ರಾಯಲ್ ಕಾಲೋನಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆ

Ravi Talawar
ರಾಯಲ್ ಕಾಲೋನಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆ
WhatsApp Group Join Now
Telegram Group Join Now
ಬಳ್ಳಾರಿ: 16.  ಧರ್ಮವನ್ನು ಸ್ಥಾಪನೆ ಮಾಡಲು ಶ್ರೀಕೃಷ್ಣ ಜನ್ಮವೆತ್ತಿ‌ ಬರುವ ದಿನ ಶ್ರೀಕೃಷ್ಣ ಜನ್ಮಾಷ್ಟಮಿ.  ಈ ಸುದೀನವನ್ನು ಬಳ್ಳಾರಿಯಲ್ಲಿ ರಾಯಲ್  ಕಾಲೋನಿಯಲ್ಲಿರುವ ಶ್ರೀ ವಿಠ್ಠಲ ಕೃಷ್ಣ ದೇಗುಲದಲ್ಲಿ  ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಬೆಳಿಗ್ಗೆಯೇ ಶ್ರೀಕೃಷ್ಣನನ್ನು ಉಯ್ಯಾಲೆಯಲ್ಲಿ ಹಾಕಿ ತೂಗುವ ಮೂಲಕ ಸುಮಂಗಲೆಯರು ಕೃಷ್ಣನಿಗೆ ಬೆಳಿಗ್ಗೆ ಲಾಲಿ ಹಾಡನ್ನು ಹಾಡಿದರು.   ಪುಟ್ಟ ಪುಟ್ಟ ಮಕ್ಕಳು ಕೂಡ  ಕೃಷ್ಣ ದೇವಸ್ಥಾನದಲ್ಲಿ ನಾಮ ಸ್ಮರಣೆಯ ಕೀರ್ತನೆಗಳನ್ನು ವಿವಿಧ ದೇವರ ಹಾಡುಗಳನ್ನು ಮೂಲಕ ಗಮನ ಸೆಳೆದರು.
ಇನ್ನೂ ಬೆಳಿಗ್ಗೆ  ನೈರ್ಮಲ್ಯ ವಿಸರ್ಜನೆ , ಸುಪ್ರಭಾತ ನಿರ್ಮಲ್ಯಾಭಿಷೇಕ ಬಳಿಕ ಕೃಷ್ಣನಿಗೆ ಆರತಿ ಬೆಳಗಿ ಸ್ವಾಗತಿಸೋದೋ ಸೇರಿದಂತೆ ಮಹಾಭಿಷೇಕ, ಪಂಚಾಮೃತಭಿಷೇಕ
ಮಾಡಲಾಯಿತು. ಗೆಜ್ಜೆ ವಸ್ತ್ರದಲ್ಲಿಕೃಷ್ಣನ ಅಲಂಕಾರವನ್ನು ಅದ್ಧೂರಿಯಾಗಿ ಮಾಡಲಾಗಿತ್ತು.   ಕೃಷ್ಣನ ಉತ್ಸವ ಮೂರ್ತಿಯನ್ನು ನಗರ ಪ್ರದಕ್ಷಿಣೆ ಮಾಡೋ ಮೂಲಕ ಮನೆ ಮನೆಗೂ  ಕರೆದುಕೊಂಡು ಹೋಗಲಾಯಿತು.ಮನೆಗೆ ಬಂದ ಕೃಷ್ಣನ ಉತ್ಸವ ಮೂರ್ತಿಗೆ ಭಕ್ತರು ಹಾಲು ಮೊಸರು ನೀಡಿ ಆರತಿ ಬೆಳಗಿದರು. ಈ ವೇಳೆ ಮಹಿಳೆಯರು ಮಹಿಳೆಯರು ಕೋಲಾಟದ ಜೊತೆಗೆ ಭಕ್ತಿ ಗೀತೆಗಳನ್ನು ಹಾಡೋ ಮೂಲಕ ಸಂಭ್ರಮಿಸಿದರು.
ದಾಸವಾಣಿ ಸಂಗೀತ ಕಾರ್ಯಕ್ರಮಕೃಷ್ಣ ಜನ್ಮಾಷ್ಟಮಿ ನಿಮಿತ್ತ  ಸಂಜೆ ರಾಯಲ್ ಕಾಲೋನಿಯ ಕೃಷ್ಣ ದೇವಸ್ಥಾನದ ಮುಂಭಾಗದಲ್ಲಿರಾಯಚೂರಿನ ಅನೀಶ್ ಮತ್ತವರ ತಂಡದಿಂದ  ಸಂಗೀತ ಕಾರ್ಯಕ್ರಮ ನಡೆಯಿತು ಬ್ರಾಹ್ಮಣಒಕ್ಕೂಟದ ಅಧ್ಯಕ್ಷ  ಪ್ರಕಾಶ ರಾವ್,ಜಿ.ವಿ.‌ಪಟವಾರಿ, ರಘುರಾಮ, ಕೃಷ್ಣ ಮೂರ್ತಿ ಉದಯ, ಪ್ರಾಣೆಶ್, ಚಿದಂಬರ, ರಾಘವೇಂದ್ರ ರಾವ್ , ವೆಂಕಟೇಶ, ಶೋಭಾರಾಣಿ, ಸುನಿತಾ, ಕವಿತಾ, ಮಮತ, ಹರಿಪ್ರಿಯಾ,ವೇದಾವತಿ, ವೀಣಾ, ಲಕ್ಷ್ಮೀ, ರಮಾ, ವಿಜಯಲಕ್ಷ್ಮೀ, ಪೂರ್ಣಿಮಾ, ಸೇರಿದಂತೆ ಇತರರು ಇದ್ದರು.
WhatsApp Group Join Now
Telegram Group Join Now
Share This Article