ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕೆಎನ್ ಶಾಂತ ಕುಮಾರ್ ಅವರ ಉಮೇದುವಾರಿಕೆಯನ್ನು ಚುನಾವಣಾಧಿಕಾರಿ ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಿದ ನಂತರ ಹೈಕೋರ್ಟ್ಗೆ ನಿನ್ನೆ ಅರ್ಜಿ ಸಲ್ಲಿಸಿದ್ದಾರೆ. ಈಗಿನ ಪರಿಸ್ಥಿತಿಯ ಪ್ರಕಾರ, ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಶಾಂತ ಕುಮಾರ್ ಅವರನ್ನು ಬೆಂಬಲಿಸುವ ಟೀಮ್ ಬ್ರಿಜೇಶ್ನ ಅಧಿಕೃತ ಹೇಳಿಕೆಯು, ಕೆಎಸ್ಸಿಎ ಅಧ್ಯಕ್ಷ ಸ್ಥಾನಕ್ಕೆ ಕೆಎನ್ ಶಾಂತ ಕುಮಾರ್ ಅವರ ನಾಮನಿರ್ದೇಶನವನ್ನು ತಿರಸ್ಕರಿಸಲಾಗಿದೆ. ಅವರು ಪ್ರತಿನಿಧಿಸುವ ಕ್ರೀಡಾ ಸಂಸ್ಥೆಯು 200 ರೂಪಾಯಿಗಳ ಚಂದಾದಾರಿಕೆ ಬಾಕಿ ಉಳಿಸಿಕೊಂಡಿದೆ ಎಂಬ ಕ್ಷುಲ್ಲಕ ಕಾರಣ ನೀಡಿದೆ ಎಂದು ಆರೋಪಿಸಿದೆ.
ನ್ಯಾಯಾಲಯದಿಂದ ಪರಿಹಾರ ಸಿಗುವ ವಿಶ್ವಾಸದಲ್ಲಿ ಬ್ರಿಜೇಶ್ ತಂಡ
ದೊಡ್ಡ ಮೊತ್ತದ ಬಿಲ್ ಅಲ್ಲ, ಆರ್ಥಿಕ ಹಗರಣವಲ್ಲ, ಗಮನಾರ್ಹ ಪರಿಣಾಮದ ತಾಂತ್ರಿಕ ಉಲ್ಲಂಘನೆಯೂ ಅಲ್ಲ, ನಾಲ್ಕು ವರ್ಷಗಳಲ್ಲಿ ಕೇವಲ 200 ರೂಪಾಯಿ, ಎಂ.ಜಿ ರೋಡ್ ನಲ್ಲಿ ಎರಡು ಕಪ್ ಫಿಲ್ಟರ್ ಕಾಫಿ ಖರೀದಿಸಲು ಸಾಧ್ಯವಾಗದಷ್ಟು ಅಲ್ಪ ಮೊತ್ತ ಎಂದು ಹೇಳಿಕೆಯಲ್ಲಿ ತಿಳಿಸಿದೆ.


