ವಿಜಯಪುರ: (ಡಿ.13), ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಹಾಸಭಾದ ರಾಜ್ಯಾಧ್ಯಕ್ಷರಾದ ಡಾ. ಮಂಜುನಾಥ ಭಟ್ ಅವರ ಆದೇಶ ಅನುಸಾರವಾಗಿ ಕೃಷ್ಣಾಜಿ ಕುಲಕರ್ಣಿ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿ ಹೊರಡಿಸಿದ್ದಾರೆ.
ಕೃಷ್ಣಾಜಿ ಬಿ. ಕುಲಕರ್ಣಿ ಅವರು ವಿಜಯಪುರ ಜಿಲ್ಲೆಯ ವಿವಿಧ ಸಂಘಟನೆಯಲ್ಲಿ ಭಾಗಿಯಾಗಿ ಕೆಲಸ ನಿರ್ವಹಿಸಿದ್ದನ್ನು ಪರಿಗಣಿಸಿ, ಒಳ್ಳೆಯಜನಸೇವೆ ಮಾಡಿದ ಅವರನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಹಾಸಭಾದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಬೆಂಗಳೂರಿನಲ್ಲಿ ಕಚೇರಿಯಲ್ಲಿ ಆತ್ಮೀಯವಾಗಿ
ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಮಿಕ ಅಸಂಘಟಿತ ಪುರೋಹಿತ ಸಂಘದ ಜಿಲ್ಲಾಧ್ಯಕ್ಷರಾದ ಗೋವಿಂದ ರಾಜ ದೇಶಪಾಂಡೆ, ಉಪಾಧ್ಯಕ್ಷ ಗುರುರಾಜ ಜೋಶಿ, ಆನಂದ ಕುಲಕರ್ಣಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


