ಕ್ರೆಸ್ಟ್ ಗೇಟ್ಗಳ ನಿರಂತರ ಪರಿಶೀಲನೆ ಮತ್ತು ಅಗತ್ಯ ಕ್ರಮವಹಿಸುವಲ್ಲಿ ಆದ ಲೋಪದಿಂದಾಗಿಯೇ ತುಂಗಭದ್ರಾ ಆಣೆಕಟ್ಟೆಯ 19ನೇ ಗೇಟ್ ಚೈನ್ ಲಿಂಕ್ ಮುರಿದು ಬಿದ್ದು ಆಣೆಕಟ್ಟೆಯಲ್ಲಿನ ನೀರು ಬರಿದು ಮಾಡುವ ಅವಘಡಕ್ಕೆ ಕಾರಣವಾಗಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಆರೋಪಿಸುತ್ತದೆ ಮತ್ತು ಈ ಕೂಡಲೇ ಲೋಪವೆಸಗಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನಿನ ಕ್ರಮವಹಿಸಬೇಕೆಂದು ಆಗ್ರಹಿಸುತ್ತದೆ.
ಕಳೆದ 2019 ರಲ್ಲಿ ಇದೇ ಆಣೆಕಟ್ಟೆಯ ಎಡದಂಡೆ ಮೇಲ್ಮಟ್ಟದ ಕಾಲುವೆಯ ಬಳಿ ಗೇಟ್ ಮುರಿದು ಸಣ್ಣ ಪ್ರಮಾಣದ ಅವಘಡ ಉಂಟಾಗಿ ಅಪಾರ ಪ್ರಮಾಣದ ನೀರು ಪೋಲಾದ ಅನುಭವ ಆಡಳಿತ ಮಂಡಳಿ ಹಾಗು ಅಧಿಕಾರಿಗಳಲ್ಲಿದ್ದರೂ
ಸೂಕ್ತ ನಿರ್ವಹಣೆಯ ಲೋಪ ಮರಳಿ ಉಂಟಾಗಿರುವುದು ಅವರುಗಳ ಬೇಜವಾಬ್ದಾರಿ ನಡೆಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಕರ್ನಾಟಕ ರಾಜ್ಯ ಸಮಿತಿ ಕಟುವಾಗಿ ಟೀಕಿಸುತ್ತದೆ.
ಈ ಅವಘಡವನ್ನು ಸರಿಪಡಿಸಲು ಆಣೆಕಟ್ಟೆಯಲ್ಲಿ ಸಂಗ್ರಹವಾದ ಶೇ 60 ಪ್ರಮಾಣದ 65 ಟಿಎಂಸಿ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ, ಈ ಆಣೆಕಟ್ಟೆಯ ಫಲಾನುಭವಿಗಳಾದ
ಕರ್ನಾಟಕ, ಆಂದ್ರ ಪ್ರದೇಶ ಮತ್ತು ತೆಲಂಗಾಣಾ ರಾಜ್ಯಗಳ ಸುಮಾರು 30 ಲಕ್ಷ ಎಕರೆ ನೀರಾವರಿ ಪ್ರದೇಶದ ರೈತರ ಭವಿಷ್ಯಕ್ಕೆ ತೀವ್ರ ಆತಂಕ ಉಂಟು ಮಾಡಿದೆ.
ತಕ್ಷಣವೇ ಅವಘಡವನ್ನು ಸರಿ ಪಡಿಸಲು ಮತ್ತು ನೀರನ್ನು ಉಳಿಸಿಕೊಳ್ಳಲು ತೀವ್ರ ಕ್ರಮಗಳಾಗದಿದ್ದಲ್ಲಿ ಈ ಮೂರು ರಾಜ್ಯಗಳ ರೈತರು ತಲಾ ಎಕರೆಗೆ ಲಕ್ಷಾಂತರ ರೂ ಬೆಳೆ ನಷ್ಟ ಮಾಡಿಕೊಳ್ಳಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ನೀರು ಸಂಗ್ರಹವಾಗುವ ಭರವಸೆಯೂ ಇಲ್ಲ. ಹೀಗಾಗಿ
ಒಟ್ಟಾಗಿ ಗಮನಿಸುವಾಗ ನಷ್ಠದ ಪ್ರಮಾಣ 30,000 ಕೋಟಿ ರೂಗಳಷ್ಠಾಗಲಿದೆ.
ಅದಾಗಲೆ ಕಳೆದ ವರ್ಷದ ಬರಗಾಲದಿಂದಾಗಿ ಕರ್ನಾಟಕದ ಈ ಭಾಗದ ರೈತರು ನೀರಿನ ಕೊರತೆಯಿಂದ ಬೆಳೆ ನಷ್ಠ ಅನುಭವಿಸಿದ್ದಾರೆ. ಒಕ್ಕೂಟ ಹಾಗೂ ರಾಜ್ಯ ಸರಕಾರಗಳು ಸೂಕ್ತ ಪರಿಹಾರಗಳನ್ನು ನೀಡಿಲ್ಲ. ಮಾತ್ರವಲ್ಲಾ, ಬೆಳೆ ವಿಮೆಯನ್ನು ಸಮರ್ಪಕವಾಗಿ ಸಿಗುವಂತೆ ಕ್ರಮವಹಿಸಿಲ್ಲ. ಹೀಗಾಗಿ, ಈ ಬೆಳೆ ನಷ್ಟವು ಈ ಭಾಗದಲ್ಲಿ ರೈತರ ಆತ್ಮಹತ್ಯೆಗಳನ್ನು ತೀವ್ರವಾಗಿ ಹೆಚ್ಚಿಸಲಿದೆ.
ಆದ್ದರಿಂದ, ರಾಜ್ಯ ಸರಕಾರ ಸಾಲದ ಬಾಧೆಯನ್ನು ತಡೆಯಲು ಅಗತ್ಯ ಕ್ರಮವಹಿಸಬೇಕು. ಮತ್ತು
ಪರಿಸ್ಥಿತಿಯನ್ನು ಸಮರ್ಪಕವಾಗಿ ಅವಲೋಕಿಸಿ, ನದಿಯ ಮೇಲು ಭಾಗದಲ್ಲಿ ನೀರನ್ನು ಸಂರಕ್ಷಿಸಲು ಅಗತ್ಯ ಕ್ರಮವಹಿಸಬೇಕು ಮತ್ತು ಸಮರೋಪಾದಿಯಲ್ಲಿ ಪರಣಿತರೊಂದಿಗೆ ಗೇಟ್ ನಿರ್ವಹಿಸಲು ಮುಂದಾಗುವಂತೆ ಕರ್ನಾಟಕ ಪ್ರಾಂತ ರೈತ ಸಂಘ (KPRS) ಬಲವಾಗಿ ಒತ್ತಾಯಿಸಿದೆ
*ಯು.ಬಸವರಾಜ* KPRS ರಾಜ್ಯ ಉಪಾದ್ಯಕ್ಷರು.. KPRS ಜಿಲ್ಲಾ ಅಧ್ಯಕ್ಷರು..v.s ಶಿವಶಂಕರ್. KPRS ಜಿಲ್ಲಾ ಸಮಿತಿ ಕಾರ್ಯದರ್ಶಿ.. ಗಾಳಿ. ಬಸವರಾಜ್. ಸಿಐಟಿಯು ಜಿಲ್ಲಾ ಸಮಿತಿ ಜಂಟಿ ಕಾರ್ಯದರ್ಶಿ. M. ತಿಪ್ಪೇಸ್ವಾಮಿ.. ಸೋಮಪ್ಪ.ಆಶಿನ್ ಸಾಬು. ಉಪ್ಪಾರ್ ಶಂಕ್ರಪ್ಪ. ರುದ್ರಪ್ಪ. ಗುಳಪ್ಪ. ಕೊಮಾರಪ್ಪ. ಕುರುವಳ್ಳಿ ಸೋಮಯ್ಯ. ಅಮೀನ್ಸ್. ಫಕೀರಪ್ಪ. Dyfi ಜಿಲ್ಲಾ ಸಮಿತಿ ಅಧ್ಯಕ್ಷರು. ಯು. ಎರಿಸ್ವಾಮಿ. ಕಾರೆಕಲ್ಲು ದೊಡ್ಡ ಬಸವನ ಗೌಡ. ಕಟ್ಟೆ ಬಸಪ್ಪ. ಮಸ್ತಾನ್ ಬಾಷಾ. ವೆಂಕಟೇಶ್. ಬೈಲ ಹನುಮಂತ…… ಮೊದಲಾದವರು ಭಾಗವಹಿಸಿದ್ದರು