷ್ಟ್ರಕವಿಯಾಗಿ ಎಲ್ಲರ ಮನಗಳಲ್ಲಿ ಮನೆ ಮಾಡಿದ್ದರು ಎಂದರು.
ಗೋವಿಂದ ಪೈ ಅವರು ಮೊಟ್ಟ ಮೊದಲ ರಾಷ್ಟ್ರಕವಿ ಮಂಗಳೂರು ಜಿಲ್ಲೆಯ ಮಂಜೇಶ್ವರದವರು ಇಂದಿಗೂ ಅವರ ಮನೆಯನ್ನು ಗಿಳಿ ವಿಂಡೋ ಕನ್ನಡ ಸಂಶೋಧನಾ ಕೇಂದ್ರವಾಗಿ ಅಲ್ಲಿಯ ಸರ್ಕಾರದವರು ಮಾಡಿದ್ದಾರೆ ಈಗ ಮಂಜೇಶ್ವರ ಕಾಸರಗೋಡು ಜಿಲ್ಲೆಯಲ್ಲಿದೆ. ಅವರ ಕೃತಿಗಳನ್ನು ನಾವು ಓದಬೇಕು ಆಚರಿಸಬೇಕು. ಅವರ ಪುಸ್ತಕಗಳಲ್ಲಿನ ಸಾಹಿತ್ಯವನ್ನು ಮಸ್ತಕದಲ್ಲಿ ಇಟ್ಟುಕೊಳ್ಳಬೇಕೆಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎನ್ ವೀರಭದ್ರಗೌಡ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ ಕುವೆಂಪುರವರನ್ನು ಸ್ಮರಿಸುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು. ಮೊದಲ ರಾಷ್ಟ್ರಕವಿ ಗೋವಿಂದಪ್ಪ ಅವರನ್ನು ಸಹಿತ ಮರೆಯಬಾರದೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠರವರು ಕುವೆಂಪುರವರ ಕೃತಿಗಳ ಬಗ್ಗೆ ವಿವರವಾಗಿ ತಿಳಿಸಿದರು. ಕಲಾವಿದೆ ವೀಣಾ ಕುಮಾರಿ ನಿವೃತ್ತ ಶಿಕ್ಷಕ ಕೆಎಂ ಸಿದ್ದಲಿಂಗಯ್ಯ ಸ್ವಾಮಿ ಜೋಳದ ರಾಶಿ ಬಸವರಾಜ್ ಉಪಸ್ಥಿತರಿದ್ದರು. ಎಲ್ಲಂ ಗೌಡ ಶಂಕರ ಬಂಡೆಯವರಿAದ ಕುವೆಂಪು ರಚಿತ ಗೀತ ಗಾಯನ ನಡೆಯಿತು. ವೀಣಾ ಕುಮಾರಿಯವರಿಂದ ರಂಗ ಗೀತೆಗಳು ಹಾರ್ಮೋನಿಯಂ ಮುದುಕನೂರ್ ತಿಪ್ಪೇಸ್ವಾಮಿ ತಬಲಾ ವಿರೂಪಾಕ್ಷಪ್ಪ ದೇವಲಾಪುರ ತಾಂಡವ ನೃತ್ಯ ಕಲಾ ಟ್ರಸ್ಟ್ ಇವರಿಂದ ಸಮೂಹ ನೃತ್ಯಗಳು ನಡೆದವು.
ವೀಣಾ ಕುಮಾರಿ ಪ್ರಾರ್ಥಿಸಿದರು. ವೀರೇಶ್ ದಳವಾಯಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಟ್ರಸ್ಟ್ ಅಧ್ಯಕ್ಷ ಸುಬ್ಬಣ್ಣ ಮತ್ತು ತುಳಸಿಯವರು ಎಲ್ಲಾ ಗಣ್ಯರನ್ನು ಸನ್ಮಾನಿಸಿ ಗೌರವಿಸಿದರು. ರಮಣಪ್ಪ ಭಜಂತಿ,್ರ ಪಂಪಾಪತಿ ಶ್ರೀಧರ ಗಡ್ಡೆ ಕುಮಾರ್ ಮುಂತಾದದವರು ಇದ್ದರು.


