ಹನೂರು,ಏಪ್ರಿಲ್ 10: : ಹನೂರು ತಾಲ್ಲೂಕಿನ ಲ್ಲೆ ಕ್ರಿಸ್ತರಾಜ ಶಾಲೆ ಪ್ರಥಮ ಸ್ಥಾನ ಪಡೆದಿದೆ ಎಂದು ಆಡಳಿತ ಸಮಿತಿಯವರು ತಿಳಿಸಿದ್ದಾರೆ . ಕಳೆದ ಮಾರ್ಚ್ ತಿಂಗಳು ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಕ್ರಿಸ್ತರಾಜ ಕಾಲೇಜಿನ ವಿದ್ಯಾರ್ಥಿಗಳು ಶೇಕಡಾ 97.18 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದ್ದಾರೆ.



ಪರೀಕ್ಷೆಯನ್ನು ತೆಗೆದುಕೊಂಡಿದ್ದ ಒಟ್ಟು 142 ವಿದ್ಯಾರ್ಥಿಗಳಲ್ಲಿ 138 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 52 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಅತ್ಯುತ್ತಮ ಶ್ರೇಣಿಯಲ್ಲಿ, 79 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 7 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 55 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 54 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅನು ಸಿ 600ಕ್ಕೆ 564 ಅಂಕಗಳನ್ನು, ಲಿಖಿತ ಸಿ ಎಸ್ 558 ಅಂಕಗಳು, ಮಹೇಶ್ವರಿ ಎಂ ಹಾಗೂ ಜೀವಿತ ಎಸ್ 552 ಅಂಕಗಳನ್ನು ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 87 ವಿದ್ಯಾರ್ಥಿಗಳಲ್ಲಿ 84 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶಶಾಂಕ್ 600ಕ್ಕೆ 584 ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾನೆ. ವೀರೇಶ್ 574 ಅಂಕಗಳನ್ನು, ದಿವ್ಯ ಎಂ 570 ಅಂಕಗಳನ್ನು ಪಡೆದಿರುತ್ತಾರೆ.



ಕನ್ನಡ ಭಾಷಾ ವಿಷಯದಲ್ಲಿ ಮಲ್ಲೇಶ್ ಪಿ, ಮಹೇಶ್ವರಿ ಎಂ, ಹೇಮ , ನಾಗವಲ್ಲಿ, ಸಹನ ಎಂ, ವಸಂತಿ ಒಟ್ಟು 6 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಹಾಗೂ ಅರ್ಥಶಾಸ್ತ್ರದಲ್ಲಿ ವೀರೇಶ್ ಎಂಬ ವಿದ್ಯಾರ್ಥಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ವ್ಯವಸ್ಥಾಪಕರಾದ ವಂದನೀಯ ಸ್ವಾಮಿ ರೋಷನ್ ರವರು, ಪ್ರಾಂಶುಪಾಲ ಸಿಸ್ಟರ್ ಜಾನ್ ಶಾಂತಿ ರವರು ಹಾಗೂ ಉಪನ್ಯಾಸಕ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.