ಕೃಷ್ಣ ಕೂಳ್ಳಾನಟ್ಟಿ ಅಭಿಮಾನಿ ಬಳಗ ವತಿಯಿಂದ,ರಾಜ್ಯ ಮಟ್ಟದ ಜಂಗಿ ನಿಖಾಲಿ ಕುಸ್ತಿ

Ravi Talawar
ಕೃಷ್ಣ ಕೂಳ್ಳಾನಟ್ಟಿ ಅಭಿಮಾನಿ ಬಳಗ ವತಿಯಿಂದ,ರಾಜ್ಯ ಮಟ್ಟದ ಜಂಗಿ ನಿಖಾಲಿ ಕುಸ್ತಿ
WhatsApp Group Join Now
Telegram Group Join Now
ಧಾರವಾಡ: ಗ್ರಾಮದೇವಿ ಜಾತ್ರೆ ಮಹೋತ್ಸವ ಅಂಗವಾಗಿ ಮನಗುಂಡಿ ಗ್ರಾಮದಲ್ಲಿ ಕೃಷ್ಣ ಕೂಳ್ಳಾನಟ್ಟಿ ಅಭಿಮಾನಿ ಬಳಗ ವತಿಯಿಂದ,ರಾಜ್ಯ ಮಟ್ಟದ ಜಂಗಿ ನಿಖಾಲಿ ಕುಸ್ತಿಗಳು ವಿಜೃಂಭನೆಯಿಂದ ಜರುಗಿದವು.
 ಕುಸ್ತಿ ಕಣಕ್ಕೆ ಪೂಜೆ ಸಲ್ಲಿಸಿರೂಂದಿಗೆ ಪಂದ್ಯಗಳು ಆರಂಭ ಗೂಂಡವು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಮಠ ಮನಗುಂಡಿ ಇವರು ಚಾಲನೆ ನೀಡಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ ಕೃಷ್ಣಾ ಕೂಳ್ಳಾನಟ್ಟಿಯವರು ಮಾತನಾಡಿ ಗ್ರಾಮೀಣ ಕ್ರೀಡೆಗಳು ಈಗ ನಶಿಸಿಸುತ್ತಿವೆ ಇಂತಹ ಸಂದರ್ಭದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿರುವದು ಅರ್ಥಪೂರ್ಣ ವಾಗಿದೆ ಯುವಕರು ದುಶ್ಚಟಗಳಿಗೆ ಅಂಟಿ ಕೂಳ್ಳದೆ ಗ್ರಾಮೀಣ ಕ್ರೀಡೆಯಲ್ಲಿ ಪಾಲ್ಗೊಂಡು ತಮ್ಮ ತಂದೆ ತಾಯಿ ಮತ್ತು ಗ್ರಾಮದ ಹೆಸರು ತರಬೇಕು ಎಂದು ಯುವಕರಿಗೆ ಕರೆ ನೀಡಿದರು.
ಸುಕ್ಷೇತ್ರ ಮನಗುಂಡಿಯ ವೀರಕ್ತ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿಗಳು ಮಾತನಾಡಿ ಸಧೃಡ ದೇಶಕ್ಕಾಗಿ ಇಂಥ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಮತ್ತು ಪ್ರೋತ್ಸಾಹ ಅಗತ್ಯವಾಗಿದೆ. ದೇಶ ಭಾರತವಾಗಿಯೆ ಉಳಿಯಬೇಕೆಂದರೇ ಧಾರ್ಮಿಕ ಕಾಯಕಗಳ ಜತೆಗೆ ದೇಶಿ ಆಟಗಳ ಆಯೋಜನೆ ಮತ್ತು ಪ್ರಚಾರ ಹೆಚ್ಚೆಚ್ಚು ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸಮಾಜವಾದಿಗಳಾದ ಕೃಷ್ಣಾ ಕೊಳ್ಳಾನಟ್ಟಿ ಕಾರ್ಯಗಳು ಶ್ಲಾಘನೀಯವಾಗಿದೆ ಎಂದು ಶ್ರೀಗಳು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರಿಗೆ ಮತ್ತು ಮಾಜಿಪೈಲ್ವಾನ್ ರಿಗೆ  ಮತ್ತು ಕ್ರೀಡಾಪಟುಗಳಿಗೆ ಸನ್ಮಾನಿಸಲಾಯಿತು. ಭಾರೀ ತುರುಸಿನ ಜಿದ್ದಾಜಿದ್ದಿಯಿಂದ ಸೆಣಸಿದ ಕುಸ್ತಿಪಟುಗಳು, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ಥೋಮವನ್ನು  ತಮ್ಮ ಪಟ್ಟುಗಳಿಂದ ರೋಮಾಂಚನಗೊಳ್ಳುವಂತೆ ಅಖಾಡದಲ್ಲಿ ಮಿಂಚಿದರು ಸೇರಿದ ಜನಸ್ಥೋಮ ಹರ್ಷೋದ್ಗಾರ ಮಾಡಿ ಕುಸ್ತಿಪಟುಗಳನ್ನು ಹುರುದುಂಬಿಸಿದರು.
ಅವರ ಸೆನಸಾಟ ಗೆದ್ದು ಬೆಳ್ಳಿ ಗಧೆ ನಗದು ಬಹುಮಾನ ತಮ್ಮದಾಗಿಸಿಕೊಂಡರು. ಜಿಲ್ಲೆಯ ವಿವಿಧ ಭಾಗಗಳಿಂದ  ನೂರಾರು ಕುಸ್ತಿಪಟುಗಳು ಆಗಮಿಸಿದ್ದರು. ,ಮತ್ತು ಮಾಜಿ ಪೈಲ್ವಾನರು ಕ್ರೀಡೆಯಲ್ಲಿ ಭಾಗವಹಿಸಿದ್ದರು .
ಈ ಸಂಧರ್ಭದಲ್ಲಿ ವೇದಿಕೆ ಮೇಲೆ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ವಿರಕ್ತಮಠ ಮನಗುಂಡಿ .ಕೃಷ್ಣಾ ಕೂಳ್ಳಾನಟ್ಟಿ.ಕಲ್ಮೇಶ ಮುಮ್ಮಿಗಟ್ಟಿ.ಅರ್ಜುನ ಪತ್ರನ್ನವರ.ಅಶೋಕ ಪಲ್ವಾನ. ಗುರುನಾಥ ಪಲ್ವಾನ.ಬಸಣ್ಣ ಚಂದರಗಿ.ರಾಜಪೂರ. ರಾಜು ಗಿಡದ ಹುಬ್ಬಳ್ಳಿ. ಪಕ್ಕಿರಣ್ಣ ತಡಸಿನಕೂಪ್ಪ.ಅಜಯ ಕೂಳ್ಳಾನಟ್ಟಿ .ವಿಜಯ ಕೂಳ್ಳಾನಟ್ಟಿ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article