ಕುಮಾರ್ ಬಂಗಾರಪ್ಪ  ಮನೆಗೆ ಶಿವರಾಜಕುಮಾರ್ ಬೆಂಬಲಿಗರು ಮುತ್ತಿಗೆ

Ravi Talawar
ಕುಮಾರ್ ಬಂಗಾರಪ್ಪ  ಮನೆಗೆ ಶಿವರಾಜಕುಮಾರ್  ಬೆಂಬಲಿಗರು ಮುತ್ತಿಗೆ
WhatsApp Group Join Now
Telegram Group Join Now

ಬೆಂಗಳೂರು, ಜೂನ್​ 08: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜಕುಮಾರ್  ಸೋತ ಬೆನ್ನಲ್ಲೇ ನಟ ಶಿವರಾಜಕುಮಾರ್ ​ ಅವರ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ  ಅವರ ಸದಾಶಿವನಗರ ಮನೆಗೆ ಶಿವಣ್ಣ ಬೆಂಬಲಿಗರು ಮುತ್ತಿಗೆ ಹಾಕಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರೀಕೋನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಯಿಂದ ಸಂಸದ ಬಿವೈ ರಾಘವೇಂದ್ರ, ಕಾಂಗ್ರೆಸ್​ನಿಂದ ನಟ ಶಿವರಾಜಕುಮಾರ್​ ಪತ್ನಿ ಗೀತಾ ಶಿವರಾಜಕುಮಾರ್​ ಮತ್ತು ಬಂಡಾಯ ಅಭ್ಯರ್ಥಿ, ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಸ್ಪರ್ಧಿಸಿದ್ದರು.

ಚುನಾವಣೆಯಲ್ಲಿ ಬಿವೈ ರಾಘವೇಂದ್ರ ಅವರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಬಿವೈ ರಾಘವೇಂದ್ರ ಗೆಲುವಿನ ಬಳಿಕ, ಬಿಜೆಪಿ ನಾಯಕ ಕುಮಾರ್​ ಬಂಗಾರಪ್ಪ ನಟ ಶಿವರಾಜಕುಮಾರ್​ ಅವರ ಬಗ್ಗೆ ಲಘುವಾಗಿ ಬರೆದು ಫೇಸ್​ಬುಕ್​​ನಲ್ಲಿ ಪೋಸ್ಟ್​​ ಹಾಕಿದ್ದು, ಶಿವಣ್ಣ ಅಭಿಮಾನಿಗಳು ಆಕ್ರೋಶಗೊಳ್ಳುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು (ಜೂ.08) ನಟ ಶಿವರಾಜಕುಮಾರ್ ಬೆಂಬಲಿಗರು ಬೆಂಗಳೂರಿನ ಸದಾಶಿವನಗರದಲ್ಲಿರುವ ಕುಮಾರ್​ ಬಂಗಾರಪ್ಪ ಮನೆಗೆ ಮುತ್ತಿಗೆ ಹಾಕಿದ್ದಾರೆ.

 

WhatsApp Group Join Now
Telegram Group Join Now
Share This Article