ಜಮಖಂಡಿ; ಬರುವ ತಿಂಗಳು ಅಗಸ್ಟ ೧೬ ಶನಿವಾರದಂದು ಹಿಪ್ಪರಗಿ ಕೃಷ್ಣಾ ನದಿ ಉತ್ತರವಾಹಿನಿ ತೀರದಲ್ಲಿ ಕೃಷ್ಣಾ ಪುಣ್ಯಸ್ನಾನ, ಕುಂಭ ಮೇಳ, ಹಾಗೂ ಕೃಷ್ಣಾರತಿ ಕಾರ್ಯಕ್ರಮವನ್ನು ಮಾಜಿ ಸಚಿವ ಮುರುಗೇಶ ನಿರಾಣಿ ಅವರ ಜನ್ಮದಿನದ ಪ್ರಯುಕ್ತ ಏರ್ಪಡಿಸಲಾಗುವದು ಎಂದು ಎಂ.ಆರ್.ಎನ್ ಫೌಂಡೇಶನ್‌ನ ಮುಖ್ಯಸ್ತ ಉದ್ಯಮಿ, ಸಂಗಮೇಶ ನಿರಾಣಿ ಹೇಳಿದರು. ಮಂಗಳವಾರ ಸಂಜೆ ಹಿಪ್ಪರಗಿ ಸಂಗಮೇಶ್ವರ ಮಹಾರಾಜರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷಕ್ಕಿಂತ ಈ ಬಾರಿದೊಡ್ಡ ಪ್ರಮಾಣದಲ್ಲಿ ಆರತಿ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ರವಿ ಶಂಕರ ಗುರೂಜಿ ಯಂಥಹ ನಾಡಿನ ಅನೇಕ ಸಾಧು ಸಂತರು, ನಾಗಾ ಸಾಧುಗಳು, ರಾಜಕಾರಣಿಗಳು, ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು, ಶಾಸಕರು ಸಾಹಿತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉತ್ತರ ಭಾರತದ ಕಾಶಿ ಯಿಂದ ಗಂಗಾ ಆರತಿ ಮಾಡುವ ನಿಪುಣ ಅರ್ಚಕರ ೪ ತಂಡಗಳು ಕೃಷ್ಣಾ ಆರತಿಯಲ್ಲಿ ಭಾಗವಹಿಸಿ ಆರತಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಒಂದೇ ಕಡೆಯಲ್ಲಿ ಹತ್ತಾರು ಜನ ನಾಗಾಸಾಧುಗಳು, ಅಘೋರಿಗಳ ದರ್ಶನ ಹಾಗೂ ಆಶೀರ್ವಾದದ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ೧೫೦ ಪಲ್ಲಕ್ಕಿಗಳು, ವಿವಿಧ ಕಲಾವಿದ ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಎಂದು ವಿವರಿಸಿದರು.
ದೇಶದ ಮಹಾನ್ ನದಿಗಳಿಗೆ ಸಂಸ್ಕೃತಿಕ, ಆಧ್ಯಾತ್ಮಿಕ ಹಿನ್ನೆಲೆಇದೆ, ಗಂಗಾ, ನರ್ಮದಾ, ಗೋದಾವರಿ, ಕಾವೇರಿ ಮುಂತಾದ ನದಿಗಳ ಉತ್ಸವಗಳು, ಕುಂಭ ಮೇಳಗಳನ್ನು ಅಲ್ಲಿಯ ಸರ್ಕಾರಗಳು ಆಯೋಜಿಸುತ್ತಿವೆ. ಅದು ನಮ್ಮ ನಾಡಿನ ಸಂಸ್ಕೃತಿಯಾಗಿದೆ ಅದರಂತೆ ಕೃಷ್ಣಾ ನದಿಯು ಉತ್ತರ ಕರ್ನಾಟಕದ ಜೀವನದಿ, ಗಂಗೆ, ಕಾವೇರಿ ಮುಂತಾದ ನದಿಗಳಿಗಳಂತೆ ಆಧ್ಯಾತ್ನಿ, ಸಾಂಸ್ಕೃತಿಕ ಹಿನ್ನೆಲೆ ಉಳ್ಳದ್ದಾಗಿದೆ. ಕೃಷ್ಣಾ ನದಿಯ ಕುರಿತು ಅನೇಕ ಧರ್ಮಗ್ರಂಥಗಳಲ್ಲಿ ಪುರಾಣಗಳಲ್ಲಿ ಉಲ್ಲೇಖಗನ್ನು ನೋಡಬಹುದಾಗಿದೆ. ಇಂಥಹ ಪವಿತ್ರವಾದ ನದಿಯ ಉತ್ಸವ ಆರತಿಕಾರ್ಯಕ್ರಮ ಆಯೋಜಿಸಿ ನದಿಯ ಮಹತ್ವದ ಬಗ್ಗೆ ಇಲ್ಲಿಯಜನ ಸಾಮಾನ್ಯರಿಗೆ ತಿಳಿಸಿಕೊಡುವ ಪ್ರಯತ್ನಗಳಾಗಬೇಕಿದೆ ಎಂದು ಹೇಳಿದರು. ಕೃಷ್ಣಾ ಉತ್ಸವ ಉತ್ತರ ಕರ್ನಾಟಕದ ದೊಡ್ಡ ಉತ್ಸವವಾಗಬೇಕು ಎಂಬ ಬಯಕೆ ಇದೆ. ನಮ್ಮೆಲ್ಲರ ಜಿವನಾಡಿಯಾಗಿರುವ ಕೃಷ್ಣೆಯ ಮಹತ್ವ, ನಮ್ಮ ಸಂಸ್ಕೃತಿಯ ಅರಿವು ಮೂಡಿಸುವ ಕೆಲಸವಾಗ ಬೇಕಿದೆ. ೨೦೨೮ ರಲ್ಲಿ ಕೂಡಲ ಸಂಗಮದ ತ್ರಿವೇಣಿ ಸಂಗಮದಲ್ಲಿ ದೇಶವೇತಿರುಗಿ ನೋಡುವಂಥಹ ಭವ್ಯವಾದ ಉತ್ಸವವನ್ನು ಆಯೋಜಿಸಲುಚಿಂತನೆ ನಡೆದಿದೆ ಎಂದು ವಿವರಣೆ ನೀಡಿದರು.
ಕೃಷ್ಣಾ ಮೇಲ್ದಂಡೆಯೋಜನೆ ಸಂಪೂರ್ಣವಾಗಿ ಜಾರಿಯಾಗಬೇಕು, ನಮ್ಮ ಪಾಲಿನ ೪೩೦ ಟಿಎಂಸಿ ನೀರಿನ ಸದ್ಬಳಕೆಯಾಗ ಬೇಕು ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಂತ್ರಿ ಮಹೋದಯರಿಗೆ ಇಲ್ಲಿಯ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಡುವ ಕೆಲಸವಾಗಬೇಕಿದೆ. ಕೊಯಿನಾ ಡ್ಯಾಮ್ ನಿರ್ಮಾಣದ ಕಾಲದಿಂದಲೂ ಉತ್ತರ ಕರ್ನಾಟಕಕ್ಕೆ ನೀರಿನ ಅನ್ಯಾಯವಾಗಿದೆ. ಅನೇಕ ಏತ ನೀರಾವರಿ ಯೋಜನೆಗಳು ಅಡಿಗಲ್ಲು ಹಾಕಿ ಕಾಮಗಾರಿಗಳು ಪೂರ್ಣವಾಗದೇ ಉಳಿದಿವೆ. ಬೆಳಗಾಂವಿ, ರಾಯಚೂರು, ವಿಜಯಪುರ, ಬಾಗಲಕೋಟೆ ಮುಂತಾದ ಜಿಲ್ಲೆಗಳಿಗೆ ಕೃಷ್ಣೆಯ ನೀರು ಹರಿಯ ಬೇಕು ಆದರೆ ಸರ್ಕಾರದ ನಿರ್ಲಕ್ಷ ದಿಂದಾಗಿ ನಮ್ಮ ಭಾಗಕ್ಕೆಅನ್ಯಾಯ ವಾಗುತ್ತಲೇ ಬಂದಿದೆ ಉತ್ತರ ಕರ್ನಾಟಕದರೈತರಿಗೆ ೧೨ ತಿಂಗಳು ನೀರು ಕೊಡುವ ಯೋಜನೆಗಳು ಸಿದ್ಧವಾಗಬೇಕಿದೆ.ಇದಕ್ಕೆ ನಮ್ಮೆಲ್ಲರಲ್ಲಿ ಅಭಿಮಾನದ ಕೊರತೆ ಹಾಗೂ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮೂಲ ಕಾರಣವಾಗಿದೆ ಎಂದು ಹೇಳಿದರು.
ಪೂರ್ವಭಾವಿ ಸಭೆಯ ಸಾನಿಧ್ಯವನ್ನು ಹುಲ್ಯಾಳದ ಹರ್ಷಾನಂದ ಶ್ರೀಗಳು ವಹಿಸಿದ್ದರು. ಸಾಹಿತಿ ಸಿದ್ಧರಾಜ ಪೂಜಾರ, ವೆಂಕಟೇಶ ಜಂಬಗಿ, ಪಿ.ಆರ್.ಪಾಲಬಾಂವಿ, ಸೋಮನಾಥಗೌಡ ಪಾಟೀಲ ಮಾತನಾಡಿದರು. ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ.ಎನ್.ಪಾಟೀಲ, ಚಂದ್ರಶೇಖರ ಆದಪ್ಪಗೋಳ, ಶಂಕರಗೌಡ ಪಾಟೀಲ, ಶಂಕರ ಕಿತ್ತೂರ, ಭೀಮಪ್ಪ ಹನಗಂಡಿ, ಗೊಳಪ್ಪ ಶಿವಪೂಜಿ, ಸಂಗಪ್ಪ ಬಾಗೇವಾಡಿ, ಮಹದೇವ ಕಲ್ಯಾಣಿ, ದಾನಪ್ಪಗೋಳ, ರಾಚಯ್ಯ ಬಂದ್ರದ, ಕಾಖಂಡಕಿ ಶೆಟ್ಟರ, ಮಹದೇವ ದೈಗೋಂಡ, ಅಣ್ಣಪ್ಪ ಕುಂಚನೂರ, ಸಿದ್ಧರಾಜ ಪೂಜಾರ, ಬಸವರಾಜ ದಲಾಲ, ಸೇರಿದಂತೆ ಸುತ್ತಮುತ್ತಲಿನಿ ಗ್ರಾಮಗಳ ಹಿರಿಯರು, ರೈತ ಮುಖಂಡರು, ಸಾಯಿಪ್ರಿಯಾ ಸಕ್ಕರೆಕಾರ್ಖಾನೆಯ ಸಿಬ್ಬಂದಿಗಳು ಭಾಗ ವಹನ ದರು.