ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನದಿಂದ ಆರ್ಷ ವಿದ್ಯಾಶ್ರಮ ಮಕ್ಕಳ ಶಿಕ್ಷಣಕ್ಕೆ 6 ಲಕ್ಷ.ರೂ ದೇಣಿಗೆ ವಿತರಣೆ

Ravi Talawar
ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನದಿಂದ ಆರ್ಷ ವಿದ್ಯಾಶ್ರಮ ಮಕ್ಕಳ ಶಿಕ್ಷಣಕ್ಕೆ 6 ಲಕ್ಷ.ರೂ ದೇಣಿಗೆ ವಿತರಣೆ
WhatsApp Group Join Now
Telegram Group Join Now

ಬೆಳಗಾವಿ,.01: ಆರ್ಥಿಕವಾಗಿ ಹಿಂದುಳಿದ ಮಕ್ಕಳು ಹಾಗೂ ಅನಾಥ ಮಕ್ಕಳ ಸೇವೆಯಲ್ಲಿ, ಮಹಿಳಾ ಸಬಲೀಕರಣದಲ್ಲಿ  ತೊಡಗಿಸಿಕೊಂಡಿರುವ ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಕಾರ್ಯ ಶ್ಲಾಘನೀಯ. ಮಹಿಳೆಯರು ನಿಜವಾದ ಕರುಣೆಯ ವ್ಯಕ್ತಿತ್ವವುಳ್ಳವರು ಎಂದು ಪರಮ ಪೂಜ್ಯ ಚಿತ್ತಪ್ರಕಾಶಾನಂದ ಸ್ವಾಮೀಜಿ  ಅವರು ಹೇಳಿದರು.

ನಗರದ ಕೆಎಲ್‌ಎಸ್‌  ಐ.ಎಮ್.ಇ. ಆರ್   ಕಾಲೇಜಿನ  ಸಭಾಂಗಣದಲ್ಲಿ  ಕ್ರಾಂತಿ ಮಹಿಳಾ ಮಂಡಳ ,  ಉಮಾ ಸಂಗೀತ ಪ್ರತಿಷ್ಠಾನ, ಹಿಂದವಾಡಿಯ ಈ ಎರಡೂ ಸಂಸ್ಥೆಗಳ ವಾರ್ಷಿಕೋತ್ಸವ ನಿಮಿತ್ತವಾಗಿ ಶ್ರಿ ದಾನೇಶ್ವರಿ ಶಿಕ್ಷಣ  ಟ್ರಸ್ಟ್ ಸಂಕೇಶ್ವರ್ ಸಹಕಾರದಿಂದ ಆಯೋಜಿಸಲಾದ  ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಕಾರ್ಯ ಸೇರಿದಂತೆ ಸಮಾಜ ಸೇವೆಗೆ ಮಹಿಳಾ ಸಂಘಟನೆ ಶ್ರಮಿಸುತ್ತಿರುವುದು ಸಂಸತದ ಸಂಗತಿ.  ಕ್ರಾಂತಿ ಮಹಿಳಾ ಮಂಡಳ , ಉಮಾ ಸಂಗೀತ ಪ್ರತಿಷ್ಠಾನದ ಸಮಾಜಕ್ಕೆ ಮಾದರಿ, ಇನ್ನೂ ಸಮಾಜಸೇವೆ ನಿರಂತರವಾಗಿ ಸಾಗಲಿ ಎಂದು ಚಿತ್ತಪ್ರಕಾಶಾನಂದ ಸ್ವಾಮೀಜಿ ಅವರು ಹಾರೈಸಿದರು.

ವೀರ ನಾರಿ  ಸುಧಾ ಚೌಗುಲಾ ಮಾತನಾಡಿ, ಕ್ರಾಂತಿ ಮಹಿಳಾ ಮಂಡಳವು ಹೆಸರಿನಂತೆ  ಸಮಾಜಸೇವೆ ಮಾಡುತ್ತಿರುವುದು ಸತೀವ ಸಂತೋಷದಾಯಕವಾಗಿದೆ. ನಿಮ್ಮ ಸಂಘಟನೆ ಇಷ್ಟೊಂದು ಶಕ್ತಿಯುತ್ತವಾದ ಬೆಳೆದಿರುವುದು ಉಳಿದ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ದಿವಂಗತ ವೀರಯೋಧ ಶಿವಾನಂದ ಚೌಗುಲಾ ಅವರ ಧರ್ಮಪತ್ನಿ ವೀರ ನಾರಿ ಸುಧಾ ಚೌಗುಲಾ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಕ್ರಾಂತಿ ಮಹಿಳಾ ಮಂಡಳ , ಉಮಾ ಸಂಗೀತ ಪ್ರತಿಷ್ಠಾನದ ವತಿಯಿಂದ ಆರ್ಷ ವಿದ್ಯಾ ಆಶ್ರಮದ 30 ಹೆಣ್ಣು  ಮಕ್ಕಳ   ಶೈಕ್ಷಣಿಕ  ಅಂದರೆ, ಪ್ರಾಥಮಿಕ,  ಮಾಧ್ಯಮಿಕ ಮತ್ತು ಕಾಲೇಜ  ವಿದ್ಯಾಭ್ಯಾಸಕ್ಕೆ ಭರಿಸುವ ಉದ್ದೇಶದಿಂದ   6 ಲಕ್ಷ ರೂ.  ಚೆಕ್‌ನ್ನು ಆರ್ಷ ವಿದ್ಯಾ ಆಶ್ರಮದ ಚಿತ್ತ ಪ್ರಕಾಶಾನಂದ ಸ್ವಾಮೀಜಿಯವರಿಗೆ  ವಿತರಿಸಲಾಯಿತು.

ವಿವಿಧ ಕ್ಷೇತ್ರದ  ಸಾಧಕಿಯರಿಗೆ ಗೌರವ, ಸನ್ಮಾನ: ಈ ವೇಳೆ ದಂಪತಿಗಳಾದ ಜ್ಯೋತಿ , ಅಶೋಕ್ ಬಾದಾಮಿ, ಮತ್ತೋರ್ವ ದಂಪತಿ ಅನಿತಾ  ದತ್ತಾ ಕಣಬರ್ಗಿ ಅವರಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆಗೈದ  ಐದು ಮಹಿಳಾ ಸಾಧಕಿಯರಿಗೆ  ಗೌರವಿಸಲಾಯಿತು. ಸಮಾಜ ಸೇವೆ ಸಲ್ಲಿಸಿದ ಡಾ. ಸವಿತಾ  ದೆಗಿನಾಳ, ಸಂಗೀತ ಕ್ಷೇತ್ರ ದಲ್ಲಿ ಸಾಧನೆಗೈದ  ನಮ್ರತಾ ಜಹಾಗೀರದಾರ ಮತ್ತು ವಿದೂಶಿ,  ನೇತ್ರಾ ಜೋಶಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ   ಕಮಲಾ ಗಣಾಚಾರಿ, ಬಹು ಮುಖ ಪ್ರತಿಭಾವಂತ ಮಹಿಳೆ  ವಿದ್ಯಾ ಹುಂಡೆಕರ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ  ಶ್ರಿ ದಾನೇಶ್ವರಿ ಶಿಕ್ಷಣ  ಟ್ರಸ್ಟ್  ಅಧ್ಯಕ್ಷೆ ಪ್ರಿಯಾಂಕ ಗಡ್ಕರಿ,  ಮಂಡಳದ ಅಧ್ಯಕ್ಷೆ ಮಂಗಲ ಮಠದ ಸ್ವಾಗತಿಸಿದರು.  ಕಾರ್ಯದರ್ಶಿ ರೇಣುಕಾ ಕಾಂಬಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಿಕಾ ಬಿರ್ಜೆ,  ಭಾರತಿ  ಕೆರೂರ್, ರಾಜಶ್ರೀ ಗುರವ,  ಪ್ರಾರ್ಥಿಸಿದರು.  ವಸುಂಧರಾ ದೆಸನೂರ ಅಥಿತಿ ಪರಿಚಯಿಸಿದರು.  ಆಶಾ ಹೊಸಮನಿ   ನಿರೂಪಿಸಿದರು. ಜಯಶ್ರೀ ಟೋಪಗಿ  ವಂದಿಸಿದರು.  ಮಂಡಳದ ಉಪಾಧಕ್ಷ್ಯ ತ್ರಿಶಲಾ ಪಾಯಪ್ಪನವರ  ಹಾಗು ಜ್ಯೋತಿ ಘಾಟಗೆ ಆಶಾ ನಿಲಜಗಿ, ಜ್ಯೋತಿ ಘಾಟಗೆ ಕ್ರಾಂತಿ ಮಹಿಳಾ ಮಂಡಳ ದ ಎಲ್ಲ ಸದ್ಯಸ ರು ಮತ್ತು ಉಮಾ ಸಂಗೀತ ಪ್ರತಿಷ್ಠಾನದ ವಿಧ್ಯಾರ್ಥಿಗಳು ಇತರರು ಇದ್ದರು.  ಉಮಾ ಸಂಗೀತ ಪ್ರತಿಷ್ಠಾನದ ವಿಧ್ಯಾರ್ಥಿಗಳು ಸಂಗೀತ ಕಾರ್ಯಕ್ರಮವನ್ನು ನೆರವೇರಿಸಿದರು. ಕ್ರಾಂತಿ ಮಹಿಳಾ ಮಂಡಳ ದ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.  ಅಲ್ಲದೆ  ಜರ್ಮನ್ ಮತ್ತು ಸ್ಪೇನ್ ದೇಶದ ವಿದೇಶಿ ಮಹಿಳೆಯರಿಬ್ಬರು  ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷ ಮೆರಗನ್ನು ನೀಡಿತು.

WhatsApp Group Join Now
Telegram Group Join Now
Share This Article