ಬಳ್ಳಾರಿ ಏ 08: ಜಿಲ್ಲೆಯ ಜೋಳ ಖರೀದಿ ಕೇಂದ್ರ ಮತ್ತು ಖರೀದಿ ಕೇಂದ್ರದಲ್ಲಿ ಜೋಳ ತಂದಿರುವ ರೈತರಿಗೆ ಕಾಲಿ ಚೀಲ ಇಲ್ಲಾ ಅಂತ ಅನ್ ಲೋಡ್ ಮಾಡದ ಹಾಗೆ ನಿಂತದ್ದು, ಸಿರುಗುಪ್ಪ ತಾಲ್ಲೂಕು ಖರೀದಿ ಕೇಂದ್ರದಲ್ಲಿ ವ್ಯಾಪಾರಸ್ಥರಿಗೆ ಡೈರೆಕ್ಟ ಆನ್ ಲೋಡ್ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಸಂಗನಕಲ್ಲು ಕೃಷ್ಣ ಅವರು ನಮ್ಮ ಸುದ್ದಿವಾಹಿನಿ ಜೊತೆ ಮಾತನಾಡಿ ಒಂದು ಕ್ವಿಂಟಾಲ್ಗೆ ರೂ. 100/- ರೂಪಾಯಿಗೆ ಮಾಮುಲ್ ಕೊಟ್ಟು ಆನ್ ಲೋಡ್ ಮಾಡಿಕೊಳ್ಳುತ್ತಾರೆ. ಇದರಿಂದ ರೈತರಿಗೆ ತುಂಬಾ ಅನ್ಯಾಯ ಆಗುತ್ತಿದೆ ಬಳ್ಳಾರಿ ಜಿಲ್ಲೆಯ ರೈತರಿಗೆ ಸಹ ಈ ರೀತಿ ಆಗುತ್ತದೆ ಹೊಸದಾಗಿ ನೊಂದಣಿ ಮಾಡಿಕೊಂಡಿಲ್ಲ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕು ಎಂದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಖಜಾಂಚಿ ಆಂದ್ರಳ್ ಕೆ.ಮಾರೆಣ್ಣ ತಿಮ್ಮಪ್ಪ ಶ್ರೀ ರಾಮುಲು ಕೊಳಗಲ್ ಎರ್ರಿಸ್ವಾಮಿತುಕಾರಾಮ್ ಶ್ರೀ ರಾಮ್ ಹಾಗೂ ಬಳ್ಳಾರಿ ಜಿಲ್ಲೆಯ ರೈತರುಗಳು ಉಪಸ್ಥಿತರಿದ್ದರು.