ಕೆಪಿಎಸ್‌ಸಿ ಅ‍ಧ್ಯಕ್ಷರ ನೇಮಕಾತಿ ಮಾನದಂಡಗಳು ನಂಗೊತ್ತಿಲ್ಲ: ಸತೀಶ್‌ ಜಾರಕಿಹೊಳಿ

Ravi Talawar
ಕೆಪಿಎಸ್‌ಸಿ ಅ‍ಧ್ಯಕ್ಷರ ನೇಮಕಾತಿ ಮಾನದಂಡಗಳು ನಂಗೊತ್ತಿಲ್ಲ: ಸತೀಶ್‌ ಜಾರಕಿಹೊಳಿ
WhatsApp Group Join Now
Telegram Group Join Now

ಬೆಳಗಾವಿ: ಹೊಸ ಕೆಪಿಸಿಸಿ ಅಧ್ಯಕ್ಷರ ನಾಮನಿರ್ದೇಶನದ ಬಗ್ಗೆ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗಾಗಿ ಯಾವ ಮಾನದಂಡ ಅನುಸರಿಸುತ್ತಿದೆ ಎಂಬ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದರು.

ಮಾಧ್ಯಮ ವರದಿಗಳು ನನ್ನ ಮತ್ತು ಈಶ್ವರ್ ಖಂಡ್ರೆ ಅವರ ಹೆಸರುಗಳನ್ನು ಹರಿಯಬಿಡುತ್ತಿವೆ. ಆದರೆ ಹಿರಿಯ ನಾಯಕರ ನಡುವಿನ ಯಾವುದೇ ಆಂತರಿಕ ಚರ್ಚೆಗಳ ಬಗ್ಗೆ ತನಗೆ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ಕರ್ನಾಟಕ ಭವನದ ಉದ್ಘಾಟನೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಆಹ್ವಾನಿಸದಿರುವ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ,ಕಮ್ಯುನಿಕೇಷನ್ ಗ್ಯಾಪ್ ಆಗಿರಬಹುದು, ಅದು ಪ್ರಮುಖ ಸಮಸ್ಯೆಯಲ್ಲ, ಈ ಬಗ್ಗೆ ಪರಮೇಶ್ವರ ಅವರೊಂದಿಗೆ ಮಾತನಾಡುವುದಾಗಿ ಹೇಳಿದರು.

ಬಿಜೆಪಿ ಸ್ವತಃ ಪೆಟ್ರೋಲ್, ಡೀಸೆಲ್ ಮತ್ತು ಟೋಲ್‌ಗಳ ಬೆಲೆಗಳನ್ನು ಹೆಚ್ಚಿಸಿದೆ. “ಕಳೆದ ದಶಕದಲ್ಲಿ ಇಂಧನ ಬೆಲೆಗಳನ್ನು ಎಷ್ಟು ಬಾರಿ ಹೆಚ್ಚಿಸಲಾಗಿದೆ? ಆ ಸಮಯದಲ್ಲಿ ಬೆಲೆಗಳ ಏರಿಕೆ ವಿರೋಧಿಸಿ ಬಿಜೆಪಿ ಏಕೆ ಪ್ರತಿಭಟಿಸಲಿಲ್ಲ?” ಎಂದು ಪ್ರಶ್ನಿಸಿದರು.

WhatsApp Group Join Now
Telegram Group Join Now
Share This Article